ಮಹಾತ್ಮ ಗಾಂಧೀಜಿಯವರ 74ನೇ ಪುಣ್ಯಸ್ಮರಣೆಯಂದು ಗಾಂಧೀಜಿಯವರ ಉದಾತ್ತ ಆದರ್ಶಗಳನ್ನು ಜನರು ಸಾಮೂಹಿಕವಾಗಿ ಪಾಲಿಸಲು ಪ್ರಯತ್ನಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟ್ವೀಟ್ ಮಾಡಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ, ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಹೋರಾಟಗಾರರ ಸ್ಮರಣೆಗಾಗಿ ಈ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಈ ವೇಳೆ ಹೇಳಿದ್ದಾರೆ.
ನಮ್ಮ ದೇಶವನ್ನು ರಕ್ಷಿಸುವ ಎಲ್ಲಾ ಧೈರ್ಯಶಾಲಿಗಳಿಗೆ ನಾವು ಗೌರವ ಸಲ್ಲಿಸುತ್ಥೇವೆ ದೇಶಕ್ಕಾಗಿ ಅವರ ಸೇವೆ ಸದಾ ಸಮರಣೀಯ ಎಂದು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.