• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಟ ದರ್ಶನ್‌ ತೂಗುದೀಪ ಮಾಡಿದ್ದು ಅಸಹ್ಯಕರ ಸನ್ನೆಯಲ್ಲ…

ಪ್ರತಿಧ್ವನಿ by ಪ್ರತಿಧ್ವನಿ
September 13, 2024
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿಶೇಷ, ಶೋಧ, ಸಿನಿಮಾ
0
Share on WhatsAppShare on FacebookShare on Telegram

ನಟ ದರ್ಶನ್‌ ಅವರು ಕ್ಯಾಮರಾಗಳಿಗೆ ಮಧ್ಯದ ಬೆರಳು ತೋರಿಸಿಲ್ಲ ಎಂದು ಡಿ ಕಂಪನಿ ಅಧಿಕೃತ ಸೋಶಿಯಲ್‌ ಮೀಡಿಯಾ ಪೇಜ್‌ ಸ್ಪಷ್ಟನೆ ನೀಡಿದ್ದಾರೆ. ಡಿ ಬಾಸ್‌ ತಮ್ಮ ಕಷ್ಟಗಳು ದೂರಾಗಲಿ ಎಂದು ವಿಘ್ನ ಹರ ಮುದ್ರೆ ಮಾಡಿದ್ದಾರೆ. ಮಾಧ್ಯಮಗಳ ಅನಗತ್ಯ ಆರೋಪ ಮಾಡುತ್ತಿವೆ ಎಂದು ಡಿ ಕಂಪನಿ ತಿಳಿಸಿದೆ.

ADVERTISEMENT

ನಟ ದರ್ಶನ್‌ ತೂಗುದೀಪ ಬಳ್ಳಾರಿ ಜೈಲಿನಲ್ಲಿ (Ballary Jail)ಮಾಧ್ಯಮಗಳ ಕ್ಯಾಮರಾಗಳಿಗೆ ಮಧ್ಯದ ಬೆರಳು ತೋರಿಸಿ ಅಸಹ್ಯಕರ ಸನ್ನೆ ಮಾಡಿದ್ದರು ಎಂಬ ದೃಶ್ಯ ವೈರಲ್‌ ಬೆನ್ನೆಲ್ಲೆ ನಟದ ಫ್ಯಾನ್‌ಗಳ ಅಧಿಕೃತ ಪುಟ ಡಿ ಕಂಪನಿ ಸ್ಪಷ್ಟನೆ ನೀಡಿದೆ. ಡಿ ಬಾಸ್‌ ಮಾಡಿದ್ದ ವಿಘ್ನ ಹರ ಮುದ್ರೆ ಹೊರತು ಅಸಹ್ಯಕರ ಸನ್ನೆಯಲ್ಲ ಎಂದು ಹೇಳಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ ಗುರುವಾರ ಕುಟುಂಬಸ್ಥರನ್ನು ಭೇಟಿ ಮಾಡಲು ಸೆಲ್‌ನಿಂದ ಹೊರ ಬರುವ ವೇಳೆ ಕ್ಯಾಮರಾಗಳಿಗೆ ಕೈ ಮಧ್ಯದ ಬೆರಳನ್ನು ಮುಂದೆ ಮಾಡಿ ಉಳಿದ ಬೆರಳುಗಳನ್ನು ಮಡಿಚಿಟ್ಟುಕೊಂಡಿದ್ದರು. ಇದು ಅಸಹ್ಯಕರ ಸನ್ನೆ ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದ ಉಂಟು ಮಾಡಿತ್ತು. ದರ್ಶನ್‌ ನಡುವಳಿಕೆ ಸುಧಾರಿಸಿಲ್ಲ ಮಾಧ್ಯಮಗಳು ತನ್ನ ವಿರುದ್ಧ ಸುದ್ದಿ ಬಿತ್ತರ ಮಾಡುತ್ತಿರುವುದಕ್ಕೆ ಈ ರೀತಿ ಅಸಹನೆ ತೋರಿದ್ದಾರೆ ಎನ್ನಲಾಗಿತ್ತು. ಸದ್ಯ ಅಭಿಮಾನಿಗಳ ಸಂಘ ಸ್ಪಷ್ಟನೆ ನೀಡಿದೆ.

ಡಿ ಕಂಪನಿ ಫ್ಯಾನ್‌ ಪೇಜ್‌ ಸ್ಪಷ್ಟನೆ ಏನು?

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿರುವ ಡಿ ಕಂಪನಿ ಅಧಿಕೃತ ಪುಟ, ” ಮಾಧ್ಯಮಗಳು ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ತೂಗುದೀಪ (Box Office Sulthan Challenging Star Darshan Thoogadeepa) ಅವರ ವಿರುದ್ಧ ಸುಖಾ ಸುಮ್ಮನೆ ಇಲ್ಲಸಲ್ಲದ ವಿಚಾರಗಳನ್ನು ಪ್ರಚೋದಿಸಿ ಮನಬಂದಂತೆ ಸುದ್ದಿ ಬಿತ್ತರಿಸುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ಡಿ ಬಾಸ್‌ರವರು (D Boss) ನಡೆದು ಕೊಂಡು ಬರುವಾಗ ವಿಘ್ನ ಹರ ಮುದ್ರಾ ಮಾಡಿಕೊಂಡು ನಡೆದುಕೊಂಡು ಬಂದಿದ್ದನ್ನು ಏನೋ ಅಸಭ್ಯವಾಗಿ ತೋರಿಸಿದರು ಎಂದು ಬಿತ್ತರಿಸುತ್ತಿರುವ ನಿಮಗೆ ನಮ್ಮ ಧಿಕ್ಕಾರ ” ಎಂದಿದ್ದಾರೆ.

 “ಕೆಲ ಮಾಧ್ಯಮಗಳು ಸತ್ಯ ಹೇಳೊದು ನಾವೇ ಉತ್ತಮ ಸಮಾಜ ಕಟ್ಟೊದು ನಾವೇ ನಮ್ಮಿಂದಲೇ ಎಲ್ಲಾ ಅಂತಾ ಬೊಗಳೆ ಬಿಡುವ ಅವರಿಗೆ ಸತ್ಯಾಂಶ ತೋರಿಸದೆ ಮತ್ತೊಬ್ಬರ ಮೇಲೆ ಗೊಬೆ ಕೂರಿಸಿ ಇಲ್ಲ ಸಲ್ಲದ ಸುಳ್ಳುಗಳನ್ನು ತೋರಿಸಿ ಜನರ ದಿಕ್ಕು ತಪ್ಪಿಸಿದಾಗ ಮಾತ್ರ ಹೈಫೈ ಆಫೀಸ್ ಹೈಫೈ ಲೈಫ್ ” ಎಂದು ಬೇಸರ ಹೊರಹಾಕಿದೆ.

ಪತ್ನಿ, ಸಹೋದರ ಭೇಟಿ

ನಟ ದರ್ಶನ್‌ ಅವರನ್ನು ಪತ್ನಿ ವಿಜಯಲಕ್ಷ್ಮಿ, ಸೋದರ ದಿನಕರ್‌ ತೂಗುದೀಪ್‌, ಸಂಬಂಧಿ ಸುಶಾಂತ್‌ ನಾಯ್ಡು, ವಕೀಲ ಸುನೀಲ್‌ ಗುರುವಾರ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಭೇಟಿಯಾದರು. ಆರೋಪಿಯ ನ್ಯಾಯಾಂಗ ಬಂಧನ ಅವಧಿ ಗುರುವಾರ ಮುಕ್ತಾಯ ಹಿನ್ನೆಲೆ ಕಾರಾಗೃಹದಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಮುಂದೆ ದರ್ಶನ್‌ ವಿಚಾರಣೆಗೆ ಹಾಜರಾದರು. ವಿಚಾರಣೆ ಪೂರ್ಣಗೊಂಡ ಬಳಿಕ ಕುಟುಂಬಸ್ಥರ ಬೇಟಿಗೆ ಅವಕಾಶ ನೀಡಲಾಗಿತ್ತು. ಹೈ ಸೆಕ್ಯೂರಿಟಿ ಸೆಲ್‌ (High Security Cell) ನಿಂದ ವಿಸಿಟಿಂಗ್‌ ರೂಮ್‌ಗೆ ಮಧ್ಯಾಹ್ನ 12.26ಕ್ಕೆ ಬಂದ ದರ್ಶನ್‌ ಕುಟುಂಬಸ್ಥರು ಹಾಗೂ ವಕೀಲರೊಂದಿಗೆ ಕೇವಲ 24 ನಿಮಿಷ ಮಾತನಾಡಿದರು.

ಪ್ರಕರಣದ ದೋಷಾರೋಪ ಪಟ್ಟಿಯಲ್ಲಿರುವ ಅಂಶಗಳು, ಸೆಷನ್‌ ನ್ಯಾಯಾಲಯಕ್ಕೆ ಸಲ್ಲಿಸಲಿರುವ ಜಾಮೀನು ಅರ್ಜಿ ಸೇರಿ ಮುಂದಿನ ನ್ಯಾಯಾಂಗ ಹೋರಾಟದ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ. ಪತ್ನಿ ತಂದ ಕಾಮಾಕ್ಯ ದೇವರ ಪ್ರಸಾದ, ಡ್ರೈಫ್ರೂಟ್ಸ್‌ (Dry Fruits), ಬಟ್ಟೆ (Dress), ಬ್ಯಾಗ್‌ (Bag)ಅನ್ನು ಪಡೆದ ದರ್ಶನ್‌ ಸೆಲ್‌ಗೆ ಮರಳಿದರು. ಸಂಜೆ 4ಕ್ಕೆ ವಕೀಲ ಸುನೀಲ್‌ ಹಾಗೂ ಅವರ ತಂಡ ಕಾರಾಗೃಹಕ್ಕೆ ಭೇಟಿ ನೀಡಿತ್ತು. ಹೈ ಸೆಕ್ಯೂರಿಟಿ ಸೆಲ್‌ನಿಂದ ವಿಸಿಟರ್‌ ರೂಮ್‌ಗೆ(Visitor Room) ಜೈಲಾಧಿಕಾರಿಗಳು ಸೇರಿ ಐವರು ಸಿಬ್ಬಂದಿ ಭದ್ರತೆಯಲ್ಲಿ ಬಂದ ದರ್ಶನ್‌ ಮಧ್ಯದ ಬೆರಳನ್ನು(Middle Finger) ತೋರಿಸಿರುವುದು ಚರ್ಚೆಗೆ ಗ್ರಾಸವಾಗಿತ್ತು.

ಕಾರಾಗೃಹದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್‌ ಪರ ವಕೀಲ ಸುನೀಲ್‌, ‘‘ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಜೊತೆ ಚರ್ಚಿಸಿದ್ದೇವೆ. ಚಾರ್ಜ್‌ಶೀಟ್‌ನ ಕೆಲವು ಸಂಶಯಗಳಿದ್ದವು. ಜಾಮೀನು ಅರ್ಜಿ ಸಲ್ಲಿಸುವ ಸಂಬಂಧ ಹಿರಿಯ ವಕೀಲರ ಕತೆ ಚರ್ಚೆ ನಡೆಸುತ್ತೇವೆ.

Tags: Ballary JailChallenging StarDarshanDARSHAN THOOGUDEEPADinakarKannada Film IdustryParappana agraharasandalwoodvijayalakshmi
Previous Post

ಸೆಪ್ಟಂಬರ್ 20ಕ್ಕೆ ಬಿಡುಗಡೆಯಾಗಲಿದೆ ಸಂಜೋತ ಭಂಡಾರಿ ನಿರ್ದೇಶನದ “ಲಂಗೋಟಿ ಮ್ಯಾನ್” .

Next Post

ಸರ್ವಜ್ಞನಗರದಾದ್ಯಂತ ಹಲವಾರು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಕೆಜೆ ಜಾರ್ಜ್.

Related Posts

ಅಸಭ್ಯವಾಗಿ ವೀಡಿಯೋ-ಫೋಟೋ ಚಿತ್ರೀಕರಿಸುವವರ ವಿರುದ್ಧ ನಟಿ ಸಪ್ತಮಿ ಗೌಡ ಅಭಿಯಾನ
ಸಿನಿಮಾ

ಅಸಭ್ಯವಾಗಿ ವೀಡಿಯೋ-ಫೋಟೋ ಚಿತ್ರೀಕರಿಸುವವರ ವಿರುದ್ಧ ನಟಿ ಸಪ್ತಮಿ ಗೌಡ ಅಭಿಯಾನ

by ಪ್ರತಿಧ್ವನಿ
March 4, 2026
0

ನಟಿಯರ ವೀಡಿಯೊ ಹಾಗೂ ಫೋಟೋಗಳನ್ನು ಅಸಭ್ಯವಾಗಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ.ಅಂತಹವರ ವಿರುದ್ಧ ʼಕಾಂತಾರʼ ಸಿನಿಮಾದ ನಟಿ ಸಪ್ತಮಿ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ....

Read moreDetails
₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?

March 4, 2026
ನ್ಯಾಷನಲ್ ಹೆರಾಲ್ಡ್ ಪ್ರಕರಣ:ನಮಗೆ ಸಮನ್ಸ್ ನೀಡಿರುವುದು ಸರಿಯಲ್ಲ: ಡಿ.ಕೆ. ಶಿವಕುಮಾರ್

ಆಂಧ್ರಪ್ರದೇಶದವರು ಈ ಮಟ್ಟಕ್ಕೆ ಹೋಗುತ್ತಾರೆ ಎಂದು ನಾನು ಎಣಿಸಿರಲಿಲ್ಲ‌: ಡಿ.ಕೆ. ಶಿವಕುಮಾರ್

March 4, 2026
ಫೋನ್ ಕದ್ದಾಲಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಫೋನ್ ಕದ್ದಾಲಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ

March 3, 2026
ನಾನು ಸ್ಟ್ರೀಟ್ ಫೈಟರ್, ನಾನು ಸುಮ್ಮನಿದ್ದೇನೆ ಅಂದುಕೊಂಡರೆ ಅವರಿಗೆ ಬಿಟ್ಟದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

ನಾನು ಸ್ಟ್ರೀಟ್ ಫೈಟರ್, ನಾನು ಸುಮ್ಮನಿದ್ದೇನೆ ಅಂದುಕೊಂಡರೆ ಅವರಿಗೆ ಬಿಟ್ಟದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

March 3, 2026
Next Post

ಸರ್ವಜ್ಞನಗರದಾದ್ಯಂತ ಹಲವಾರು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಕೆಜೆ ಜಾರ್ಜ್.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada