ತೆಲಂಗಾಣದ ಸಿದ್ದಿಪೇಟ್ನಲ್ಲಿ ವ್ಯಕ್ತಿಯೊಬ್ಬ ತನ್ನ ದನಗಳನ್ನು ಹೊಲದಲ್ಲಿ ಕಟ್ಟಲು ಯತ್ನಿಸುತ್ತಿದ್ದಾಗ ದೇಶಿ ನಿರ್ಮಿತ ಬಾಂಬ್ ಸ್ಫೋಟಗೊಂಡು ಗಾಯಗೊಂಡಿದ್ದಾನೆ.
ಖಲೀಲ್ ಎಂಬ ವ್ಯಕ್ತಿ ಕೈಬೆರಳುಗಳನ್ನು ಕಳೆದುಕೊಂಡಿದ್ದು, ಕಾಲುಗಳಿಗೆ ಗಾಯಗಳಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಥಳೀಯರ ಪ್ರಕಾರ, ದನಗಳನ್ನು ಹಗ್ಗದಿಂದ ಕಟ್ಟಲು ನೆಲಕ್ಕೆ ಗೂಟಗಳನ್ನು ಹೊಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಘಟನೆಯಿಂದ ಸ್ಥಳದಲ್ಲಿ ಕೋಲಾಹಲ ಉಂಟಾಗಿದ್ದು, ಹುಸ್ನಾಬಾದ್ ಸಹಾಯಕ ಪೊಲೀಸ್ ಕಮಿಷನರ್ ಸತೀಶ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ದೇಶೀ ನಿರ್ಮಿತ ಬಾಂಬ್ ಗಳನ್ನು ಬೇಟೆಗಾರರು ಕಾಡು ಹಂದಿಗಳನ್ನು ಕೊಲ್ಲಲು ಇಟ್ಟಿರಬಹುದು ಎಂದು ಶಂಕಿಸಲಾಗಿದೆ.
ಈ ಪ್ರದೇಶದಲ್ಲಿ ಹಂದಿಗಳ ಕಾಟ ಅಧಿಕವಾಗಿದ್ದು ರೈತರ ಬೆಳೆಗಳನ್ನು ನಾಸ ಮಾಡುತಿದ್ದು ಅದನ್ನು ಕೊಲ್ಲಲು ಇಡಲಾಗಿದೆ ಎಂದು ಪ್ರಾಥಮಿಕ ತನಿಖೆ ತಿಳಿಸಿದ್ದು ಯಾವುದೇ ದುಷ್ಕ್ರತ್ಯದ ಹಿನ್ನೆಲೆ ಕಾಣುತ್ತಿಲ್ಲ ಎಂದು ಪೋಲೀಸರು ತಿಳಿಸಿದರು.