• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನ್ಯಾಯ ದೊರೆಯಲಿಲ್ಲ, ಸಾವು ಕಾಯಲಿಲ್ಲ: ಜೈಲಿನಲ್ಲೇ ಕೊನೆಯುಸಿರೆಳೆದ ಫಾದರ್ ಸ್ಟಾನ್ ಸ್ವಾಮಿ!

ಪ್ರತಿಧ್ವನಿ by ಪ್ರತಿಧ್ವನಿ
July 6, 2021
in ದೇಶ
0
ನ್ಯಾಯ ದೊರೆಯಲಿಲ್ಲ, ಸಾವು ಕಾಯಲಿಲ್ಲ: ಜೈಲಿನಲ್ಲೇ ಕೊನೆಯುಸಿರೆಳೆದ ಫಾದರ್ ಸ್ಟಾನ್ ಸ್ವಾಮಿ!
Share on WhatsAppShare on FacebookShare on Telegram

ಭೀಮಾ ಕೋರೇಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಕರ ಯು ಎ ಪಿ ಎ ಕಾಯ್ದೆಯಡಿಯಲ್ಲಿ ಬಂಧಿಸಲ್ಪಟ್ಟಿದ್ದ ಹಿರಿಯ ಮಾನವ ಹಕ್ಕು ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ ಕೊನೆಗೂ ಬಂಧನದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ADVERTISEMENT

ಅವರ ಆರೋಗ್ಯದಲ್ಲಿ ವೈಪರೀತ್ಯ ಕಂಡು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕೂ ಮುನ್ನ ಕಳೆದ ಎಂಟು ತಿಂಗಳುಗಳಿಂದ ಸ್ಟಾನ್ ಸ್ವಾಮಿ ತಲೋಜ ಕೇಂದ್ರೀಯ ಕಾರಾಗ್ರಹದಲ್ಲಿ‌ದ್ದರು.‌

ಅವರು ವೈದ್ಯಕೀಯ ಕಾರಣಗಳಡಿ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂಬಯಿ ಹೈಕೋರ್ಟಿನೆದುರು ಇವತ್ತು ಮಧ್ಯಾಹ್ನ ಎರಡೂವರೆ ಗಂಟೆಗೆ ನಿಗದಿಪಡಿಸಲಾಗಿತ್ತು.‌

ಸ್ಟಾನ್ ಸ್ವಾಮಿಯವರ ವಕೀಲರಾದ ಮಿಹಿರ್ ದೇಸಾಯಿಯವರು ಈ ವಿಷಯವನ್ನು ನ್ಯಾಯಪೀಠಕ್ಕೆ ತಿಳಿಸಿದರು. ಸಾವಿನ ವಿಷಯ ತಿಳಿದ ತಕ್ಷಣ ನ್ಯಾಯಪೀಠವು ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ವಿಷಯ ನ್ಯಾಯಪೀಠದ ಗಮನಕ್ಕೆ ತಂದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಸೂಚಿಸಲಾಗಿತ್ತು ಎಂದೂ ತಿಳಿಸಿದೆ.

‌

ಸುಮಾರು 84 ವರ್ಷದವರಾಗಿದ್ದ ಸ್ಟಾನ್ ಸ್ವಾಮಿ ಪಾರ್ಕಿನ್ಸನ್ ಕಾಯಿಲೆ ಮತ್ತು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು‌. ಇತ್ತೀಚೆಗೆ ಅವರು ಕೋವಿಡ್ 19 ಸೋಂಕಿಗೆ ಒಳಗಾಗಿರುವುದು ಕೂಡಾ ಆಸ್ಪತ್ರೆಯ ಚಿಕಿತ್ಸೆಯ ಸಮಯದಲ್ಲಿ ದೃಢ ಪಟ್ಟಿತ್ತು.

ತನಗೆ ನೀಡಲಾಗುವ ಈ ಚಿಕಿತ್ಸೆಗೆ ತನ್ನ ದೇಹ ಸ್ಪಂದಿಸುತ್ತಿಲ್ಲ, ಬಹುಷಃ ಜಾಮೀನು ಸಿಗುವುದಕ್ಕಿಂತ ಮೊದಲೇ ತಾನು ಬಂಧನದಲ್ಲಿಯೇ ಮರಣ ಹೊಂದಬಹುದು ಎಂದು ಸ್ಟಾನ್ ಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.‌ ಆದಿವಾಸಿಗಳ ಬದುಕುವ ಹಕ್ಕಿಗೆ ಹೋರಾಡುತ್ತಿದ್ದ ಫಾದರ್ ಸ್ಟಾನ್ ಸ್ವಾಮಿ ಇದೀಗ ಜಾಮೀನು ಅರ್ಜಿಯ ವಿಚಾರಣೆಯ ಮೊದಲೇ ತನ್ನ ಬದುಕುವ ಹಕ್ಕಿಗಾಗಿ ಹೋರಾಡುತ್ತಾ ಕೊನೆಯುಸಿರೆಳೆದಿದ್ದಾರೆ.

Tags: Bombay High courtElgar Parishad Casefather stan swamy
Previous Post

ಕೆ.ಆರ್.ಎಸ್ ಬಾಗಿಲಲ್ಲಿ ಸುಮಲತಾರನ್ನು ಮಲಗಿಸಿಬಿಟ್ಟರೆ ಜಲಾಶಯ ಸೋರಿಕೆ ನಿಲ್ಲಬಹುದು: ಕುಮಾರಸ್ವಾಮಿ

Next Post

ಕೋವಿಡ್ ಅನ್ಲಾಕ್ : ನಮ್ಮ ಮೆಟ್ರೋ ರೈಲು ಸೇವೆ ಪುನರಾರಂಭ

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
Next Post
ಕೋವಿಡ್ ಅನ್ಲಾಕ್ : ನಮ್ಮ ಮೆಟ್ರೋ ರೈಲು ಸೇವೆ ಪುನರಾರಂಭ

ಕೋವಿಡ್ ಅನ್ಲಾಕ್ : ನಮ್ಮ ಮೆಟ್ರೋ ರೈಲು ಸೇವೆ ಪುನರಾರಂಭ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!