ಬೆಂಗಳೂರು ನಗರ ಬೇಗೂರು ವಾಸಿಯೊಬ್ಬರು ಆನೇಕಲ್ ತಾಲ್ಲೂಕಿನ ಕೊಡ್ಲು ಗ್ರಾಮದ ಸರ್ವೇ ನಂ-190/5, ರ 38 ಗುಂಟೆ ಜಮೀನಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ಬೆಂಗಳೂರು ನಗರ ಜಿಲ್ಲೆ ರವರ ನ್ಯಾಯಾಲಯದಲ್ಲಿ ರೆವೆನ್ಯೂ ಅಫೀಲ್ ಪ್ರಕರಣವೊಂದು ವಿಚಾರಣೆ ನಡೆಯುತ್ತಿದ್ದು, ಸದರಿ ಪ್ರಕರಣದಲ್ಲಿ ಫಿರಾದುದಾರರ ಪರವಾಗಿ ಆದೇಶ ನೀಡಲು ಉಪ ತಹಶೀಲ್ದಾರ್/ಮ್ಯಾನೇಜರ್ ಶ್ರೀ ಮಹೇಶ್ ರವರು ಫಿರಾದುದಾರರಿಗೆ 5,00,000/- ರೂಗಳ ಲಂಚದ ಬೇಡಿಕೆ ಇಟ್ಟಿರುವ ಕುರಿತಂತೆ ದಿನಾಂಕ: 21.05.2022 ರಂದು ಟ್ರ್ಯಾಪ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಆರೋಪಿತ ಸರ್ಕಾರಿ ನೌಕರರಾದ ಶ್ರೀ ಮಹೇಶ್, 41 ವರ್ಷ, ಉಪ ತಹಶೀಲ್ದಾರ್/ಮ್ಯಾನೇಜರ್, ಜಿಲ್ಲಾಧಿಕಾರಿಗಳ ಕಛೇರಿ, ಬೆಂಗಳೂರು ಇವರ ಪರವಾಗಿ ಶ್ರೀ ಚೇತನ್ ಕುಮಾರ್ @ ಚಂದ್ರು, ಕೋರ್ಟ್ ಅಸಿಸ್ಟೆಂಟ್, ಜಿಲ್ಲಾಧಿಕಾರಿಗಳ ಕಛೇರಿ, ಬೆಂಗಳೂರು ರವರು ಫಿರಾದುದಾರರಿಂದ 5,00,000/- ರೂಗಳ ಲಂಚದ ಹಣವನ್ನು ಪಡೆದುಕೊಂಡಿದ್ದು, ಸದರಿಯವರನ್ನು ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ. ಆರೋಪಿತರನ್ನು ದಸ್ತಗಿರಿ ಮಾಡಿ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.
ಪ್ರಕರಣದಲ್ಲಿನ ಆರೋಪಕ್ಕೆ ಸಂಬಂಧಪಟ್ಟಂತೆ ಶ್ರೀ.ಜೆ ಮಂಜುನಾಥ ಹಿಂದಿನ ಜಿಲ್ಲಾಧಿಕಾರಿಗಳು & ಜಿಲ್ಲಾ ದಂಡಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ರವರನ್ನು ದಿನಾಂಕ: 04.07.2022 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆಪಾದಿತರನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದ್ದು ಹಾಲಿ ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ದಿನ ದಿನಾಂಕ: 05.07.2022 ರಂದು ಶ್ರೀ.ಜೆ ಮಂಜುನಾಥ, ಐ.ಎ.ಎಸ್., ಹಿಂದಿನ ಜಿಲ್ಲಾಧಿಕಾರಿಗಳ ಬೆಂಗಳೂರು ಯಶವಂತಪುರದಲ್ಲಿನ ‘ಸಲಾರ್ ಮರಿಯಾ’ ಅಪಾರ್ಟ್‌ನಲ್ಲಿ ಶೋಧನೆಯನ್ನು ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸಲಾಗಿರುತ್ತದೆ. ಪ್ರಕರಣದ ತನಿಖೆಯನ್ನು ಮುಂದುವರೆಸಲಾಗಿದೆ.