ಕರ್ನಾಟಕ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ ಹಿಂದುಳಿದವರಿಗೆ (ಮುಸ್ಲಿಮರಿಗೆ) 4 ಪರ್ಸೆಂಟ್ ಮೀಸಲಾತಿ ಕೊಡುವ ನಿರ್ಧಾರ ಪ್ರಕಟ ಮಾಡುತ್ತಿದ್ದ ಹಾಗೆ ಸಿಡಿದು ಕೆಂಡ ಕಾರಿದ ಬಿಜೆಪಿ, ಇದು ಓಲೈಕೆ ರಾಜಕಾರಣ ಎಂದು ಆರೋಪ ಮಾಡಿತ್ತು. ಸದನದಲ್ಲಿ ಪ್ರತಿಭಟನೆಯನ್ನೂ ಮಾಡಿತ್ತು. ರಾಜ್ಯಪಾಲರನ್ನೂ ಭೇಟಿ ಮಾಡಿ ಅವಕಾಶ ಕೊಡದಂತೆ ಮನವಿ ಮಾಡಿತ್ತು. ಆದ್ರೆ ಇದೀಗ ಕೇಸರಿ ಪಡೆ ದೇಶಾದ್ಯಂತ ಮುಸ್ಲಿಮರಿಗೆ ರಂಜಾನ್ ಗಿಫ್ಟ್ ಘೋಷಿಸಿದೆ. ಅದು ಕೂಡ ಪ್ರಧಾನಿ ನರೇಂದ್ರ ಮೋದಿ ಅವ್ರ ಹೆಸರಲ್ಲಿ ಅನ್ನೋದು ವಿಶೇಷ.

ಮುಸ್ಲಿಂ ಸಮುದಾಯಕ್ಕೆ 4 ಪರ್ಸೆಂಟ್ ಗುತ್ತಿಗೆ ಮೀಸಲಾತಿ ಕೊಡಲು ತೀರ್ಮಾನ ಆಗ್ತಿದ್ದಂತೆ ತೀವ್ರವಾಗಿ ಖಂಡಿಸಿದ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಬಜೆಟ್ ಹಲಾಲ್ ಬಜೆಟ್, ಪಾಕಿಸ್ತಾನ್ ಬಜೆಟ್ ಎಂದು ಟೀಕೆಗಳ ಸುರಿಮಳೆ ಸುರಿಸಿದ್ರು. ಪ್ರತಿಭಟನೆನೂ ಮಾಡಿ ಅಸಂವಿಧಾನಕ ತೀರ್ಮಾನ ಅಂತ ವಾಗ್ದಾಳಿ ಮಾಡಿದ್ರು.. ಮುಸ್ಲಿಮರ ವಿಚಾರದಲ್ಲಿ ಬಿಜೆಪಿ ಕೆಂಡ ಕಾರ್ತಿದ್ರೆ, ಅತ್ತ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರು ಮುಸ್ಲಿಂ ಸಮುದಾಯಕ್ಕೆ ರಂಜಾನ್ ಗಿಫ್ಟ್ ಕೊಟ್ಟಿದ್ದಾರೆ. 32 ಲಕ್ಷ ಬಡ ಮುಸ್ಲಿಮರಿಗೆ ‘ಸೌಗತ್-ಇ-ಮೋದಿ’ ಕಿಟ್ ವಿತರಣೆ ಮಾಡ್ತಿದೆ ರಾಷ್ಟ್ರೀಯ ಬಿಜೆಪಿ ಮೈನಾರಿಟಿ ಸೆಲ್.

ಆರ್ಥಿಕವಾಗಿ ದುರ್ಬಲವಾಗಿರುವ ಮುಸ್ಲಿಂ ಕುಟುಂಬಗಳು ಯಾವುದೇ ತೊಂದರೆಯಿಲ್ಲದೇ, ಈದ್ ಆಚರಿಸಬೇಕು. ಅದಕ್ಕಾಗಿ ‘ಸೌಗತ್-ಇ-ಮೋದಿ’ ಹೆಸರಿನಲ್ಲಿ ವಿಶೇಷ ಕಿಟ್ ವಿತರಿಸೋಕೆ ಕೇಂದ್ರ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.. ದೇಶಾದ್ಯಂತ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಹಬ್ಬದ ವಿಶೇಷ ಕಿಟ್ ತಲುಪಿಸ್ತಿದೆ..
ರಂಜಾನ್ ಹಿನ್ನೆಲೆ ಮುಸ್ಲಿಂ ಸಮುದಾಯಕ್ಕೆ ಕೇಂದ್ರ ಬಿಜೆಪಿ ನಾಯಕರು ಅಲ್ಪಸಂಖ್ಯಾತ ವಿಭಾಗದಿಂದ ಸೌಗತ್-ಇ-ಮೋದಿ ಹೆಸರಿನಲ್ಲಿ ವಿಶೇಷ ಗಿಫ್ಟ್ ಕೊಡ್ತಿದ್ದಾರೆ.. ದೇಶಾದ್ಯಂತ 32 ಲಕ್ಷ ಬಡ ಮುಸ್ಲಿಂರಿಗೆ ವಿಶೇಷ ಕಿಟ್ ಸಿಗಲಿದೆ.. ಸೌಗತ್ ಇ ಮೋದಿ ಕಿಟ್‌ನಲ್ಲಿ ಆಹಾರ ಪದಾರ್ಥಗಳ ಜೊತೆಗೆ ಬಟ್ಟೆ, ಹಬ್ಬಕ್ಕೆ ಬೇಕಾದ ಸಾವಿಗೆ, ಖರ್ಜೂರ, ಡ್ರೈ ಫ್ರೂಟ್ಸ್ ಮತ್ತು ಸಕ್ಕರೆ ಇರಲಿದೆ. ಮಹಿಳೆಯರಿಗೆ ನೀಡಲಾಗುವ ಕಿಟ್‌ನಲ್ಲಿ ಕುರ್ತಾ-ಪೈಜಾಮ, ಪುರುಷರ ಕಿಟ್‌ನಲ್ಲಿ ಸೂಟ್ ಬಟ್ಟೆ ಇರಲಿದೆ.. 32 ಸಾವಿರ ಮಸೀದಿಗಳ ಮೂಲಕ ದೇಶಾದ್ಯಂತ ಬಡ ಮುಸ್ಲಿಂ ಕುಟುಂಬಗಳಿಗೆ ಕಿಟ್ ತಲುಪಿಸುವ ಗುರಿ ಹೊಂದಲಾಗಿದೆ..
ಬೃಹತ್ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ದೆಹಲಿಯ ನಿಜಾಮುದ್ದೀನ್‌ನಲ್ಲಿ ಚಾಲನೆ ನೀಡಿದ್ದಾರೆ. ಸೌಗತ್-ಇ-ಮೋದಿ ಅಭಿಯಾನದ ಬಗ್ಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಮಾತನಾಡಿ, ಈದ್, ಬೈಸಾಖಿ, ಗುಡ್ ಫ್ರೈಡೇ, ಭಾರತೀಯ ಹೊಸ ವರ್ಷ ಬರ್ತಿದೆ. ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕಿಟ್ ಕೊಡ್ತಿದ್ದೀವಿ. ‘ಸೌಗಾತ್-ಇ-ಮೋದಿ’ ಕಿಟ್‌ನಲ್ಲಿ ಆಹಾರ ಪದಾರ್ಥಗಳು ಇರಲಿವೆ. ಮನೆಯ ಯಜಮಾನಿಗೆ ಒಂದು ಸೂಟ್ ವಸ್ತು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಹೊಂದಿದೆ ಎಂದಿದ್ದಾರೆ. ಇದು ಮುಸ್ಲಿಮರನ್ನು ಓಲೈಕೆ ಮಾಡುವ ಕೆಲಸ ಅಲ್ಲವೇ ಎಂದು ಕಾಂಗ್ರೆಸ್ ಟೀಕಿಸಿದೆ.