ನಟ ಕಿಚ್ಚ ಸುದೀಪ್ ಅವರಿಗೆ 2ನೇ ಬಾರಿ ಕರೋನಾ ಪಾಸಿಟಿವ್ ಎಂಬುದಾಗಿ ಹೇಳಲಾಗುತ್ತಿತ್ತು. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಆದರೆ ಅವರಿಗೆ ಕೋವಿಡ್ ಪಾಸಿಟಿವ್ ಆಗಿಲ್ಲ, ಜಸ್ಟ್ ವೈರಲ್ ಫೀವರ್ ಅಷ್ಟೇ ಎಂಬುದಾಗಿ ನಿರ್ಮಾಪಕ ಜಾಕ್ ಮಂಜು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಾಕ್ ಮಂಜು, ನಟ ಕಿಚ್ಚ ಸುದೀಪ್ ಅವರಿಗೆ ಕರೋನಾ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಸುಳ್ಳು. ಇದೊಂದು ಕೇವಲ ವದಂತಿ ಅಷ್ಟೇ. ಅವರಿಗೆ ಜಸ್ಟ್ ವೈರಲ್ ಫೀವರ್ ಅಷ್ಟೇ. ಇಂದು ನಾಳೆ ವಿಶ್ರಾಂತಿ ಪಡೆದು, ಶುಕ್ರವಾರ ಪ್ರಮೋಷನ್ ಮಾಡಲಿದ್ದಾರೆ. ನಟ ಕಿಚ್ಚ ಸುದೀಪ್ ಅಭಿಮಾನಿಗಳು, ಹಿತೈಷಿಗಳು ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ.