• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಪಂಚ ರಾಜ್ಯ ಚುನಾವಣೆ ಹಿನ್ನೆಲೆ : ವ್ಯಾಕ್ಸಿನ್‌ ಸರ್ಟಿಫಿಕೇಟ್‌ ಮೇಲಿರುವ ಮೋದಿ ಫೋಟೋ ತೆಗೆಯಲು ಆಯೋಗ ಸೂಚನೆ!

Any Mind by Any Mind
January 10, 2022
in ರಾಜಕೀಯ, ವಿದೇಶ
0
ಪಂಚ ರಾಜ್ಯ ಚುನಾವಣೆ ಹಿನ್ನೆಲೆ : ವ್ಯಾಕ್ಸಿನ್‌ ಸರ್ಟಿಫಿಕೇಟ್‌ ಮೇಲಿರುವ ಮೋದಿ ಫೋಟೋ ತೆಗೆಯಲು ಆಯೋಗ ಸೂಚನೆ!
Share on WhatsAppShare on FacebookShare on Telegram

ಕೋವಿಡ್‌ ಲಸಿಕ ಪ್ರಮಾಣ ಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಇರುವುದು ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಈ ಬಗ್ಗೆ ಪರ ವಿರೋಧದ ಚರ್ಚೆಗಳೂ ನಡೆದಿದ್ದವು. ಇದೀಗ ಪಂಚ ರಾಜ್ಯ ಚುನಾವಣೆ ಸಮೀಪಿಸಿದ ಹಿನ್ನೆಲೆ ಕೋವಿಡ್‌ ಲಸಿಕಾ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಫೋಟೋ ತೆಗೆಯಲು ನಿರ್ಧರಿಸಲಾಗಿದೆ.

ADVERTISEMENT

ಲಸಿಕೆ ಪ್ರಮಾಣ ಪತ್ರದಲ್ಲಿರುವ ಮೋದಿ ಫೋಟೋ ತೆಗೆಯಲು ಆಯೋಗ ತಾಕೀತು!

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಮಣಿಪುರ, ಹಾಗೂ ಗೋವಾದಲ್ಲಿ ಏಕಕಾಲದಲ್ಲಿ ವಿಧಾನಸಭಾ ಚುನಾವಣೆ ಜರುಗಲಿದೆ. ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಚುನಾವಣಾ ಆಯೋಗ ಫೆಬ್ರವರಿ 10 ರಿಂದ ಮಾರ್ಚ್‌ 7ರವರೆಗೆ, ಒಟ್ಟು ಏಳು ಹಂತಗಳಲ್ಲಿ ಈ ಪಂಚರಾಜ್ಯ ಚುನಾವಣೆ ನಡೆಯಲಿದೆ ಎಂದು ಹೇಳಿದೆ. ಮಾರ್ಚ್‌ 10ಕ್ಕೆ ಮತ ಎಣಿಕೆ ನಡೆಯಲಿದೆ. ಹೀಗಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿರುವ ಹಿನ್ನೆಲೆ ಕೊರೋನಾ ಲಸಿಕೆ ಸರ್ಟಿಫಿಕೇಟ್‌ನಲ್ಲಿರುವ ಮೋದಿಯ ಫೋಟೋವನ್ನು ತೆಗೆಯಲು ಸೂಚಿಸಲಾಗಿದೆ.

ಚುನಾವಣೆ ನೀತಿ ಸಂಹಿತೆಯನುಸಾರ ರಾಜಕೀಯ ಪಕ್ಷಗಳ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಲಿ, ಪ್ರಚಾರ ಪಡೆದುಕೊಳ್ಳುವುದಾಗಲಿ ನಿಷೇಧಿಸಲಾಗಿದೆ. ಇದು ಎಲ್ಲಾ ಮಾದರಿಯ ಚುನಾವಣೆಗೂ ಅನ್ವಯವಾಗಲಿದೆ. ಹೀಗಾಗಿ ಕೊರೋನಾ ವ್ಯಾಕ್ಸಿನ್ ಸರ್ಟಿಫಿಕೇಟ್‌‌ ಮೇಲಿರುವ ಮೋದಿ ಫೋಟೋವನ್ನು ತೆಗೆಯಲು ಹೇಳಲಾಗಿದೆ.

ಈ ಹಿಂದೆಯೂ ಹೀಗಿಯೇ ಫೋಟೋ ತೆಗೆಸಿದ್ದ ಚುನಾವಣಾ ಆಯೋಗ!

ಈ ಬಗ್ಗೆ PTI ವರದಿ ಮಾಡಿದ್ದು, ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿನ್‌ ಪೋರ್ಟಲ್‌ನಿಂದ ಕೊರೋನಾ ಸರ್ಟಿಫಿಕೇಟ್‌ ಮೇಲಿರುವ ಪ್ರಧಾನಿ ಮೋದಿ ಫೋಟೋವನ್ನು ತೆಗೆಯಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ ಎಂದು ತಿಳಿಸಿದೆ. 201ರ ಮಾರ್ಚ್‌ ನಲ್ಲಿ ನಡೆದ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಹಾಗೂ ಪಾಂಡಿಚೇರಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ವಿರೋಧ ಕೇಳಿ ಬಂದ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗ ಇದೇ ರೀತಿಯಲ್ಲಿ ಲಸಿಕ ಸರ್ಟಿಫಿಕೇಟ್‌ ಮೇಲಿರುವ ತೆಗೆಯಲು ಸೂಚಿಸಲಾಗಿತ್ತು. ಇದೀಗ ಈ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಮೋದಿ ಭಾವಚಿತ್ರ ತೆಗೆಯಲು ಆಯೋಗ ಹೇಳಿದೆ.

Tags: BJPCongress PartyCovid 19ಕರೋನಾಕೋವಿಡ್-19ಚುನಾವಣಾ ಆಯೋಗನರೇಂದ್ರ ಮೋದಿಪಂಚ ರಾಜ್ಯ ಚುನಾವಣೆಬಿಜೆಪಿಮೋದಿ ಫೋಟೋವ್ಯಾಕ್ಸಿನ್‌ ಸರ್ಟಿಫಿಕೇಟ್‌
Previous Post

ಇಂದಿನಿಂದ ಬೂಸ್ಟರ್‌ ಡೋಸ್‌ ಲಸಿಕೆ : ರಾಜ್ಯ 21 ಲಕ್ಷ ಮಂದಿಗೆ ಮೂರನೇ ಡೋಸ್‌ ವ್ಯಾಕ್ಸಿನ್!

Next Post

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ : ಡಿಕೆಶಿ, ಸಿದ್ದರಾಮಯ್ಯ ಸೇರಿ 35 ಜನರ ವಿರುದ್ದ ಪ್ರಕರಣ ದಾಖಲಿಸಿದ ರಾಜ್ಯ ಸರ್ಕಾರ

Related Posts

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!
ರಾಜಕೀಯ

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

by ಪ್ರತಿಧ್ವನಿ
April 26, 2026
0

ರಾಘವ್ ಚಡ್ಡಾ ಅವರ ರಾಜಕೀಯ ಪಯಣದಲ್ಲಿ ಮಹತ್ವದ ತಿರುವು ಕಂಡುಬಂದಿದ್ದು, ಅವರು ಹೊಸ ರಾಜಕೀಯ ದಾರಿಗೆ ಹೆಜ್ಜೆಯಿಟ್ಟಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಆಮ್ ಆದ್ಮಿ...

Read moreDetails
ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

April 25, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
Next Post
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ : ಡಿಕೆಶಿ, ಸಿದ್ದರಾಮಯ್ಯ ಸೇರಿ 35 ಜನರ ವಿರುದ್ದ ಪ್ರಕರಣ ದಾಖಲಿಸಿದ ರಾಜ್ಯ ಸರ್ಕಾರ

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ : ಡಿಕೆಶಿ, ಸಿದ್ದರಾಮಯ್ಯ ಸೇರಿ 35 ಜನರ ವಿರುದ್ದ ಪ್ರಕರಣ ದಾಖಲಿಸಿದ ರಾಜ್ಯ ಸರ್ಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada