ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಬಲಿಕಾ ಬಕ್ರಾ ಮಾಡಲು ಕಾಂಗ್ರೆಸ್ ಪಕ್ಷದ ಘಟಬಂಧನ್ ನಾಯಕರು ಹೊರಟಿದ್ದಾರೆ ಎಂದು ಕೋಲಾರ ಎಎಪಿ ಟಿಕೆಟ್ ಆಕಾಂಕ್ಷಿ ಸುಹೈಲ್ ದಿಲ್ ನವಾಜ್ ಟೀಕಿಸಿದ್ದಾರೆ.
ಕ್ಷೇತ್ರ ಹುಡುಕಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ತೆರೆ ಎಳೆದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸುಹೈಲ್ ಕಾಂಗ್ರೆಸ್ ಪಕ್ಷದ ಶಾಸಕರುಗಳು ಮುಖಂಡರುಗಳು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರ ಬಳಿ ಹೋಗಲು ಮುಖ ಇಲ್ಲ,ಆದರಿಂದ ದೊಡ್ಡ ಮರದ ನೆರಳು ಅವರಿಗೆ ಬೇಕಾಗಿದ್ದು,ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಂಬ ಬೃಹತ್ ಮರ ಕರೆತಂದು ಅವರುಗಳ ಬೇಳೆ ಬೇಯಿಸಿ ಕೊಳ್ಳಲು ಘಟಬಂಧನ್ನ ಮುಖಂಡರು ಶಥಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ನವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ನನ್ನ ಗೆಲುವಿಗೆ ತೊಂದರೆ ಇಲ್ಲ,ಸ್ಪರ್ಧೆ ಮಾಡಲು ಅಲ್ಪಸಂಖ್ಯಾತರ ವಿರೋಧ ಇದೆ. ಸಿದ್ದರಾಮಯ್ಯನವರಿಗೆ ಕೋಲಾರದಲ್ಲಿ ಸ್ಪರ್ಧೆ ಮಾಡಲು ಇಷ್ಟ ಇಲ್ಲದಿದ್ದರೂ ಬಲವಂತವಾಗಿ ಕರೆ ತರುವ ಪ್ರಯತ್ನ ಮಾಡಲಾಗಿದೆ ಕಳೆದ ಸಂಸದರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪನವರನ್ನು ಸೋಲಿಸಿ ಬಿ.ಜೆ.ಪಿ ಯ ಮುನಿಸ್ವಾಮಿ ರವರನ್ನು ಗೆಲ್ಲಿಸಿದರು.ಈ ಬಾರಿ ಸಿದ್ದರಾಮಯ್ಯ ರವರನ್ನು ಬಲಿಕಾ ಬಕ್ರಾ ಮಾಡಲು ಹೊರಟಿದ್ದಾರೆಂದು ಎಂದು ಛೇಡಿಸಿದ್ದಾರೆ.
ಅಲ್ಪಸಂಖ್ಯಾತರ ಮತಗಳು ಎಂ.ಎಲ್.ಸಿ.ಅನಿಲ್ ಕುಮಾರ್ ಹಾಗೂ ನಿಸಾರ್ ಅಹ್ಮದ್ ರವರ ಮನೆ ಮತಗಳಲ್ಲ,ಕನಿಷ್ಠ 100 ಮತಗಳನ್ನು ಅವರ ಬೂತ್ ನಲ್ಲಿ ಅನಿಲ್ ಕುಮಾರ್ ಹಾಕಿಸಿಲ್ಲವೆಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.






