• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಮಿಳುನಾಡಿನಲ್ಲಿ ಸ್ಫೋಟಕ ರಾಜಕೀಯ ಬೆಳವಣಿಗೆ : ಟಿವಿಕೆಗೆ ಕಾಂಗ್ರೆಸ್‌ ಷರತ್ತು ಬದ್ಧ ಬೆಂಬಲ..!

ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಯಾವುದೇ ಕೋಮುವಾದಿ ಶಕ್ತಿಗಳನ್ನು ಟಿವಿಕೆ ಈ ಮೈತ್ರಿಕೂಟದಿಂದ ದೂರವಿಡಬೇಕು : ಟಿವಿಕೆಗೆ ಕೈ ಷರತ್ತುಗಳೇನು..?

ಪ್ರತಿಧ್ವನಿ by ಪ್ರತಿಧ್ವನಿ
May 6, 2026
in Top Story, ಇದೀಗ, ದೇಶ, ರಾಜಕೀಯ
0
ತಮಿಳುನಾಡಿನಲ್ಲಿ ಸ್ಫೋಟಕ ರಾಜಕೀಯ ಬೆಳವಣಿಗೆ : ಟಿವಿಕೆಗೆ ಕಾಂಗ್ರೆಸ್‌ ಷರತ್ತು ಬದ್ಧ ಬೆಂಬಲ..!
Share on WhatsAppShare on FacebookShare on Telegram

ಬೆಂಗಳೂರು : ತಮಿಳುನಾಡು ರಾಜಕೀಯದಲ್ಲಿ ಅಚ್ಚರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಡಿಎಂಕೆ ನೇತೃತ್ವದ ಮೈತ್ರಿಗೆ  ಕಾಂಗ್ರೆಸ್‌ ತೀವ್ರ ಆಘಾತ ನೀಡಿದೆ. ಕಾಂಗ್ರೆಸ್ ಪಕ್ಷವು ತನ್ನ ಹಳೆಯ ಮೈತ್ರಿಯನ್ನು ತೊರೆದು ಸದ್ಯ ತಮಿಳುನಾಡಿನಲ್ಲಿ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಕೈ ಜೋಡಿಸಲು ಮುಂದಾಗಿದೆ. ಈ ಮೂಲಕ ಹಳೆಯ ದೋಸ್ತಿ ಕಡಿದು ಹೊಸ ಮೈತ್ರಿ ಸರ್ಕಾರ ರಚನೆಗೆ ಒಲವು ತೋರಿದೆ.

ADVERTISEMENT
Parameshwar on Thalapathy vijay: ವಿಜಯ್ ಗೆಲುವು ತಮಿಳುನಾಡಲ್ಲಿ ಹೊಸ ಬದಲಾವಣೆ ಎಂದ ಪರಂ #pratidhvani

ತಮಿಳುನಾಡಿನ ವಿಧಾನಸಭೆಗೆ ನಡೆದಿದ್ದ 234 ಸ್ಥಾನಗಳಲ್ಲಿ ಟಿವಿಕೆ ಭರ್ಜರಿ ಗೆಲುವು ಸಾಧಿಸಿದೆ 108 ಸ್ಥಾನಗಳನ್ನು ಗೆದ್ದು ಬೀಗಿದೆ. ಇದರಿಂದ ಈ ಹಿಂದೆ ಆಡಳಿತದಲ್ಲಿದ್ದ ಎಂ.ಕೆ. ಸ್ಟಾಲಿನ್‌ಗೆ ಮರ್ಮಾಘಾತ ನೀಡಿದಂತಾಗಿದೆ. ಚುನಾವಣಾ ಫಲಿತಾಂಶಗಳ ಬಳಿಕ ಸ್ಪಷ್ಟ ಬಹುಮತ ಯಾವುದೇ ಪಕ್ಷಕ್ಕೂ ಸಿಗದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಬೆಳವಣಿಗೆಗಳ ನಡುವೆಯೇ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಗೆ ಮುಂದಾಗಿದೆ.

ಮೈತ್ರಿ ಸರ್ಕಾರದ ರಚನೆಯೊಂದಿಗೆ ಬೇರೆ ಬೇರೆ ಪಕ್ಷಗಳ ಬೆಂಬಲಕ್ಕೆ ಯತ್ನಿಸುತ್ತಿದೆ. ಹೀಗಾಗಿ ಟಿವಿಕೆ ಮಾಡಿಕೊಂಡಿದ್ದ ಬೆಂಬಲದ ಮನವಿಗೆ ಸ್ಪಂದಿಸಿರುವ ಕಾಂಗ್ರೆಸ್, ಷರತ್ತು ಬದ್ಧ ಬೆಂಬಲ ನೀಡಲು ಮುಂದೆ ಬಂದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ನ ಷರತ್ತುಗಳೇನು..?

ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಯಾವುದೇ ಕೋಮುವಾದಿ ಶಕ್ತಿಗಳನ್ನು ಟಿವಿಕೆ ಈ ಮೈತ್ರಿಕೂಟದಿಂದ ದೂರವಿಡುವುದರ ಮೇಲೆ ನಮ್ಮ ಬೆಂಬಲವಿರುತ್ತದೆ. ಟಿವಿಕೆ ಮತ್ತು ತಮಿಳುನಾಡು ಕಾಂಗ್ರೆಸ್ ನಡುವಿನ ಈ ಮೈತ್ರಿಕೂಟವು ಪೆರುಂತಲೈವರ್ ಕಾಮರಾಜ್ ಅವರ ತಮಿಳುನಾಡಿನ ವೈಭವದ ದಿನಗಳನ್ನು ಮರಳಿ ತರಲು ಶ್ರಮಿಸುತ್ತದೆ, ತಂತೈ ಪೆರಿಯಾರ್ ಅವರ ಸಾಮಾಜಿಕ ನ್ಯಾಯದ ಆದರ್ಶಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಂವಿಧಾನಿಕ ಆದರ್ಶಗಳಿಗೆ ಮುಂದಿನ ವರ್ಷಗಳು ಮತ್ತು ದಶಕಗಳಲ್ಲಿ ಬಲವಾದ ಬದ್ಧತೆಯೊಂದಿಗೆ ಮುನ್ನಡೆಯುತ್ತದೆ ಎಂದು ಹೇಳಿದೆ.

ಪರಸ್ಪರ ಗೌರವ, ಸೂಕ್ತ ಹಂಚಿಕೆ ಮತ್ತು ಎರಡೂ ಪಕ್ಷಗಳ ನಡುವಿನ ಹಂಚಿಕೆಯ ಜವಾಬ್ದಾರಿಯ ಮೇಲೆ ಸ್ಥಾಪಿತವಾದ ಈ ಮೈತ್ರಿಕೂಟವು ಈ ಸರ್ಕಾರ ರಚನೆಗೆ ಮಾತ್ರವಲ್ಲದೆ, ಸ್ಥಳೀಯ ಸಂಸ್ಥೆ ಸಂಸ್ಥೆಗಳು, ಲೋಕಸಭೆ ಮತ್ತು ರಾಜ್ಯಸಭೆಗೆ ಭವಿಷ್ಯದ ಚುನಾವಣೆಗಳಿಗೂ ಸಹ ಆಗಿದೆ. ವಿಜಯ್ ಮತ್ತು ರಾಹುಲ್ ಗಾಂಧಿ ಜಂಟಿಯಾಗಿ ಜಾತ್ಯತೀತ ಮತ್ತು ಪ್ರಗತಿಪರ ಸರ್ಕಾರಕ್ಕಾಗಿ ತಮಿಳುನಾಡಿನ ಜನರ ಈ ಐತಿಹಾಸಿಕ ತೀರ್ಪನ್ನು ಗೌರವಿಸುವುದಾಗಿ ಮತ್ತು ಜನರ ಕನಸುಗಳು ಮತ್ತು ಭರವಸೆಗಳನ್ನು ವಿಶೇಷವಾಗಿ ತಮಿಳುನಾಡಿನ ಯುವಕರನ್ನು ಈಡೇರಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ ಎಂದು ಕಾಂಗ್ರೆಸ್‌ ತನ್ನ ಬೆಂಬಲವನ್ನು ಘೋಷಿಸಿದೆ.

ಆದರೆ ಸದ್ಯ ಇದರ ಹೊರತಾಗಿಯೂ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಮುಂದುವರೆದಿದ್ದು, ವಿಜಯ್‌ ಯಾರೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸುತ್ತಾರೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

Tags: AIADMKAICCComjunal VoicesCommunal ForcescongressDMKDr B R AmbedkarGirish Chodankarlokasabha electionMallikarjun Khargemk stalinPeriyarPratidhvaniRahul Gandhirajya sabha mpSecular GovernmentTamilnadu PoliticsTCCTVK
Previous Post

“ಕಾಂಗ್ರೆಸ್ ಬೆಂಬಲಿತ ಬುದ್ದಿಜೀವಿಗಳು ಎಂದರೆ ಯಾರು ಎನ್ನುವುದನ್ನು ಸ್ಪಷ್ಟಪಡಿಸಲಿ”

Next Post

BREAKING NEWS ; ತಮಿಳುನಾಡಿನಲ್ಲಿ “ಕೈ” ಹಿಡಿದ ವಿಜಯ್‌ : ಕಾಂಗ್ರೆಸ್‌ ಜೊತೆ ಟಿವಿಕೆ ಮೈತ್ರಿ ಘೋಷಣೆ..

Related Posts

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ
Top Story

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

by ಪ್ರತಿಧ್ವನಿ
May 13, 2026
0

ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಂದು ಬೆಳಗಿನ ಜಾವ...

Read moreDetails
ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

May 13, 2026
ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

May 12, 2026
ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

May 12, 2026
ಸಿಎಂ ಆದ ತಕ್ಷಣವೇ ವಿಜಯ್‌ರ ಮೊದಲ ಆದೇಶ: ದೇವಾಲಯ, ಶಾಲೆಗಳ ಬಳಿ ಈ ವಸ್ತು ಮಾರಾಟಕ್ಕೆ ಬ್ರೇಕ್!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ: ಶುಭೇಂದು ಅಧಿಕಾರಿಗೆ ಶಾಸಕನಿಂದ ಬಹಿರಂಗ ಬೆದರಿಕೆ!

May 12, 2026
Next Post
BREAKING NEWS ; ತಮಿಳುನಾಡಿನಲ್ಲಿ “ಕೈ” ಹಿಡಿದ ವಿಜಯ್‌ : ಕಾಂಗ್ರೆಸ್‌ ಜೊತೆ ಟಿವಿಕೆ ಮೈತ್ರಿ ಘೋಷಣೆ..

BREAKING NEWS ; ತಮಿಳುನಾಡಿನಲ್ಲಿ "ಕೈ" ಹಿಡಿದ ವಿಜಯ್‌ : ಕಾಂಗ್ರೆಸ್‌ ಜೊತೆ ಟಿವಿಕೆ ಮೈತ್ರಿ ಘೋಷಣೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada