ಬೆಂಗಳೂರು:ತನ್ನ ಅಪ್ಪಣೆಯಿಲ್ಲದೆ ಅಪಾರ್ಟ್‌ಮೆಂಟ್‌ನಲ್ಲಿ ಓಣಂ ರಂಗೋಲಿಯನ್ನು ಹಾಕಿದ್ದ ಕಾರಣಕ್ಕೆ ಕಿರಿಕ್ ತೆಗೆದ ಮಹಿಳೆಯೊಬ್ಬಳು, ರಾತ್ರಿಯಿಂದಲೂ ಕಷ್ಟಪಟ್ಟು ಹಾಕಿದ್ದ ಹೂವಿನ ರಂಗೋಲಿಯನ್ನು ಕಾಲಿನಿಂದ ಅಳಿಸಿ, ಅದರ ಮೇಲೆ ನೃತ್ಯ ಮಾಡಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತನ್ನ ಅಪ್ಪಣೆ ಇಲ್ಲದೆ ಅಪಾರ್ಟ್‌ಮೆಂಟ್‌ನಲ್ಲಿ ಏನೂ ಮಾಡುವ ಹಾಗೆ ಇಲ್ಲ ಎಂದು ಕ್ಯಾತೆ ತೆಗೆದ ಮಹಿಳೆ, ಓಣಂ ಹಬ್ಬದ ಮೂಡ್ ನಲ್ಲಿದ್ದ ಅಪಾರ್ಟ್ ನಿವಾಸಿಗಳಿಗೆ ಮಹಿಳೆಯರ ಜೊತೆ ಕಿರಿಕ್ ಮಾಡಿದ್ದಾರೆ. ಇಡೀ ರಾತ್ರಿಯೆಲ್ಲ ಕಷ್ಟಪಟ್ಟು ಹಾಕಿದ್ದ ಹೂವಿನ ರಂಗೋಲಿಯನ್ನ ಕಾಲಿಂದ ಅಳಿಸಿ ವಿಕೃತಿ ಮೆರೆದಿದ್ದಾಳೆ. ಮಹಿಳೆ ದರ್ಪಕ್ಕೆ ಅಪಾರ್ಟ್‌ಮೆಂಟ್ ನಿವಾಸಿಗಳು ಕೂಡ ಅಸಹಾಯಕರಂತೆ ನಿಂತಿದ್ದರು. ಅಪಾರ್ಟ್‌ಮೆಂಟ್ ನಿವಾಸಿ ಆಗಿರುವ ಸಿಮಿ ನಾಯರ್ ಎಂಬ ಮಹಿಳೆ ಈ ದರ್ಪ ಎಸಗಿದ್ದಾಳೆ.ಶನಿವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಗಳೂರು ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಥಣಿಸಂದ್ರದ ಮೊನಾರ್ಕ್ ಸೆರೆನಿಟಿ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದೆ.
Shameless Shameless Woman!! She is Simi Nair, resident of Monarch Serenity Apartment Complex in Bengaluru. She Deliberately destroyed a Pookalam created by children in the common area of their building on occasion of Onam 😡 pic.twitter.com/TqPW8o04w8
— Rosy (@rose_k01) September 22, 2024
ಅಪಾರ್ಟ್ ಮೆಂಟ್ ಕೇರಳ ಕಮ್ಯುನಿಟಿ ಯಿಂದ ಇಂದು ಓಣಂ ಆಚರಣೆ ನಡೆಯುತ್ತಿತ್ತು. ಅಪಾರ್ಟ್ ಮೆಂಟ್ ನಲ್ಲಿರುವ ಕೇರಳ ಮೂಲದವರು ಪ್ರತಿ ವರ್ಷ ಓಣಂ ಆಚರಣೆ ಮಾಡುತ್ತಾರೆ. ಈ ಬಾರಿಯೂ ವೀಕೆಂಡ್ ನಲ್ಲಿ ಓಣಂ ಆಚರಣೆಗೆ ಮುಂದಾಗಿದ್ದರು. ಅಪಾರ್ಟ್‌ಮೆಂಟ್‌ನ ಕಮ್ಯುನಿಟಿ ಕ್ಲಬ್ ಹಾಲ್‌ನಲ್ಲಿ ಆಚರಣೆ ಮಾಡಲು ಸಿದ್ದರಾಗಿದ್ದರು.ಇದಕ್ಕಾಗಿ ನಿವಾಸಿಗಳೆಲ್ಲ ಸೇರಿ ಹೂವಿನಿಂದ ಸುಂದರವಾಗಿ ರಂಗೋಲಿಯನ್ನ ಬಿಡಿಸಿದ್ದರು.ಈ ವೇಳೆ ಏಕಾಏಕಿ ಬಂದಿರುವ ಮಹಿಳೆ ಕಿರಿಕ್ ತೆಗೆದು ಕಾಲಿನಿಂದ ರಂಗೋಲಿಯನ್ನ ಅಳಿಸಿ ದರ್ಪ ಎಸಗಿದ್ದಾಳೆ. ನಿವಾಸಿಗಳು ಇದನ್ನು ಮೊದಲು ತಡೆಯಲು ಪ್ರಯತ್ನಿಸಿದರಾದರೂ ಸಿಮಿ ನಾಯರ್ ಯಾರ ಮಾತನ್ನೂ ಕೇಳಿಲ್ಲ.
ರಾತ್ರಿಯಿಡೀ ಕಷ್ಟ ಪಟ್ಟು ಬಿಡಿಸಿದ ರಂಗೋಲಿಯನ್ನ ಅಳಿಸಿದ್ದಲ್ಲದೇ ಡ್ಯಾನ್ಸ್ ಮಾಡಿ ವಿಕೃತಿ ಎಸೆಗಿದ್ದಾಳೆ. ಿರಿಕ್ ಮಹಿಳೆಯ ದರ್ಪಕ್ಕೆ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.ಪೊಲೀಸರಿಗೆ ಕರೆ ಮಾಡಿದ್ದರೂ ಯಾವುದೇ ಪ್ರಯೋಜನೆ ಆಗಿಲ್ಲ. ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿದರೆ, ಕಾಫಿ ಕುಡಿಯುತ್ತಿದ್ದೀನಿ ಬರೋಕೆ ಆಗಲ್ಲ ಎಂದು ಹೇಳಿದ್ದಾರೆ.
ಇನ್ನು ಸಿಮಿ ನಾಯರ್ ಮಾಡಿರುವ ಕೃತ್ಯವನ್ನು ಕಂಡು ಹೊಯ್ಸಳ ಪೊಲೀಸರು ಕೂಡ ಏನನ್ನೂ ಹೇಳದೆ ವಾಪಾಸ್ ಆಗಿದ್ದಾರೆ. ಹಿಂದೂಗಳಿಗೆ ಹಬ್ಬ ಆಚರಣೆ ಮಾಡುವ ಹಕ್ಕಿಲ್ವಾ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.