ಶಿವಮೊಗ್ಗ ಜಿಲ್ಲೆ ಶಿಕಾರಿಪುರ (Shikaripura)ತಾಲೂಕಿನ ಶಿರಾಳಕೊಪ್ಪ ಸಮೀಪದ ನಾಗೀಹಳ್ಳಿ ಗ್ರಾಮದಲ್ಲಿ (Nagihalli village)ನಡೆದಿದ್ದ ಕೊಲೆ (murder)ಪ್ರಕರಣವನ್ನು ಬಯಲಿಗೆಳೆದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಾಗೀಹಳ್ಳಿ ಗ್ರಾಮದ ಕೃಷ್ಣಪ್ಪ Krishnappa(33) ಕೊಲೆಯಾದ ವ್ಯಕ್ತಿ. ಆರೋಪಿ Accused)ಕಿರಣ್ Kiran)ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.ಪತಿ ನಾಪತ್ತೆಯಾದ ಬಗ್ಗೆ ಕೃಷ್ಣಪ್ಪನ ಪತ್ನಿ ದೂರು ನೀಡಿದ್ದು, ಶಿರಾಳಕೊಪ್ಪ ಠಾಣೆ ಪೊಲೀಸರು (Police)ಕಿರಣ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬಯಲಾಗಿದೆ.
ಕೃಷ್ಣಪ್ಪನ ಪತ್ನಿಯೊಂದಿಗೆ ಕಿರಣ್ ಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.ಈ ವಿಷಯ ಗೊತ್ತಾಗಿ ಕೃಷ್ಣಪ್ಪ ಕಿರಣ್ ಗೆ ಬುದ್ಧಿವಾದ ಹೇಳಿದ್ದ.ಇದೇ ವಿಚಾರಕ್ಕೆ ತನ್ನ ಸ್ನೇಹಿತರಾದ ಶಿವು ಅಲಿಯಾಸ್ ಪ್ರತಾಪ್, ಗಣೇಶ ಅವರೊಂದಿಗೆ ಸೇರಿ ಸಂಚು ರೂಪಿಸಿದ ಕಿರಣ್ ಕೊಲೆ ಮಾಡಿದ್ದಾನೆ.ಕೃಷ್ಣಪ್ಪನ ಕೊಲೆಗೈದ ನಂತರ ತುಂಡು ತುಂಡಾಗಿ ಮೃತದೇಹ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗೊಂದಿ ಸಮೀಪ ನದಿಗೆ ಎಸೆದಿದ್ದಾರೆ ಎನ್ನಲಾಗಿದೆ. ಶಿರಾಳುಕೊಪ್ಪ ಠಾಣೆ ಸಬ್ ಇನ್ ಸ್ಪೆಕ್ಟರ್ ಟಿ.ಬಿ. ಪ್ರಶಾಂತ್ ಕುಮಾರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.