• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಇಂದಿನಿಂದ ಬೂಸ್ಟರ್‌ ಡೋಸ್‌ ಲಸಿಕೆ : ರಾಜ್ಯ 21 ಲಕ್ಷ ಮಂದಿಗೆ ಮೂರನೇ ಡೋಸ್‌ ವ್ಯಾಕ್ಸಿನ್!

Any Mind by Any Mind
January 10, 2022
in ಕರ್ನಾಟಕ
0
ಇಂದಿನಿಂದ ಬೂಸ್ಟರ್‌ ಡೋಸ್‌ ಲಸಿಕೆ : ರಾಜ್ಯ 21 ಲಕ್ಷ ಮಂದಿಗೆ ಮೂರನೇ ಡೋಸ್‌ ವ್ಯಾಕ್ಸಿನ್!
Share on WhatsAppShare on FacebookShare on Telegram

ಇಂದಿನಿಂದ ದೇಶದಲ್ಲಿ ಬೂಸ್ಟರ್‌ ಡೋಸ್‌ ಲಸಿಕೆ ನೀಡಲು ಆರಂಭವಾಗುತ್ತಿದೆ. ಜನವರಿ 3ರಂದು ಮಕ್ಕಳ ಲಸಿಕಾ ಅಭಿಯಾನ ಆರಂಭಗೊಂಡಿದ್ದು ಜನವರಿ 10 ರಿಂದ ಮೂರನೇ ಡೋಸ್‌ ಎಂದರೆ ಬೂಸ್ಟರ್‌ ಡೋಸ್‌ ಲಸಿಕಾ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಜನವರಿ 3ರಂದು ಮಕ್ಕಳ ಲಸಿಕೆ ಆರಂಭಗೊಂಡರೂ ಮಂದಗತಿಯಲ್ಲಿ ಸಾಗುತ್ತಿದೆ. ಹಲವು ಕಾರಣಗಳಿಂದ ಮಕ್ಕಳು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ನಡುವೆ ಪೋಷಕರೂ ಕೂಡ ಲಸಿಕೆ ಬಗ್ಗೆ ಅಪನಂಬಿಕೆ ಹೊಂದಿದ್ದು ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಆದರೂ ಆರೋಗ್ಯ ಇಲಾಖೆ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಎಲ್ಲೆಡೆ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.

ADVERTISEMENT

ಕರೋನಾ ಮೂರನೇ ಅಲೆ ಆರಂಭವಾಗಿರುವ ಹಿನ್ನೆಲೆ ಬೂಸ್ಟರ್‌ ಡೋಸ್‌ ಗೆ ಬೇಡಿಕೆ ಹೆಚ್ಚಾಗಿತ್ತು. ಕೋಮಾರ್ಬಿಟ್‌ ರೋಗಿಗಳಿಗೆ ಬೂಸ್ಟರ್‌ ಡೋಸ್‌ ನೀಡುವ ಅಗತ್ಯತೆ ಇದೆ ಎಂಬ ನೆಲೆಗಟ್ಟಿನಲ್ಲಿ ತಜ್ಞರು ಮೂರನೇ ಡೋಸ್‌ ನೀಡುವ ಬಗ್ಗೆ ಸಲಹೆಯನ್ನು ನೀಡಿದ್ದರು. ಇದನ್ನು ಪುರಸ್ಕರಿಸಿದ ICMR ಕೇಂದ್ರ ಸರ್ಕಾರ ಮೂರನೇ ಡೋಸ್‌ ನೀಡುವ ಬಗ್ಗೆ ವರದಿ ಒಪ್ಪಿಸಿತ್ತು. ಇದನ್ನು ಒಪ್ಪಿಕೊಂಡ ಒಕ್ಕೂಟ ಸರ್ಕಾರ ಜನವರಿ 10 ರಿಂದ ಬೂಸ್ಟರ್‌ ಡೋಸ್‌ ನೀಡಲು ಚಾಲನೆ ನೀಡಿದೆ. ಅಂದಹಾಗೆ, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಈ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ.

ಬೂಸ್ಟರ್‌ ಡೋಸ್‌ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು :

ಮೂರನೇ ಡೋಸ್‌ ಪಡೆಯಲು ಹೊಸದಾಗಿ ಆನ್‌ ಲೈನ್‌ ನೋಂದಣಿ ಮಾಡುವ ಅಗತ್ಯವಿಲ್ಲ. ಅದಾಗಿಯೂ ಆನ್‌ ಲೈನ್‌ ನಲ್ಲಿ ನೋಂದಣಿ ಮಾಡಿಕೊಳ್ಳಲೂ ಅವಕಾಶ ನೀಡಲಾಗಿದೆ. ಮೊದಲು ಯಾವ ಲಸಿಕೆ ಪಡೆದಿರುತ್ತಾರೋ ಅದೇ ಲಸಿಕೆಯನ್ನಷ್ಟೇ ಮೂರನೇ ಡೋಸ್‌ ಆಗಿ ಪಡೆಯಬೇಕು. (ಮೊದಲೆರಡು ಬಾರಿ ಕೋವ್ಯಾಕ್ಸಿನ್‌ ಪಡೆದಿದ್ದರೆ ಮೂರನೇ ಬಾರಿಯೂ ಕೋವ್ಯಾಕ್ಸಿನ್‌ ಅನ್ನೇ ಪಡೆಯುವುದು ಕಡ್ಡಾಯ). ಮೊದಲೆರಡು ಡೋಸ್‌ ಪಡೆದು 9 ತಿಂಗಳು (39 ವಾರಗಳು) ಕಳೆದಿರಬೇಕು. ಮೂರನೇ ಡೋಸ್‌ ಪಡೆಯಲು ಬರುವಾಗ ಮೊದಲೆರಡು ಬಾರಿ ಪಡೆದ ಲಸಿಕಾ ಪ್ರಮಾಣ ಪತ್ರ ಹೊಂದಿರಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಲಸಿಕಾ ಕೇಂದ್ರಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಬಿಬಿಎಂಪಿ ಪಿಎಚ್ ಸಿ ಕೇಂದ್ರಗಳಲ್ಲಿ ಬೂಸ್ಟರ್‌ ಡೋಸ್‌ ಪಡೆಯಬಹುದಾಗಿದೆ.

ಇಂದು ಬೆಂಗಳೂರಿನ ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿಧ್ಯಾಲಯದಲ್ಲಿ ಬೂಸ್ಟರ್‌ ಡೋಸ್‌ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು ಬೂಸ್ಟರ್‌ ಡೋಸ್‌ ಪಡೆಯಲು 21 ಲಕ್ಷ ಮಂದಿ ಅರ್ಹ ಫಲಾನುವಭವಿಗಳಿದ್ದಾರೆ. ಈ ಪೈಕಿ ಆರೋಗ್ಯ ಕಾರ್ಯಕರ್ತರು 6 ಲಕ್ಷ, ಕರೋನಾ ವಾರಿಯರ್ಸ್ 7 ಲಕ್ಷ‌ ಹಾಗೂ 60 ವರ್ಷ ಮೇಲ್ಪಟ್ಟ ಮತ್ತು ಅನಾರೋಗ್ಯ ಇರುವವರು 8 ಲಕ್ಷ ಮಂದಿ ಇದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸದ್ಯ ಇಡೀ ದೇಶದಲ್ಲಿ 148 ಕೋಟಿ ಡೋಸ್‌ ಲಸಿಕೆ ಹಂಚಿಕೆಯಾಗಿದೆ. ಈ ಪೈಕಿ 91% ನಷ್ಟು ಜನರು ಮೊದಲ ಡೋಸ್‌ ಪಡೆದುಕೊಂಡಿದ್ದಾರೆ. 66% ನಷ್ಟು ಮಂದಿ ಎರಡೂ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನು 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಒಂದು ವಾರಗಳ ಹಿಂದೆಯಷ್ಟೇ ಲಸಿಕೆ ಅಭಿಯಾನ ಆರಂಭಿಸಿದ್ದು, ಈಗಾಗಲೇ ದೇಶದ 17% ರಷ್ಟು ಮಕ್ಕಳು ಮೊದಲ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

Tags: Covid 19ಕರೋನಾಕೋವಿಡ್ ವ್ಯಾಕ್ಸಿನ್ಕೋವಿಡ್-19ಬೂಸ್ಟರ್‌ ಡೋಸ್‌ಲಸಿಕೆ
Previous Post

ಮದರ್ ಥೆರೆಸಾರ ಚಾರಿಟಿಯ ಪರವಾನಗಿ ನವೀಕರಿಸಿದ ಕೇಂದ್ರ : ಬ್ರಿಟನ್ ಸಂಸತ್ತಿನ ಟೀಕೆಗೆ ಬೆದರಿತೇ ಸರ್ಕಾರ?

Next Post

ಪಂಚ ರಾಜ್ಯ ಚುನಾವಣೆ ಹಿನ್ನೆಲೆ : ವ್ಯಾಕ್ಸಿನ್‌ ಸರ್ಟಿಫಿಕೇಟ್‌ ಮೇಲಿರುವ ಮೋದಿ ಫೋಟೋ ತೆಗೆಯಲು ಆಯೋಗ ಸೂಚನೆ!

Related Posts

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ
Top Story

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

by ಪ್ರತಿಧ್ವನಿ
April 20, 2026
0

ಬೆಂಗಳೂರು : ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರ ಮಾಜಿ ಸಂಸದ ಡಾ. ಚೆಲ್ಲ ಕುಮಾರ್ ಡಿ.ಎಂ.ಕೆ. ನೇತೃತ್ವದ ಮೈತ್ರಿಕೂಟದಲ್ಲಿ ಕೃಷ್ಣಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ...

Read moreDetails
BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

April 20, 2026
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
Next Post
ಪಂಚ ರಾಜ್ಯ ಚುನಾವಣೆ ಹಿನ್ನೆಲೆ : ವ್ಯಾಕ್ಸಿನ್‌ ಸರ್ಟಿಫಿಕೇಟ್‌ ಮೇಲಿರುವ ಮೋದಿ ಫೋಟೋ ತೆಗೆಯಲು ಆಯೋಗ ಸೂಚನೆ!

ಪಂಚ ರಾಜ್ಯ ಚುನಾವಣೆ ಹಿನ್ನೆಲೆ : ವ್ಯಾಕ್ಸಿನ್‌ ಸರ್ಟಿಫಿಕೇಟ್‌ ಮೇಲಿರುವ ಮೋದಿ ಫೋಟೋ ತೆಗೆಯಲು ಆಯೋಗ ಸೂಚನೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada