• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

29 ಹುಲಿಮರಿಗೆ ಜನ್ಮ ನೀಡಿದ್ದ ಸೂಪರ್ ಮಾಮ್ ಖ್ಯಾತಿಯ ಕಾಲರ್ ವಾಲಿ ಸಾವು

Any Mind by Any Mind
January 18, 2022
in ದೇಶ
0
29 ಹುಲಿಮರಿಗೆ ಜನ್ಮ ನೀಡಿದ್ದ ಸೂಪರ್ ಮಾಮ್ ಖ್ಯಾತಿಯ ಕಾಲರ್ ವಾಲಿ ಸಾವು
Share on WhatsAppShare on FacebookShare on Telegram

ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ಲೆಜೆಂಡ್ರಿ ಹುಲಿ “ಕಾಲರ್‌ವಾಲಿ” ವಯೋಸಹಜ ಕಾರಣದಿಂದ ಶನಿವಾರ ಸಂಜೆ ಸಾವನ್ನಪ್ಪಿದೆ. 17 ವರ್ಷದ ಹುಲಿ ತನ್ನ ಜೀವಿತಾವಧಿಯಲ್ಲಿ 29 ಮರಿಗಳಿಗೆ ಜನ್ಮ ನೀಡಿ “ಸೂಪರ್ ಮಾಮ್” ಮಾರತರಂ ಎಂದೂ ಪ್ರಸಿದ್ಧಿಯಾಗಿತ್ತು. ಈ ಲೆಜೆಂಡ್ರಿ ಹೆಣ್ಣುಹುಲಿ ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶ (PTR) ದಲ್ಲಿ ವಾಸವಿತ್ತು.

ADVERTISEMENT

ಅರಣ್ಯ ಇಲಾಖೆ ಈ ಸೂಪರ್ ಅಮ್ಮನಿಗೆ ಟಿ-15 ಎಂದು ಅಧಿಕೃತವಾದ ಹೆಸರು ನೀಡಿತ್ತು. ಆದರೂ ಸ್ಥಳೀಯರು ಅವಳನ್ನು ಪ್ರೀತಿಯಿಂದ ಕಾಲರ್ ವಾಲಿ ಎಂದು ಕರೆಯುತ್ತಿದ್ದರು. ಈ T-15 ಎಂದೂ ಕರೆಯಲ್ಪಡುವ ಹುಲಿಯು 2008 ಮತ್ತು 2018 ರ ನಡುವೆ ಅಂದರೆ ಹನ್ನೊಂದು ವರ್ಷಗಳ ಅವಧಿಯಲ್ಲಿ 29 ಮರಿಗಳಿಗೆ ಜನ್ಮ ನೀಡಿತ್ತು.

“ಹುಲಿಗೆ ವಯಸ್ಸಾದ ಕಾರಣ ಅಸ್ವಸ್ಥವಾಗಿತ್ತು. ಕಾಲರ್ ವಾಲಿ ಹುಲಿ ಕೊನೆಯದಾಗಿ ಜನವರಿ 14 ರಂದು ಭೂರಾ ದೇವ್ ನುಲ್ಲಾ ಬಳಿ ಮಲಗಿರುವಂತೆ ಕಾಣಿಸಿಕೊಂಡಿತ್ತು. ನಿರಂತರ ಪಶುವೈದ್ಯರ ನಿಗಾದಲ್ಲಿದ್ದ ಹುಲಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ದುರಾದೃಷ್ಟವಶಾತ್ ಶನಿವಾರ ಸಂಜೆ 6.15ಕ್ಕೆ ಕೊನೆಯುಸಿರೆಳೆದಿದೆ ಎಂದು ಪೆಂಚ್ ಟೈಗರ್ ರಿಸರ್ವ್ ಕ್ಷೇತ್ರ ನಿರ್ದೇಶಕ ಅಲೋಕ್ ಮಿಶ್ರಾ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಆದರೆ ಪ್ರಾಥಮಿಕವಾಗಿ ಇದು ವೃದ್ಧಾಪ್ಯದಿಂದ ಉಂಟಾದ ಸಾವು ಎಂದು ಅವರು ಹೇಳಿದ್ದಾರೆ.

ಹುಲಿ ಮರಿಯಾಗಿದ್ದಾಗಲೇ ಮಾರ್ಚ್ 2008 ರಲ್ಲಿ ಅರಣ್ಯ ಅಧಿಕಾರಿಗಳು ರೇಡಿಯೋ ಕಾಲರ್ ಅಳವಡಿಸಿದ್ದರು. ನಂತರ ರೇಡಿಯೋ ಕಾಲರ್ ತನ್ನ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು ಮತ್ತೆ ಜನವರಿ 2010ರಲ್ಲಿ ರೇಡಿಯೋ ಕಾಲರ್ ಅನ್ನು ಅಳವಡಿಸಲಾಗಿತ್ತು. ಹೀಗಾಗಿ ಹುಲಿಗೆ ಕಾಲರ್ ವಾಲಿ ಎಂದು ಹೆಸರು ಬಂತು. “ಕಾಲರ್ ವಾಲಿ” ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯ ಹುಲಿಯಾಗಿತ್ತು. 2005ರಲ್ಲಿ ಚಾರ್ಜರ್ ಎಂದು ಕರೆಯಲ್ಪಡುವ ಬಡಿಮಾಡ ಮತ್ತು T 1 ಎಂದು ಜನಪ್ರಿಯವಾಗಿರುವ T 7 ಗೆ ಜನಿಸಿತು. 2008 ರಲ್ಲಿ ಡೆಹ್ರಾಡೂನ್‌ನ ತಜ್ಞರ ತಂಡವು ಕಾಲರ್ ವಾಲಿ ಮೇಲೆ ರೇಡಿಯೊ ಕಾಲರ್ ಅನ್ನು ಅಳವಡಿಸಿತ್ತು ಎಂದು ತಿಳಿಸಿದ್ದಾರೆ.

ಮುಂದುವರೆದು, ಮೇ 2008 ರಲ್ಲಿ ಕಾಲರ್ ವಾಲಿ ಮೂರು ಮರಿಗಳಿಗೆ ಜನ್ಮ ನೀಡಿದ್ದಾದರು ಅವು ಬದುಕಲು ಸಾಧ್ಯವಾಗಲಿಲ್ಲ. ಆದರೆ “ಅಕ್ಟೋಬರ್ 2010 ರಲ್ಲಿ, ಒಂದೇ ಬಾರಿಗೆ ಐದು ಮರಿಗಳಿಗೆ ಜನ್ಮ ನೀಡಿತ್ತು ಇದರ ಪರಿಣಾಮ ವನ್ಯಜೀವಿ ಪ್ರಿಯರಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿತು ಎಂದಿದ್ದಾರೆ.

“16 ವರ್ಷಗಳಿಗಿಂತ ಹೆಚ್ಚು ಕಾಲ ಕಾಡಿನಲ್ಲಿ ವಾಸಿಸುತ್ತಿದ್ದ ಕಾಲರ್ ವಾಲಿಯ ಬದುಕು ಐತಿಹಾಸಿಕ ದಾಖಲೆಯಾಗಿದೆ. ತನ್ನ ಹೆಣ್ಣು ಮರಿಯನ್ನು ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದರಿಂದ ಆಕೆಯ ಪರಂಪರೆ ಪೆಂಚ್‌ಗೆ ಸೀಮಿತವಾಗಿಲ್ಲ ಬೇರೆ ಕಡೆಗೂ ವಿಸ್ತಾರಗೊಂಡಿದೆ ಎಂದು ಜಬಲ್ಪರದ ರಾಜ್ಯ ಅರಣ್ಯದ ವಿಜ್ಞಾನಿ ಅನಿರುದ್ಧ ಮಜುಂದಾರ್ ಹೇಳಿದರು.

ಜನವರಿ 14 ರಂದು ಹುಲಿ ಸಾವನಪ್ಪಿದ್ದು ಅದರ ಅಂತ್ಯಕ್ರಿಯೆಯಲ್ಲಿ ಹಲವಾರು ಸ್ಥಳೀಯರು ಭಾಗವಹಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಹುಲಿಗೆ ಹಾಕಲು ಹೂಮಾಲೆಯೊಂದಿಗೆ ಬಂದಿದ್ದರೆ, ಇತರರು ಹುಲಿಯ ಅಂತಿಮ ನಮನ ಸಲ್ಲಿಸಲು ಕೈ ಮುಗಿದು ನಿಂತಿದ್ದಾರೆ. ಈ ಚಿತ್ರಗಳು ಸಹ ಛಾಯಾಗ್ರಾಹಕರೊಬ್ಬರು ಕ್ಲಿಕ್ಕಿಸಿದ್ದಾರೆ.

The legendary tigress from Pench Tiger Reserve also popularly called Collarwali died due to old age, she had brought up 29 cubs in Pench during its lifetime. pic.twitter.com/U219RzykYi

— Anurag Dwary (@Anurag_Dwary) January 16, 2022

ಕಲಾರ್ ವಾಲಿ ಸಾವಿಗೆ ಅನೇಕ ರಾಜಕೀಯ ನಾಯಕರು, ಗಣ್ಯರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.

Legendary among legends. Collarwali the famous tigress who holds record of giving birth to 29 cubs. She is no more now. But left her species in good health. Pic by good friend @saroshlodhi pic.twitter.com/1WE7jNbFZs

— Parveen Kaswan (@ParveenKaswan) January 16, 2022

The Queen #collarwali is no more! Died because of old age!
Leaving behind her legacy and her 29 cubs. Her contribution is immense in restoring back the ecological balance by improving the tiger population in India 🐅
RIP 🙏 pic.twitter.com/aj0NrpwOBX

— India in Iceland (@indembiceland) January 16, 2022
Tags: Carnwali TigressDeathTiger
Previous Post

ಕಾಂಗ್ರೆಸ್ಸಿಗೆ ಹಾಕುವ ಪ್ರತಿ ಮತ ಬಿಜೆಪಿಗೆ ಸುರಕ್ಷಿತವಾಗಿ ತಲುಪುತ್ತದೆ : ಕೇಜ್ರಿವಾಲ್‌ ಕಿಡಿ

Next Post

ಓಮೈಕ್ರಾನ್ ಸೋಂಕು ಸಮುದಾಯಕ್ಕೆ ಹರಡಿದೆಯೇ? ಅಧ್ಯಯನ ವರದಿ ಹೇಳುವ ನೈಜತೆ ಏನು?

Related Posts

Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
0

ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 080 ಲಾಂಜ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆತಿಥ್ಯ ಕ್ಷೇತ್ರದಲ್ಲಿ ಒಟ್ಟು ಹತ್ತು ಜಾಗತಿಕ ಪ್ರಶಸ್ತಿ ದೊರೆತಿವೆ. ಸ್ಪೇನ್‌ನ...

Read moreDetails

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Neeraj Chopra: ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೇಟಿ ಮಾಡಿದ ನೀರಜ್‌ ಚೋಪ್ರ..!!

July 3, 2025
ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 

July 3, 2025

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025
Next Post
ಓಮೈಕ್ರಾನ್ ಸೋಂಕು ಸಮುದಾಯಕ್ಕೆ ಹರಡಿದೆಯೇ? ಅಧ್ಯಯನ ವರದಿ ಹೇಳುವ ನೈಜತೆ ಏನು?

ಓಮೈಕ್ರಾನ್ ಸೋಂಕು ಸಮುದಾಯಕ್ಕೆ ಹರಡಿದೆಯೇ? ಅಧ್ಯಯನ ವರದಿ ಹೇಳುವ ನೈಜತೆ ಏನು?

Please login to join discussion

Recent News

Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 
Top Story

Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

by Chetan
July 4, 2025
ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 
Top Story

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

by Chetan
July 4, 2025
ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

July 4, 2025

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada