ದಾವಣಗೆರೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಹೆಚ್ಚಾದ ಹಿನ್ನಲೆ ವೃದ್ಧ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ.ಫೈನಾನ್ಸ್ ನ ಸಿಬ್ಬಂದಿ ಮನೆ ಬಳಿ ಬಂದು ಸಾಲ ತುಂಬುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದಂಪತಿ ಅಳಲು ತೋಡಿಕೊಂಡಿದ್ದಾರೆ.
ದಾವಣಗೆರೆಯ ಕತ್ತಲಗೆರೆ ಗ್ರಾಮದ ರೇಣುಕಮ್ಮ ಎಂಬ ಮಹಿಳೆಗೆ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದ್ದು, ಈ ಹಿಂದೆ ತಮ್ಮ ಹಸು ಮಾರಾಟ ಮಾಡಿ ಒಂದು ಫೈನಾನ್ಸ್ ಗೆ ಸಾಲ ಭರ್ತಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆ ಖರ್ಚಿಗಾಗಿ ಒಂದು ಫೈನಾನ್ಸ್ ನಲ್ಲಿ ಸಾಲ ಮಾಡಿ ಅವರ ಕಿರುಕುಳಕ್ಕೆ ಬೇಸತ್ತು ಹಸು ಮಾರಿ ಮಹಿಳೆ ಸಾಲ ಮರುಪಾವತಿ ಮಾಡಿದ್ದರು.ಈಗ ಮತ್ತೊಂದು ಫೈನಾನ್ಸ್ ನಲ್ಲಿ ಸಾಲ ತುಂಬಬೇಕಾಗಿರುವ ರೇಣುಕಮ್ಮಗೆ, ನಿತ್ಯ ಮನೆಗೆ ಬಂದು ಸಾಲ ತುಂಬುವಂತೆ ಫೈನಾನ್ಸ್ ಸಿಬ್ಬಂದಿ ಹಿಂಸೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.