ಕೋವಿಡ್‌ ಬಿಕ್ಕಟ್ಟು: ಮೋದಿ ರಾಜಿನಾಮೆಗೆ ಜಾಲತಾಣದಲ್ಲಿ ಕೂಗು

ಭಾರತದಲ್ಲಿ ಕೋವಿಡ್ ಎರಡನೇ ಅಲೆ ವಿನಾಶಕಾರಿಯಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಟ್ವಿಟ್ಟರಿನಲ್ಲಿ #ResignModi ಎನ್ನುವ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿತ್ತು. ಆದರೆ ಆಶ್ಚರ್ಯಕರ ಬೆಳವಣಿಗೆ ಎಂಬಂತೆ, ಪ್ರತಿ ಬಾರಿ ಪ್ರಧಾನಿಯವರನ್ನು ಸಮರ್ಥಿಸುವ ಬಲಪಂಥೀಯ ಟ್ವಿಟರ್ ಪಡೆ ಇದಕ್ಕೆ ಪರ್ಯಾಯ ಹ್ಯಾಶ್‌ಟ್ಯಾಗ್ ಬಳಸದೆ  ಮೌನವಾಗಿ ಟ್ವಿಟರ್ ಟ್ರೆಂಡನ್ನು ಅಂಗೀಕರಿಸಿದಂತೆ ಇತ್ತು.

ಕಳೆದ ಸೋಮವಾರ ಸಂಜೆಯ ಹೊತ್ತಿಗೆ ಈ ಹ್ಯಾಶ್‌ಟ್ಯಾಗ್ ಹೊಂದಿದ 2.38 ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳು ಹರಿದಾಡಿದ್ದವು.‌ ಕೋವಿಡ್ ದಾಳಿಗೊಳಗಾದ ದೇಹಗಳ ಶವಸಂಸ್ಕಾರ, ಬೆಡ್ ಇಲ್ಲದೆ ಆಸ್ಪತ್ರೆಗಳಲ್ಲಿ ಪರದಾಡುವ ರೋಗಿಗಳ ಚಿತ್ರಗಳೊಂದಿಗೆ  ರೋಮನ್ ಚಕ್ರವರ್ತಿ ನೀರೋನಂತೆ ನರೇಂದ್ರ ಮೋದಿ ವರ್ತಿಸುತ್ತಿರುವುದನ್ನು ತೋರುವ ವ್ಯಂಗ್ಯ ಚಿತ್ರಗಳು ಮತ್ತು ಗ್ರಾಫಿಕ್ಸ್ ಸಾವಿರಾರು ಬಾರಿ ರಿ ಟ್ವೀಟ್ ಆಗಿದ್ದವು. ಇವುಗಳಲ್ಲಿ ಹಲವಾರು ಟ್ವೀಟ್‌ಗಳು ಕಾಂಗ್ರೆಸ್, ತೃಣಮೂಲ ಮತ್ತು ಡಿಎಂಕೆ‌ ಪಕ್ಷಗಳಿಗೆ ಸಂಬಂಧಿಸಿರುವ ಟ್ವಿಟರ್ ಹ್ಯಾಂಡಲ್‌ಗಳಿಂದ ಬಂದವುಗಳು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು “ಭಾರತದಲ್ಲಿ  ಕೋವಿಡ್ 19ನ ಹೆಚ್ಚಳವು ನರೇಂದ್ರ ಮೋದಿಯವರ ಸರ್ಕಾರದ ತಪ್ಪು ನಿರ್ಧಾರಗಳ ಪ್ರತಿಫಲವಾಗಿದೆ.‌ ತಯಾರಿಯು ಈಗಲೂ ಹತಾಶ ಸ್ಥಿತಿಯಲ್ಲೇ ಇದೆ !!  ನರೇಂದ್ರ ಮೋದಿ ಅವರು ದೇಶಕ್ಕಿಂತ ದೊಡ್ಡವರು ಎಂದು ಭಾವಿಸಿದ್ದಾರೆ ”ಎಂದು ಇದೇ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು.

ಟ್ವೀಟ್‌ಗಳಲ್ಲಿ ಚಿತೆಗಳು ಹೊತ್ತಿ ಉರಿಯುತ್ತಿರುವಾಗ ಮೋದಿ ಸಂಗೀತ ವಾದ್ಯಗಳನ್ನು ನುಡಿಸುತ್ತಿರುವುದನ್ನು ತೋರಿಸಲಾಗಿದೆ.

ಕಾಂಗ್ರೆಸ್ ವಕ್ತಾರ ರೋಶ್ನಿ ಕುಶಾಲ್ ಜೈಸ್ವಾಲ್ ವಾರಣಾಸಿಯ ಗಂಗಾ ದಡದಲ್ಲಿರುವ ಶ್ಮಶಾನವೊಂದರಲ್ಲಿ ಸ್ವತಃ ವಿಡಿಯೋ ಮಾಡಿದ್ದಾರೆ.  ಬಂಗಾಳದಲ್ಲಿ ರ‌್ಯಾಲಿಗಳನ್ನು ಉದ್ದೇಶಿಸಿ ಮಾತಾನಾಡಿದ ಮೋದಿಯವರ ನಿರ್ಧಾರವನ್ನು ಅವರು ಪ್ರಶ್ನಿಸಿದ್ದಾರೆ.

ಬಂಗಾಳದ ಸಚಿವ ಸುಜಿತ್ ಬೋಸ್ ಹಲವಾರು ಉರಿಯುತ್ತಿರುವ ಚಿತೆಯ ಫೋಟೋವನ್ನು ಟ್ವೀಟ್ ಮಾಡಿ “ಪ್ರಿಯ ಪ್ರಧಾನಿಯವರೇ‌‌ ಕಳೆದ ವರ್ಷ ಮಾರ್ಚ್‌ನಲ್ಲಿ, ಮುಂದಿನ 21 ದಿನಗಳಲ್ಲಿ ಕೋವಿಡ್ ಪರಿಸ್ಥಿತಿ ಮುಗಿಯುತ್ತದೆ ಎಂದು ನೀವು ಭರವಸೆ ನೀಡಿದ್ದಿರಿ. ಆದರೆ ಇದು 2021 ರ ಏಪ್ರಿಲ್‌ನ ಚಿತ್.  ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ.  ಈ ಚಿತ್ರವು ನೀವು ಎಷ್ಟು ಅಸಮರ್ಥರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ” ಎಂದಿದ್ದಾರೆ.

ರಾಷ್ಟ್ರೀಯ ಜನತಾದಳದ ನಾಯಕ ತೇಜ್ ಪ್ರತಾಪ್ ಯಾದವ್ ಅವರು  “ರೋಮ್ ಹೊತ್ತಿ‌ ಉರಿಯುತ್ತಿರುವಾಗ ನೀರೋ ಕೊಳಲು ನುಡಿಸುತ್ತಿದ್ದರು” ಎಂದು ಮೋದಿ‌ ಫೊಟೋ ಬಳಸಿ ಟ್ವೀಟ್ ಮಾಡಿದ್ದಾರೆ.

ಡಿಎಂಕೆ ವೈದ್ಯಕೀಯ ವಿಭಾಗದ ಕಾರ್ಯದರ್ಶಿ ಕನಿಮೋಳಿ ಸೋಮವಾರ ಆರೋಗ್ಯ ಸಚಿವ ಹರ್ಷ್ ವರ್ಧನ್  ಅವರನ್ನು ಉದ್ದೇಶಿಸಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಲಸಿಕೆ ಅಭಿಯಾನವನ್ನು ಹೆಚ್ಚಿಸುವ ವಿಧಾನಗಳ ಬಗ್ಗೆ ಮೋದಿಗೆ ಸಲಹೆ ನೀಡಿದ್ದಾಗ ನೀವು ಅವರ ಸಲಹೆಯನ್ನು ಲೇವಡಿ ಮಾಡಿದ್ದೀರಲ್ಲವೇ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಕಳೆದ ವಾರವೇ ಎಲ್ಲಾ ವಯಸ್ಕ ಭಾರತೀಯರಿಗೆ ಲಸಿಕೆ ಹಾಕಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದುದನ್ನು ತಮಿಳಿ ಸುದ್ದಿ ವಾಹಿನಿಯ ಟ್ವಿಟರ್ ಹ್ಯಾಂಡಲ್ ಸರ್ಕಾರದ ಗಮನಕ್ಕೆ ತಂದಿದೆ.

Related posts

Latest posts

ಇಸ್ರೇಲ್‌ vs ಫೆಲಸ್ತೀನ್: ಯಥಾಸ್ಥಿತಿ ಕಾಪಾಡುವಂತೆ ಭಾರತ ಆಗ್ರಹ

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿ ಕುರಿತಂತೆ ಭಾರತ ತನ್ನ ಹೇಳಿಕೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ದಾಖಲಿಸಿದೆ. ಎರಡೂ ದೇಶಗಳು ಯತಾಸ್ಥಿತಿಯನ್ನು ಕಾಪಾಡಬೇಕೆಂದು ಒತ್ತಾಯಿಸಿರುವ ಭಾರತ, ಪರಸ್ಪರ ರಾಕೆಟ್‌ ದಾಳಿಯನ್ನು ಖಂಡಿಸಿದೆ. ಇಸ್ರೇಲ್‌ ಮತ್ತು ಫೆಲಸ್ತೀನ್‌...

ಕರೋನಾ ಪ್ರಕರಣ ಇಳಿಕೆಯಾಗಿದೆ ಅನ್ನುವುದು ಭ್ರಮೆ, ಭಾರತದ ಅಂಕಿಅಂಶಗಳು ವಿಶ್ವಾಸಾರ್ಹವಲ್ಲ – ತಜ್ಞರ ಕಳವಳ

ಕೋವಿಡ್‌ ಸೋಂಕುಗಳಲ್ಲಿ ಕಳೆದೊಂದು ತಿಂಗಳಿನಿಂದ ತತ್ತರಿಸಿರುವ ಭಾರತ ಕ್ರಮೇಣ ಸೋಂಕಿನ ತೀವ್ರತೆ ಇಳಿಯುತ್ತಿರುವುದಾಗಿ ವರದಿ ಮಾಡುತ್ತಿದೆ. ಅದಾಗ್ಯೂ, ಕೋವಿಡ್‌ ಸಂಬಂಧಿತ ದೈನಂದಿನ ಸಾವಿನ ಪ್ರಮಾಣ ಈಗಲೂ 4 ಸಾವಿರಕ್ಕೂ ಹೆಚ್ಚಿದೆ. ಭಾರತದ ಗ್ರಾಮೀಣ...

ಬ್ಲಾಕ್ ಫಂಗಸ್: ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ, ಉಚಿತ ಚಿಕಿತ್ಸೆ ಕೊಡಿ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಬ್ಲಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ ಸೂಕ್ತ ಅಧಿಸೂಚನೆ ಹೊರಡಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೋವಿಡ್ ನಿಂದಾಗಿ ಸಾವು...