ಕರೋನಾ ಮಹಾಮಾರಿ ಮೊದಲನೇ ಅಲೆಗಿಂತ ಈ ಬಾರಿ ಸೋಂಕಿಗೆ ಬಲಿಯಾದವರ ಸಂಖ್ಯೆ ಹೆಚ್ಚಿದೆ. ರೋಗಿ ಆಸ್ಪತ್ರೆಗೆ ದಾಖಲಾದ ನಂತರ ಆತನಿಗೆ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಕುಟುಂಬಸ್ಥರಿಗೆ ತಿಳಿಯುತ್ತಿಲ್ಲ ಈ ವಿಚಾರ ಕುರಿತು ನವರಸ ನಾಯಕ ಜಗ್ಗೇಶ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರತಿ ರೋಗಿಯ ಮನೆಯವರಿಗೆ ದೂರದಿಂದ ನೋಡಲು (safety measures)ನಲ್ಲಿ ಅವಕಾಶ ನೀಡಬೇಕು..! ಇಲ್ಲದಿದ್ದರೆ ಒಳಗೆ ನಡೆಯುವ ವಿಷಯ ಹೊರಗೆ ಅರಿವಾಗುತ್ತಿಲ್ಲಾ..! ಪ್ರತಿ ಕೋವಿಡ್ ರೋಗಿಗೆ treatment protocol ಇರುತ್ತದೆ.
1)chest ct scan
2)infection monitor stages
3)beginning and after infection
4)inform each stage

ಇದು ಯಾವುದು ಇಲ್ಲದೆ ಅಡ್ಮಿಟ್ ಮಾಡಿಕೊಂಡು ನಂತರ ಯಾವ ವಿಷಯ ಹೊರಗೆ ತಿಳಿಸದೆ ರೋಗಿಯ ಸಾವಿನ ಜೊತೆ ಮನೆಯವರು ಸಾಯುವಂತೆ ಟೆನ್ಷನ್.. ! ಒಳ ಅರಿವಿರದವರು ಸರ್ಕಾರದ ಕಾರ್ಯ ಶ್ರಮ ದೂಷಣೆ ಮಾಡಿ ಸತ್ಯ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ..! ದಯಮಾಡಿ ರೋಗಿ ಮಾನಿಟರ್, ಡಾಕ್ಟರ್ ಹಾಗು ಬಂಧುಗಳಿಗೆ ತಿಳಿಯುವಂತೆ ಪಾರದರ್ಶಕ ವ್ಯೆವಸ್ಥೆ ಮಾಡಬೇಕೆಂದು ಜಗ್ಗೇಶ್ ಸಿ.ಎಂ ಯಡಿಯೂರಪ್ಪಾಗೆ ಟ್ವಿಟರ್ ಮೂಲಕ ಕೇಳಿಕೊಂಡಿದ್ದಾರೆ.
ಕರೋನ ರೋಗಿ ಅಡ್ಮಿಟ್ ಆದ ಎರಡು ಮೂರು ದಿನಕ್ಕೆ ಸಾವು ಸಂಭವಿಸುತ್ತಿದೆ (ಸ್ವಂತ ಅನುಭವ) ಯಾವ ಚಿಕಿತ್ಸೆ ನೀಡುತ್ತಾರೆ ಬಂದುಗಳಿಗೆ ಹೊರಗೆ ತಿಳಿಯದು..! ಸಾವಾಗಿದೆ ಎಂದು ತಿಳಿಸುತ್ತಾರೆ ಮುಖಸಹಿತ ನೋಡಲಾಗದು..! ಬೆರೆಳೆಣಿಸುವ ಕೆಲ ಸಿಬ್ಬಂದಿ ಹೊರತುಪಡಿಸಿ ತಜ್ಞರು ವೈಯುಕ್ತಿಕವಾಗಿ ಸಿಗರು ವಿಷಯ ತಿಳಿಯಲು..! ಎಂದು ಬೇಸರಗೊಂಡಿದ್ದಾರೆ.