ಮತದಾರರಲ್ಲಿ ಜೆಡಿಎಸ್ ನ ಜಾತ್ಯಾತೀತ ನಿಲುವನ್ನು ದುರ್ಬಲಗೊಳಿಸಲಾಗುತ್ತಿದೆ ಎಂಬ ಅಭಿಪ್ರಾಯ ಹೆಚ್ಚುತ್ತಿದೆ ಎಂದು ಜೆಡಿಎಸ್ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರಲ್ಲಿ ಜೆಡಿಎಸ್ ನ ಜಾತ್ಯಾತೀತ ನಿಲುವು ಒಂದು ಕಡೆ ದುರ್ಬಲವಾಗುತ್ತಿದೆ ಎಂಬ ಅಭಿಪ್ರಾಯ ಜನರ ಮನಸ್ಸಿನಲ್ಲಿ ಮೂಡುತ್ತಿದೆ. ಬಿಜೆಪಿಗೆ ಸಂಬಂಧಿಸಿದಂತೆ ಪಕ್ಷದ ನಿಲುವು ಅಸ್ಪಷ್ಟವಾಗಿರುವ ಕಾರಣ ಮತ್ತು ಬಿಜೆಪಿಯನ್ನು ಪಕ್ಷ ಎಂದಿಗೂ ಬಲವಾಗಿ ವಿರೋಧಿಸಿಲ್ಲ ಎಂಬ ಬಗ್ಗೆ ಮತದಾರರಲ್ಲಿ ಅಸಮಾಧಾನವಿದೆ. ಈ ಬಗ್ಗೆ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳಲ್ಲಿ ಹೆಚ್ಚಾಗಿ ಕಾಣಬಹುದು ಎಂದು ಹೇಳಿದ್ದಾರೆ.
ಮುಂದುವರೆದು, ಪಕ್ಷದ ಮುಂದಿರುವ ಏಕೈಕ ಮಾರ್ಗವೆಂದರೆ ಸ್ಪಷ್ಟವಾದ ಸೈದ್ಧಾಂತಿಕ ನಿಲುವು. ಈ ಬಗ್ಗೆ ಪಕ್ಷವು ಎಲ್ಲ ವೇದಿಕೆಗಳಲ್ಲಿ ಸ್ಪಷ್ಟವಾಗಿ ಜನರಿಗೆ ತಿಳಿಸಬೇಕು. ಈ ಬಗ್ಗೆ ಪಕ್ಷದ ಸಭೆಗಳಲ್ಲಿಯೂ ಸಹ ಇದನ್ನು ಪುನರುಚ್ಚರಿಸಿರುವುದಾಗಿ ಹೇಳಿದ್ದಾರೆ.
ದೊಡ್ಡ ಗೌಡರ ಮೇಲೆ ಭರವಸೆ ಇದೆ !
ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ಹಲವಾರು ದಶಕಗಳಿಂದ ಇದ್ದೇವೆ. ದೇವೇಗೌಡರ ಜೊತೆ ನಾನು ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಜಾತ್ಯತೀತತೆಯ ಬಗ್ಗೆ ಅವರ ನಿಲುವು ಸ್ಪಷ್ಟವಾಗಿದೆ. ನಮಗೆ ದೊಡ್ಡ ಗೌಡರ ಮೇಲೆ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ತಮ್ಮ ನೇತೃದ್ವಲ್ಲಿ ಭೇಟಿ ಮಾಡಿ, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ರಾಗಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ವಿಚಾರವನ್ನು ಪ್ರಸ್ತಾಪಿಸಬೇಕು ಎಂದು ಸಹಕಾರ ಕೋರಿರುವುದಾಗಿ ತಿಳಿಸಿದರು.