ಗದಗ ಗ್ರಾಮ ಪಂಚಾಯತಿ ಗ್ರೇಟ್ 2 ಸೆಕ್ರೆಟರಿ ಪ್ರದೀಪ್ ಆಲೂರು ಅವರ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ.
ಅಸುಂಡಿ ಪಂಚಾಯ್ತಿಯಲ್ಲಿ ಗ್ರೆಡ್ 2 ಸೆಕ್ರೆಟರಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರದೀಪ್ ಆಲೂರು ಅವರ ಹುಲಕೋಟಿ ಹಾಗೂ ಬೆಂತೂರು ಗ್ರಾಮದಲ್ಲಿರುವ ಮನೆ ಸೇರಿದಂತೆ ಅಸುಂಡಿಯ ಕಚೇರಿ ಮೇಲೆಯೂ ಎಸಿಬಿ ಅಧಿಕಾರಿಗಳ ಶುಕ್ರವಾರ ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು, ಅಧಿಕಾರಿಗಳು ಕಡತ ಪರಿಶೀಲನೆ ನಡೆಸಿದರು. ಪ್ರದೀಪ್ ಸಂಬಂಧಿಕರ ಧಾರವಾಡದ ಮನೆಯಲ್ಲಿಯೂ ಎಸಿಬಿ ಶೋಧ ನಡೆಸಿದರು.
ಎಸಿಬಿ ಡಿವೈಎಸ್ ಪಿ ಎಮ್. ವಿ. ಮಲ್ಲಾಪುರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿ ಹೆಸರಲ್ಲಿದ್ದ ಅರ್ಧ ಕೆಜಿ ಚಿನ್ನ, ಅಪಾರ ಪ್ರಮಾಣದ ಆಸ್ತಿ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರದೀಪ್ ಸಹೋದರರ ಹೆಸರಲ್ಲಿ 25 ಎಕರೆ ಜಮೀನು, 6 ಸೈಟ್ ಇದೆ ಎಂದು ತಿಳಿದುಬಂದಿದೆ.
ಹುಲಕೋಟೆ ಮನೆಯಲ್ಲಿ 90 ಗ್ರಾಂ ಚಿನ್ನ ಪತ್ತೆಯಾಗಿದೆ. ಧಾರವಾಡದ ಹೆಬ್ಬಳ್ಳಿಯ ಪ್ರದೀಪ್ ಸಹೋದರನ ಮನೆಯಲ್ಲಿ 500 ಗ್ರಾಂ ಚಿನ್ನ ದೊರೆತಿದೆ ಎಂದು ಹೇಳಲಾಗಿದೆ. ಗದಗ ಹಾಗೂ ಯಾದಗಿರಿಯ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆಸಿದ್ದಾರೆ.