• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಪ್ರಾಪ್ತ ಬಾಲಕನಿಂದ 9 ವರ್ಷದ ಬಾಲಕಿ ಉಸಿರುಕಟ್ಟಿಸಿ ಕೊಲೆ , ಮೃತ ದೇಹಕ್ಕೆ ಬೆಂಕಿ..

ಪ್ರತಿಧ್ವನಿ by ಪ್ರತಿಧ್ವನಿ
July 2, 2024
in Top Story, ಇದೀಗ, ದೇಶ
0
Share on WhatsAppShare on FacebookShare on Telegram

ಹೌಸಿಂಗ್ ಸೊಸೈಟಿಯೊಂದರಲ್ಲಿ ಫ್ಲಾಟ್‌ನಿಂದ ಚಿನ್ನಾಭರಣಗಳನ್ನು ಕದಿಯುತ್ತಿದ್ದಾಗ 16 ವರ್ಷದ ಹುಡುಗನೊಬ್ಬ 9 ವರ್ಷದ ನೆರೆಯ ಬಾಲಕಿ ನೋಡಿಬಿಟ್ಟಳೆಂಬ ಕಾರಣಕ್ಕೆ ಆಕೆಯ ಕತ್ತು ಹಿಸುಕಿ ಆಕೆಯ ದೇಹಕ್ಕೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಮತ್ತು ಆರೋಪಿ ಕುಟುಂಬಗಳು ಸಿಗ್ನೇಚರ್ ಗ್ಲೋಬಲ್ ಸೋಲೆರಾ (Signature Global Solera), ಸೆಕ್ಟರ್ 107(Sector 107), ಗುರುಗ್ರಾಮ್‌ನ(Gurgram) ಎರಡು ಪ್ರತ್ಯೇಕ ಟವರ್‌ಗಳಲ್ಲಿ ನೆಲೆಸಿದ್ದು ಅವರು ಪರಸ್ಪರ ಸ್ನೇಹಿತರೇ ಆಗಿದ್ದರು ಎಂದು ಅವರು ಹೇಳಿದರು.
4ನೇ ತರಗತಿ ವಿದ್ಯಾರ್ಥಿನಿಯಾಗಿರುವ (4th Standard Girl) ಬಾಲಕಿಯ ತಾಯಿ ಆರೋಪಿಯ ಮನೆಯಲ್ಲಿದ್ದಾಗ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರೋಪಿ, 10 ನೇ ತರಗತಿ ವಿದ್ಯಾರ್ಥಿ(Accused 10th Standard), ಆಗಿದ್ದು ಪೊಲೀಸರು ಬಂಧಿಸಿದ್ದಾರೆ, ಆರಂಭದಲ್ಲಿ ಆತ ಇಬ್ಬರು ಕಳ್ಳರು ಮನೆಗೆ ನುಗ್ಗಿ ಬಾಲಕಿಯನ್ನು ಕೊಂದಿದ್ದಾರೆ ಎಂದು ಹೇಳಲು ಪ್ರಯತ್ನಿಸಿದ ಆದರೆ ನಂತರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನು 20 ಸಾವಿರ ಸಾಲ ತೀರಿಸಲು ಚಿನ್ನಾಭರಣ ಕದಿಯುತ್ತಿದ್ದ ಎಂದು ಹೇಳಿದ್ದಾನೆ.
ಆಕೆಯನ್ನು ಕೊಲ್ಲಲು ತನಗೆ ಇಷ್ಟವಿರಲಿಲ್ಲ ಆದರೆ ಬಾಲಕಿ ಸುಮ್ಮನಿರಲು ನಿರಾಕರಿಸಿದ್ದರಿಂದ ತಾನು ಸಿಕ್ಕಿಬೀಳುವ ಭಯದಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ರಾಜೇಂದ್ರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸೋಮವಾರ ಬೆಳಿಗ್ಗೆ ಸಂತ್ರಸ್ತೆಯ ತಂದೆ ಕಚೇರಿಗೆ ಹೋಗಿದ್ದರೆ, ತಾಯಿ ಮತ್ತು ಸಹೋದರ ಅದೇ ಸೊಸೈಟಿಯ ಮತ್ತೊಂದು ಟವರ್‌ನಲ್ಲಿರುವ ಆರೋಪಿಯ ಮನೆಗೆ ಹೋಗಿದ್ದರು. ಬಾಲಕಿಯ ತಾಯಿ ತನ್ನ ಮನೆಯಲ್ಲಿ ಇರುವುದನ್ನು ನೋಡಿದ ಆರೋಪಿ ತಾನು ಟ್ಯೂಷನ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಸಂತ್ರಸ್ತೆಯ ಮನೆಗೆ ಬಂದಿದ್ದಾನೆ. ಕರೆಗಂಟೆ ಬಾರಿಸಿದಾಗ ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿ ಬಾಗಿಲು ತೆರೆದಳು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಅವನು ಸೋಫಾ ಮೇಲೆ ಕುಳಿತು ನೀರು ಕೇಳಿದ್ದಲ್ಲದೆ ಆಕೆಯ ಹೋಂ ವರ್ಕ್‌ ಗೂ ಸಹಾಯ ಮಾಡಿದ ಎಂದು ಹಿರಿಯ ತನಿಖಾಧಿಕಾರಿ ಹೇಳಿದರು.

ಆಕೆ ಶೌಚಾಲಯಕ್ಕೆ ಹೋದಾಗ, ಅವನು ಹಾಸಿಗೆಯ ಡ್ರಾಯರ್‌ನಿಂದ ಲಾಕರ್‌ನ ಕೀಗಳನ್ನು ತೆಗೆದು ಕೆಲವು ಆಭರಣಗಳನ್ನು ಕದ್ದಿದ್ದಾನೆ ಎಂದು ಐಒ ಹೇಳಿದರು. ಈ ವೇಳೆ ಬಾಲಕಿ ಶೌಚಾಲಯದಿಂದ ಹೊರಬಂದು ಆಭರಣಗಳನ್ನು ನೋಡಿ ವಿರೋಧ ನಡೆಸಿದ್ದಾಳೆ. ಹುಡುಗನು ಆಭರಣಗಳನ್ನು ಬಾಲ್ಕನಿಯಿಂದ ಹೊರಗೆ ಎಸೆದನು ಆದರೆ ಹುಡುಗಿ ವಿರೋಧ ಮುಂದುವರೆಸಿದಳು, ಆಗ ಅವನು ಅವಳನ್ನು ಹೊಡೆಯಲು ಪ್ರಾರಂಭಿಸಿದನು ಎಂದು ಅಧಿಕಾರಿ ಹೇಳಿದರು. ಆಗ ಬಾಲಕ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದಾದ ಬಳಿಕ ಮನೆಯ ದೇವಸ್ಥಾನದಿಂದ ಕರ್ಪೂರ ಬಳಸಿ ಆಕೆಯ ದೇಹಕ್ಕೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಸ್ವಲ್ಪ ಸಮಯದ ನಂತರ, ಹುಡುಗಿಯ ತಾಯಿ ಮನೆಗೆ ಹಿಂತಿರುಗಿದಾಗ ಕರೆಗಂಟೆ ಬಾರಿಸಿದರು ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ಸ್ವಲ್ಪ ಸಮಯದ ನಂತರ, ಅವರು ಫ್ಲಾಟ್‌ನಿಂದ ಹೊಗೆ ಬರುತ್ತಿರುವುದನ್ನು ನೋಡಿ ಅಕ್ಕ ಪಕ್ಕದ ನಿವಾಸಿಗಳನ್ನು ನೆರವಿಗಾಗಿ ಕರೆದಾಗ ಘಟನೆ ಬೆಳಕಿಗೆ ಬಂದಿದೆ.

Tags: gurugramPune PoliceSignature Globl
Previous Post

ಪ್ರವಾಸಿಗರನ್ನು ಸೆಳೆಯುತ್ತಿರುವ ದುಬಾರೆ , ಬರಪೊಳೆ ರಿವರ್‌ ರ‍್ಯಾಫ್ಟಿಂಗ್..!!

Next Post

ಆಕ್ಷೇಪಾರ್ಹ ಹೇಳಿಕೆ ; ರಾಹುಲ್‌ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ ಮುಖ್ಯ ಮಂತ್ರಿ ಯೋಗಿ ಆದಿತ್ಯ ನಾಥ್‌….

Related Posts

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!
Top Story

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಕಾಂಗ್ರೆಸ್‌ ಶಾಸಕ ಎನ್.ಎ.ಹ್ಯಾರಿಸ್‌ ಮನೆ ಮೇಲೆ ಇಂದು ಬೆಳಂಬೆಳಿಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಅಶೋಕ ನಗರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ,...

Read moreDetails
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
Next Post

ಆಕ್ಷೇಪಾರ್ಹ ಹೇಳಿಕೆ ; ರಾಹುಲ್‌ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ ಮುಖ್ಯ ಮಂತ್ರಿ ಯೋಗಿ ಆದಿತ್ಯ ನಾಥ್‌....

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada