
ತಿರುಚಿ/ಚೆನ್ನೈ (ತಮಿಳುನಾಡು): ತಿರುಚ್ಚಿಯಲ್ಲಿ ನೂಡಲ್ಸ್ ತಿಂದು 15 ವರ್ಷದ ಬಾಲಕಿ ಸಾವನ್ನಪ್ಪಿದ ನಂತರ ಸಗಟು ವ್ಯಾಪಾರಿಯಿಂದ 800 ಕೆಜಿ ಅವಧಿ ಮೀರಿದ ನೂಡಲ್ಸ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾ. ಸುಬ್ರಮಣಿಯನ್ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಜಾನ್ ಜೂಡಿ ಮೈಲ್ ಅವರು ತಿರುಚ್ಚಿಯ ಅರಿಯಮಂಗಲಂ ಕೀಲಾ ಅಂಬಿಕಾಪರಮ್ ನಿವಾಸಿ ಆಗಿದ್ದು ಇವರು ರೈಲ್ವೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಗಳು ಜಾನ್ ಸ್ಟೆಫಿ ಜಾಕ್ವೆಲಿನ್ ಮೈಲ್ (ವಯಸ್ಸು 15). ತಿರುಚ್ಚಿಯ ಖಾಸಗಿ ಶಾಲೆಯೊಂದರಲ್ಲಿ 10 ನೇ ತರಗತಿ ಓದುತ್ತಿದ್ದಳು. ಜಾಕ್ವೆಲಿನ್ ಸ್ವಂತವಾಗಿ ನೂಡಲ್ಸ್ ಬೇಯಿಸಿಕೊಂಡು ತಿನ್ನಲು ಇಷ್ಟಪಡುತ್ತಿದ್ದರು. ನಿನ್ನೆ ರಾತ್ರಿ ಆನ್‌ಲೈನ್‌ನಲ್ಲಿ ಖರೀದಿಸಿದ ನೂಡಲ್ಸ್ ಪ್ಯಾಕೆಟ್ ತೆಗೆದುಕೊಂಡು ಅದನ್ನು ಬೇಯಿಸಿ ಎಂದಿನಂತೆ ಕೊನೆಯದಾಗಿ ತಿಂದಿದ್ದಾಳೆ. ನಂತರ, ಅವಳು ಮಲಗಲು ಹೋದಳು.
ಆದರೆ, ಜಾಕ್ವೆಲಿನ್ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಸ್ಥಳೀಯರು ಜಾಕ್ವೆಲಿನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.ಇದರ ಬೆನ್ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸುಬ್ರಮಣಿಯನ್, ಅಮೆಜಾನ್‌ನಲ್ಲಿ ಖರೀದಿಸಿದ ಚೀನಾ ಕಂಪನಿಯ ಬುಲ್ಡಾಕ್ ನೂಡಲ್ಸ್ ಮತ್ತು ತಂಪು ಪಾನೀಯವನ್ನು ತಿಂದು 15 ವರ್ಷದ ಬಾಲಕಿ ನಿನ್ನೆ ತಿರುಚ್ಚಿಯಲ್ಲಿ ಸಾವನ್ನಪ್ಪಿದ್ದಾಳೆ.
ಕೂಡಲೇ ಆಹಾರ ಸುರಕ್ಷತಾ ಇಲಾಖೆ ಈ ಬಗ್ಗೆ ತನಿಖೆ ನಡೆಸಿದೆ ಎಂದರು. ‘‘ಕೆಲವು ಚೈನೀಸ್ ನೂಡಲ್ಸ್ ಲಭ್ಯತೆ ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ಬಳಿಕ ಸಗಟು ವ್ಯಾಪಾರಿಯಿಂದ ಅವಧಿ ಮೀರಿದ 800 ಕೆಜಿ ನೂಡಲ್ಸ್ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.