ಸಂಸದ ಕರಡಿ ಸಂಗಣ್ಣ (karadi sanganna) ಕಮಲ ತೊರೆದು ಇಂದು ಅಧಿಕೃತ್ವವಾಗಿ ಕಾಂಗ್ರೇಸ್ (congress) ಸೇರ್ಪಡೆಯಾಗಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ (KPCC) ಸಿಎಂ ಸಿದ್ದರಾಮಯ್ಯ (siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (Dk shivakumar) ಸಮ್ಮುಖದಲ್ಲಿ ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆಯಾಗಿದ್ದರೆ, ಹಾಲಿ ಸಂಸದನಾಗಿದ್ದರೂ ಈ ಬಾರಿ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಹಿನ್ನಲೆ ಅಸಮಾಧಾನಗೊಂಡು ಕರಡಿ ಸಂಗಣ್ಣ ಪಕ್ಷ ತೊರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕರಡಿ ಸಂಗಣ್ಣ, ಹಠ-ದ್ದೇಶದಿಂದ ಪಕ್ಷ ತೊರೆದಿಲ್ಲ. ಮನುಷ್ಯನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಹೋರಾಟ ಅನಿವಾರ್ಯ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ರು. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರಡಿ ಸಂಗಣ್ಣಗೆ ಬಿಜೆಪಿಯವರು ಯಾಕೆ ಟಿಕೆಟ್ (Ticket) ತಪ್ಪಿಸಿದ್ರು ಎಂದು ನನಗೆ ಇದುವರೆಗೂ ಅರ್ಥವಾಗಲಿಲ್ಲ ಎಂದು ಹೇಳಿದ್ರು.
ಇನ್ನು ಕರಡಿ ಸಂಗಣ್ಣ ಪಕ್ಷ ತೊರೆದ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ವೈ (BSY), ಅವರ ಅವರ ವಯಕ್ತಿಕ ಆಯ್ಕೆ ಇಂದು ನಾನು ಅವರನ್ನ ಭೇಟಿ ಮಾಡಿ ಮಾತನಾಡಬೇಕು ಎಂದುಕೊಂಡಿದ್ದೆ. ಆದ್ರೆ ಅಷ್ಟರಲ್ಲಿ ಪಕ್ಷ ತೊರೆದಿದ್ದಾರೆ. ಈ ಸಂದರ್ಭದಲ್ಲಿ ಅಸಮಾಧಾನ ಸ್ವಾಭಾವಿಕ ಎಂದು ಹೇಳಿದ್ದಾರೆ. ಕರಡಿ ಸಂಗಣ್ಣ ಕಾಂಗ್ರೇಸ್ ಸೇರ್ಪಡೆ ಬಿಜೆಪಿ (Bjp) ಮತಗಳ ಮೇಲೆ ಪರಿಣಾಮ ಬೀರಲಿದ್ಯಾ ಇಲ್ವಾ ಎಂಬುದನ್ನ ಕಾದುನೋಡಬೇಕಿದೆ