ನಿನ್ನೆ ಹುಬ್ಬಳ್ಳಿಯ (Hubbali) ಬಿವಿಬಿ ಕಾಲೇಜಿನಲ್ಲಿ (BVB College) ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಕೇಸ್ ಬಗ್ಗೆ ಒಂದಡೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದ್ರೆ ಮತ್ತೊಂದಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ ನೇಹಾ (Student neha ತಂದೆ, ತಮ್ಮ ಮಗಳ ಕೊಲೆಗೆ ಲವ್ ಜಿಹಾದ್ (Love jihad) ಕಾರಣ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಪೊರೇಟರ್ (congress corporator) ಆಗಿರುವ ನಿರಂಜನರ ಹಿರೇಮರ್, ನನ್ನ ಮಗಳ ಕೊಲೆಗೆ ಲವ್ ಜಿಹಾದ್ ಕಾರಣ, ಮಗಳು ನೇಹಾ ಪ್ರೀತಿ ನಿರಾಕರಿಸಿದ್ದಕ್ಕೆ ಆರೋಪಿ ಫಯಾಜ್ (faiaz) ಈ ರೀತಿ ಕೃತ್ಯವೆಸಗಿದ್ದಾನೆ ಎಂಬ ಆಕ್ರೋಶದ ಜೊತೆಗೆ ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಆದ್ರೆ ಇದುವರೆಗೂ ಪೋಲಿಸರು ಈ ಬಗ್ಗೆ ಅಧಿಕೃತವಾಗಿ ಏನನ್ನೂ ಧೃಡಪಡಿಸಿಲ್ಲ.

ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಾಗಿದ್ದರಿಂದ ಈ ಇಬ್ಬರ ನಡುವೆ ಸ್ನೇಹ ಅಥವಾ ಪ್ರೀತಿ ಇದ್ದರಬಹುದು. ಆದ್ರೆ ಇಷ್ಟು ಭೀಕರವಾಗಿ 11 ಬಾರಿ ಚಾಕುವಿನಿಂದ ಇರುದು ಕೊಂದಿರುವುದು ಬೆಚ್ಚಿ ಬೀಳಿಸುವ ಘಟನೆ. ಹೀಗಾಗಿ ಕೇವಲ ಪ್ರೀತಿ ಪ್ರೇಮದ ಹೆಸರಲ್ಲಿ ಈ ಘಟನೆಯನ್ನು ಮುಚ್ಚಿ ಹಾಕದೇ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಮತ್ತು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.