• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಓಣಂ ರಂಗೋಲಿಯನ್ನು ಕಾಲಿನಿಂದ ಅಳಿಸಿ ವಿಕೃತಿ ಮೆರೆದ ಮಹಿಳೆ!

ಪ್ರತಿಧ್ವನಿ by ಪ್ರತಿಧ್ವನಿ
September 23, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೆಂಗಳೂರು:ತನ್ನ ಅಪ್ಪಣೆಯಿಲ್ಲದೆ ಅಪಾರ್ಟ್‌ಮೆಂಟ್‌ನಲ್ಲಿ ಓಣಂ ರಂಗೋಲಿಯನ್ನು ಹಾಕಿದ್ದ ಕಾರಣಕ್ಕೆ ಕಿರಿಕ್‌ ತೆಗೆದ ಮಹಿಳೆಯೊಬ್ಬಳು, ರಾತ್ರಿಯಿಂದಲೂ ಕಷ್ಟಪಟ್ಟು ಹಾಕಿದ್ದ ಹೂವಿನ ರಂಗೋಲಿಯನ್ನು ಕಾಲಿನಿಂದ ಅಳಿಸಿ, ಅದರ ಮೇಲೆ ನೃತ್ಯ ಮಾಡಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ADVERTISEMENT

ತನ್ನ ಅಪ್ಪಣೆ ಇಲ್ಲದೆ ಅಪಾರ್ಟ್‌ಮೆಂಟ್‌ನಲ್ಲಿ ಏನೂ ಮಾಡುವ ಹಾಗೆ ಇಲ್ಲ ಎಂದು ಕ್ಯಾತೆ ತೆಗೆದ ಮಹಿಳೆ, ಓಣಂ ಹಬ್ಬದ ಮೂಡ್ ನಲ್ಲಿದ್ದ ಅಪಾರ್ಟ್ ನಿವಾಸಿಗಳಿಗೆ ಮಹಿಳೆಯರ ಜೊತೆ ಕಿರಿಕ್‌ ಮಾಡಿದ್ದಾರೆ. ಇಡೀ ರಾತ್ರಿಯೆಲ್ಲ ಕಷ್ಟಪಟ್ಟು ಹಾಕಿದ್ದ ಹೂವಿನ ರಂಗೋಲಿಯನ್ನ ಕಾಲಿಂದ ಅಳಿಸಿ ವಿಕೃತಿ ಮೆರೆದಿದ್ದಾಳೆ. ಮಹಿಳೆ ದರ್ಪಕ್ಕೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಕೂಡ ಅಸಹಾಯಕರಂತೆ ನಿಂತಿದ್ದರು. ಅಪಾರ್ಟ್‌ಮೆಂಟ್‌ ನಿವಾಸಿ ಆಗಿರುವ ಸಿಮಿ ನಾಯರ್ ಎಂಬ ಮಹಿಳೆ ಈ ದರ್ಪ ಎಸಗಿದ್ದಾಳೆ.ಶನಿವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಗಳೂರು ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಥಣಿಸಂದ್ರದ ಮೊನಾರ್ಕ್ ಸೆರೆನಿಟಿ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದೆ.

Shameless Shameless Woman!! She is Simi Nair, resident of Monarch Serenity Apartment Complex in Bengaluru. She Deliberately destroyed a Pookalam created by children in the common area of their building on occasion of Onam 😡 pic.twitter.com/TqPW8o04w8

— Rosy (@rose_k01) September 22, 2024

ಅಪಾರ್ಟ್ ಮೆಂಟ್ ಕೇರಳ ಕಮ್ಯುನಿಟಿ ಯಿಂದ ಇಂದು ಓಣಂ ಆಚರಣೆ ನಡೆಯುತ್ತಿತ್ತು. ಅಪಾರ್ಟ್ ಮೆಂಟ್ ನಲ್ಲಿರುವ ಕೇರಳ ಮೂಲದವರು ಪ್ರತಿ ವರ್ಷ ಓಣಂ ಆಚರಣೆ ಮಾಡುತ್ತಾರೆ. ಈ ಬಾರಿಯೂ ವೀಕೆಂಡ್ ನಲ್ಲಿ ಓಣಂ ಆಚರಣೆಗೆ ಮುಂದಾಗಿದ್ದರು. ಅಪಾರ್ಟ್‌ಮೆಂಟ್‌ನ ಕಮ್ಯುನಿಟಿ ಕ್ಲಬ್ ಹಾಲ್‌ನಲ್ಲಿ ಆಚರಣೆ ಮಾಡಲು ಸಿದ್ದರಾಗಿದ್ದರು.ಇದಕ್ಕಾಗಿ ನಿವಾಸಿಗಳೆಲ್ಲ ಸೇರಿ ಹೂವಿನಿಂದ ಸುಂದರವಾಗಿ ರಂಗೋಲಿಯನ್ನ ಬಿಡಿಸಿದ್ದರು.ಈ ವೇಳೆ ಏಕಾಏಕಿ ಬಂದಿರುವ ಮಹಿಳೆ ಕಿರಿಕ್ ತೆಗೆದು ಕಾಲಿನಿಂದ ರಂಗೋಲಿಯನ್ನ ಅಳಿಸಿ ದರ್ಪ ಎಸಗಿದ್ದಾಳೆ. ನಿವಾಸಿಗಳು ಇದನ್ನು ಮೊದಲು ತಡೆಯಲು ಪ್ರಯತ್ನಿಸಿದರಾದರೂ ಸಿಮಿ ನಾಯರ್‌ ಯಾರ ಮಾತನ್ನೂ ಕೇಳಿಲ್ಲ.

ರಾತ್ರಿಯಿಡೀ ಕಷ್ಟ ಪಟ್ಟು ಬಿಡಿಸಿದ ರಂಗೋಲಿಯನ್ನ ಅಳಿಸಿದ್ದಲ್ಲದೇ ಡ್ಯಾನ್ಸ್ ಮಾಡಿ ವಿಕೃತಿ ಎಸೆಗಿದ್ದಾಳೆ. ಿರಿಕ್ ಮಹಿಳೆಯ ದರ್ಪಕ್ಕೆ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.ಪೊಲೀಸರಿಗೆ ಕರೆ ಮಾಡಿದ್ದರೂ ಯಾವುದೇ ಪ್ರಯೋಜನೆ ಆಗಿಲ್ಲ. ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿದರೆ, ಕಾಫಿ ಕುಡಿಯುತ್ತಿದ್ದೀನಿ ಬರೋಕೆ ಆಗಲ್ಲ ಎಂದು ಹೇಳಿದ್ದಾರೆ.

ಇನ್ನು ಸಿಮಿ ನಾಯರ್‌ ಮಾಡಿರುವ ಕೃತ್ಯವನ್ನು ಕಂಡು ಹೊಯ್ಸಳ ಪೊಲೀಸರು ಕೂಡ ಏನನ್ನೂ ಹೇಳದೆ ವಾಪಾಸ್‌ ಆಗಿದ್ದಾರೆ. ಹಿಂದೂಗಳಿಗೆ ಹಬ್ಬ ಆಚರಣೆ ಮಾಡುವ ಹಕ್ಕಿಲ್ವಾ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Tags: A woman who erased Onam Rangoli from her legcrimeperversion
Previous Post

ರಾಜ್‌ಕಪ್ ಕ್ರಿಕೆಟ್ ಟೂರ್ನಮೆಂಟ್ ಬಿಡ್ಡಿಂಗ್ ಯಾವ ನಟ ಯಾವ ಟೀಂ ಗೆ ಸೇಲ್ ..?

Next Post

Monkey Pox37 ಜನ ಕ್ವಾರಂಟೈನ್, ರಾಜಧಾನಿಯಲ್ಲಿ ಮಂಕಿಪಾಕ್ಸ್-ನಿಫಾ ವೈರಸ್​​​​ ಭೀತಿ..​!

Related Posts

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌
Top Story

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌

by ಪ್ರತಿಧ್ವನಿ
May 13, 2026
0

ಚೆನೈ : ನೂತನವಾಗಿ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ನಟ ಜೋಸೆಫ್‌ ವಿಜಯ್‌ ತಮ್ಮ ಮಿತ್ರಪಕ್ಷಗಳ ಮನವಿಗೆ ಸ್ಪಂದಿಸಿ, ತಮ್ಮ ಓಎಸ್‌ಡಿಯಾಗಿದ್ದ ಜ್ಯೋತಿಷ್ಯಿಯ ನೇಮಕವನ್ನು ವಾಪಸ್‌ ಪಡೆದಿದ್ದಾರೆ. ವಿಜಯ್‌ ಪ್ರಮಾಣ ವಚನ...

Read moreDetails
Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

May 13, 2026
ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

May 12, 2026
ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

May 12, 2026
ಸಿಎಂ ಆದ ತಕ್ಷಣವೇ ವಿಜಯ್‌ರ ಮೊದಲ ಆದೇಶ: ದೇವಾಲಯ, ಶಾಲೆಗಳ ಬಳಿ ಈ ವಸ್ತು ಮಾರಾಟಕ್ಕೆ ಬ್ರೇಕ್!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ: ಶುಭೇಂದು ಅಧಿಕಾರಿಗೆ ಶಾಸಕನಿಂದ ಬಹಿರಂಗ ಬೆದರಿಕೆ!

May 12, 2026
Next Post

Monkey Pox37 ಜನ ಕ್ವಾರಂಟೈನ್, ರಾಜಧಾನಿಯಲ್ಲಿ ಮಂಕಿಪಾಕ್ಸ್-ನಿಫಾ ವೈರಸ್​​​​ ಭೀತಿ..​!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada