ನಿನ್ನೆ ಹುಬ್ಬಳ್ಳಿಯ (Hubbali) ಬಿವಿಬಿ ಕಾಲೇಜಿನಲ್ಲಿ (BVB College) ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಕೇಸ್ ಬಗ್ಗೆ ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳು ಮತ್ತು ಹಿಂದೂ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದ್ರೆ ಗೃಹ ಸಚಿವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ (Home minister) ಡಾ.ಜಿ.ಪರಮೇಶ್ವರ್ (parameshwar) ಇದೊಂದು ಲವ್ ಅಫೇರ್ ಪ್ರಕರಣ. ಇಲ್ಲಿ ಲವ್ ಜಿಹಾದ್ ನಡೆದಿಲ್ಲ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ.

ವಿದ್ಯಾರ್ಥಿನಿ ತಂದೆ ಕಾಂಗ್ರೇಸ್ (congress) ಕಾರ್ಪೊರೆಟ್ ಕೂಡ ಆಗಿರುವುದರಿಂದ, ಈ ಪ್ರಕರಣಕ್ಕೂ ರಾಜಕೀಯಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಮೊದಲಿಗೆ ಸ್ಪಷ್ಟಪಡಿಸಿದ ಪರಮೇಶ್ವರ್, ಈವರೆಗೂ ನಾನು ತರಿಸಿಕೊಂಡ ಮಾಹಿತಿ ಪ್ರಕಾರ, ಈ ಯುವಕ-ಯುವತಿ ನಡುವೆ ಪ್ರೀತಿಯಿತ್ತು. ಆದ್ರೆ ನಂತರದಲ್ಲಿ ಯುವತಿ ನಿರಾಕರಿಸಿದ ಆರೋಪಿ ಇಂಥ ಕೃತ್ಯವೆಸಗಿದ್ದಾನೆ ಎಂದು ಹೇಳಿದ್ದಾರೆ.

ಹಾಗಿದ್ರೆ ಲವ್ ಜಿಹಾದ್ (Love jihad) ಅಂದ್ರೆ ಇನ್ನೇನು ? ಪ್ರೀತಿಸಿದ ನಂತರ ಮತಾಂತರ ಆಗಲಿಲ್ಲ ಅಂದ್ರೆ ಕೊಂದುಹಾಕೋದೇ ಲವ್ ಜಿಹಾದ್ ! ರಾಜ್ಯದ ಗೃಹಸಚಿವರಾಗಿ ಇಂಥ ಹೇಳಿಕೆ ನೀಡೋದಕ್ಕೆ ಇಂಥವರನ್ನ ರಕ್ಷಿಸುತ್ತಿರುವುದಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಬಿಜೆಪಿ ಸೇರಿದಂತೆ ಹಿಂದೂಪರ ಸಂಗಟನೆಗಳು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿವೆ.