ಬೆಂಗಳೂರಿನ ಪೊಲೀಸರ ಕಾರ್ಯ ವೈಖರಿ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆಯಲು, ‘ಲೋಕಸ್ಪಂದನ’ ‘ಕ್ಯೂ ಆರ್ ಕೋಡ್ ವ್ಯವಸ್ಥೆಯನ್ನ ಈಗ ಜಾರಿಗೆ ತರಲಾಗಿದೆ.
ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವುದಕ್ಕೆ ಬೆಂಗಳೂರಿನ ಪೊಲೀಸರು ಮಹತ್ತರವಾದ ಹೆಜ್ಜೆಯನ್ನ ಇಟ್ಟಿದ್ದಾರೆ. ನಗರದ ಪ್ರತಿಯೊಂದು ಠಾಣೆಯಲ್ಲಿ ಕೂಡ ಕ್ಯೂ ಆರ್ ಕೋಡ್ ಅಳವಡಿಸಲಾಗಿದೆ. ಠಾಣೆಗೆ ಬರುವ ಪೊಲೀಸರು ಠಾಣೆಯಲ್ಲಿನ ಸೇವೆ ಹೇಗಿತ್ತು ಎಂಬ ಕುರಿತು ಮಾಹಿತಿ ನೀಡಬಹುದು, ಆ ಮೂಲಕ ಪೊಲೀಸರ ಬಗ್ಗೆ ಇರುವ ಅಪನಂಬಿಕೆಯನ್ನ ಹೋಗಲಾಡಿಸಬಹುದು, ಇನ್ನು ಈ ಕುರಿತು ಪೊಲೀಸ್ ಇಲಾಖೆಯ ಬಹುದೊಡ್ಡ ನಡೆಗೆ ಬೆಂಗಳೂರಿಗರಿಂದ ಭಾರೀ ಮೆಚ್ಚುಗೆ ಕೂಡ ವ್ಯಕ್ತ ವಾಗುತ್ತಿದೆ.
ಈ ಕುರಿತು ಖ್ಯಾತ ಸಿನಿಮಾ ನಟ ರಮೇಶ್ ಅರವಿಂದ್ ಅವರು ಜಾಗೃತಿಯನ್ನ ಮೂಡಿಸಿದ್ದು, ಲೋಕಸ್ಪಂದನ ಕುರಿತು ಟ್ವಿಟ್ ಮಾಡಿ ಮೆಚ್ಚುಗೆಯನ್ನ ಕೂಡ ವ್ಯಕ್ತ ಪಡಿಸಿದ್ದಾರೆ.
ರಮೇಶ್ ಅರವಿಂದ್ ಅವರು ತಮ್ಮ ಟ್ವಿಟ್‌ನಲ್ಲಿ
“ಲೋಕ ಸ್ಪಂದನ” ನೀವು ಪೊಲೀಸ್ ಠಾಣೆಗೆ ಬರಲು ಭಯ ಪಡುತ್ತೀರಾ? ನಿಮ್ಮ ಬೇಟಿಯ ಉದ್ದೇಶ ಇತ್ಯರ್ಥ ಆಗಲು ಪೊಲೀಸ್ ಅವರು ಬೇರೆ ಏನಾದರೂ ಅಪೇಕ್ಷಿಸಿದರಾ? . ಹಿರಿಯ ಪೊಲೀಸ್ ಅಧಿಕಾರಿಗಳು ನಿಮ್ಮ ಅಭಿಪ್ರಾಯಕ್ಕೆ, ಉತ್ತರಕ್ಕೆ ಕಾಯುತ್ತಿದ್ದಾರೆ. ಸ್ಕ್ಯಾನ್ ಮಾಡಿ… ಸ್ಪಂದಿಸಿ… ಎಂದು ಬರೆದುಕೊಂಡಿದ್ದಾರೆ.
ರಮೇಶ್ ಅರವಿಂದ್ ಅವರ ಈ ಟ್ವಿಟ್‌ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತರು, ತಮ್ಮ ಪ್ರಶಂಸೆಗೆ ಧನ್ಯವಾದಗಳು ರಮೇಶ್ ಅರವಿಂದ್ ರವರೆ… ಎಂದಿದ್ದು ರಮೇಶ್ ಅರವಿಂದ್ ಅವರ ಟ್ವಿಟ್ ಅನ್ನ ರೀಟ್ವಿಟ್ ಮಾಡಿದ್ದಾರೆ.
ಒಟ್ಟಾರೆಯಾಗಿ ಲೋಕಸ್ಪಂದನಾ ಎಂಬ ವಿನೂತನ ಕಾರ್ಯಕ್ಕೆ ನಟ ರಮೇಶ್ ಅರವಿಂದ್ ಜಾಗೃತಿ ಮೂಡಿಸಿರುವುದು ಜನಸಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ.ಇನ್ನು ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಕೂಡ ಪಾರದರ್ಶಕ ನಡೆಗೆ ಸಾಕ್ಷಿಯಾಗುವತ್ತ ಹೆಜ್ಜೆ ಇಡುವುದರಲ್ಲಿ ಅನುಮಾನವಿಲ್ಲ.