ಸ್ಯಾಂಡಲ್ವುಡ್ನ ಸಿಂಡ್ರೆಲಾ ರಾಧಿಕಾ ಪಂಡಿತ್, ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿರುವ ನಟಿ. ಸದ್ಯ ಅವರು ತಮ್ಮ ಫ್ಯಾಮಿಲಿ ಜೊತೆ ಬ್ಯುಸಿಯಾಗಿದ್ದಾರೆ. ತಮ್ಮ ಮುದ್ದಾದ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಇರುವ ರಾಧಿಕಾ ಪಂಡಿತ್, ತಮ್ಮ ಕುಟುಂಬದ ಜೊತೆಗಿನ ಮುದ್ದಾದ ಫೋಟೋಗಳನ್ನ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಇದೀಗ ವಿದೇಶದಲ್ಲಿ ತೆಗೆಸಿಕೊಂಡ ಫೋಟೋವೊಂದನ್ನ ರಾಧಿಕಾ ಪಂಡಿತ್, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ʻಯಾವಾಗಲೂ ನಗುತ್ತಿರಿ ಮತ್ತು ನೀವಾಗಿರಿ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಆದ್ರೆ ರಾಧಿಕಾ ಪಂಡಿತ್ ಸದ್ಯ ವಿದೇಶದಲ್ಲಿ ಇಲ್ಲ. ಇದು ಅವರ ಹುಟ್ಟುಹಬ್ಬದ ಸೆಲೆಬ್ರೇಶನ್ಗೆಂದು ವಿದೇಶಕ್ಕೆ ತೆರಳಿದ್ದಾಗ ಕ್ಲಿಕ್ಕಿಸಿಕೊಂಡ ಫೋಟೋ ಎನ್ನಲಾಗ್ತಿದೆ. ಸದ್ಯ ರಾಧಿಕಾ ಅವರ ಕ್ಯೂಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಅಭಿಮಾನಿಗಳು ಫೋಟೋ ನೋಡಿ ಫಿದಾ ಆಗಿದ್ದಾರೆ.
