ಜನವರಿ 3ರಿಂದ ಮಕ್ಕಳಿಗೆ ಲಸಿಕೆ ಹಾಗೂ 10ರ ಬಳಿಕ ಆರೋಗ್ಯ, ಮುಂಚೂಣಿ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತದೆ. ಈಗಾಗಲೇ ಈ ಬಗ್ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು ದೇಶದ ಎಲ್ಲಾ ರಾಜ್ಯಗಳು ಕೂಡ ಮಕ್ಕಳ ಹಾಗೂ ಬೂಸ್ಟರ್ ಡೋಸ್ ಲಸಿಕೆ ನೀಡಲು ಸಿದ್ಧತೆ ಮಾಡಿಕೊಂಡಿದೆ.
ಬೂಸ್ಟರ್ ಡೋಸ್ ನೀಡುವ ವಿವರ :
60 ವರ್ಷದ ಮೇಲ್ಪಟ್ಟ ಅನಾರೋಗ್ಯ ಹೊಂದಿರುವ ವಯಸ್ಕರು ವೈದ್ಯರ ಸಲಹೆ ಮೇರೆಗೆ ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದಾಗಿದೆ. ಎರಡು ಡೋಸ್ ಪಡೆದು 9 ತಿಂಗಳು ಪೂರೈಸಿದ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಬೂಸ್ಟರ್ ಲಸಿಕೆ ಪಡೆಯಲು ಅವಕಾಶ. ಈಗಾಗಲೇ ಸ್ಥಾಪಿಸಲಾಗಿರುವ ಲಸಿಕಾ ಕೇಂದ್ರಗಳಲ್ಲಿಯೇ ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆ ಪಡೆಯಬಹುದಾಗಿದೆ. ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೂ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಉದ್ಯೋಗ ಪ್ರಮಾಣ ಪತ್ರ ಆಧಾರದ ಮೇರೆಗೆ ಆರೋಗ್ಯ & ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಪಡೆಯಬಹುದು. 60 ವರ್ಷ ಮೇಲ್ಪಟ್ಟವರು, ಆರೋಗ್ಯ ಮತ್ತು ಮುಂಚೂಣಿ ಎಲ್ಲರಿಗೂ ವಾಕ್ ಇನ್ ಲಸಿಕೆ ಲಭ್ಯವಿರಲಿದೆ.
ಮಕ್ಕಳಿಗೆ ಲಸಿಕೆ ನೀಡುವ ವಿವರ :
2007ರಲ್ಲಿ ಅಥವಾ ಅದಕ್ಕಿಂತ ಮೊದಲು ಜನಿಸಿದ ಎಲ್ಲಾ ಮಕ್ಕಳೂ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ವಾರ್ಡ್ ಮಟ್ಟದಲ್ಲಿ ಮಕ್ಕಳ ಪೋಷಕರಿಗೆ ಲಸಿಕೆ ಬಗ್ಗೆ ಮನವರಿಕೆ ಕಾರ್ಯಕ್ರಮ ಸರ್ಕಾರ ಆಯೋಜಿಸಲಿದೆ. ಕೋವ್ಯಾಕ್ಸಿನ್ ನ 0.05 ml ಡೋಸ್ ಮಕ್ಕಳಿಗೆ ನೀಡಲಾಗುತ್ತದೆ. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಮಕ್ಕಳಿಗೆ ಎರಡನೇ ಡೋಸ್ ಮಕ್ಕಳಿಗೆ ಸಿಗಲಿದೆ.

ಮಕ್ಕಳಿಗೆ ಮೊಬೈಲ್ ಸಂಖ್ಯೆ ಇದ್ದರೆ ಅವರ ನಂಬರ್ ರೆಜಿಸ್ಟರ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಪೋಷಕರು ಅಥವಾ ಶಾಲೆಯ ಮುಖ್ಯೋಪಾಧ್ಯಾಯರ ನಂಬರ್ ರೆಜಿಸ್ಟರ್ ಮಾಡಿಕೊಂಡು ಲಸಿಕೆ ಪಡೆಯಬಹುದಾಗಿದೆ. ಮಕ್ಕಳ ಆಧಾರ್ ಕಾರ್ಡ್ ಅಥವಾ ಶಾಲೆಯ ಗುರುತಿನ ಚೀಟಿ ಲಸಿಕೆ ಪಡೆಯುವ ವೇಳೆ ಲಗತ್ತಿಸಬೇಕು. 15 ರಿಂದ 18 ವಯೋಮಿತಿಯಲ್ಲಿನ ಮಕ್ಕಳು ಓದುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಂದೆ ನಿಂತು ಲಸಿಕೆ ಕ್ಯಾಂಪ್ ಆಯೋಜಿಸಬೇಕು. Only online http://drugstore-onlinecatalog.com/ legitimate pharmacies for sale that have been FDA licensed as a legitimate online pharmacy. ರಾಜ್ಯದ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ತಮಗೆ ಬೇಕಾದ ಡೋಸ್ ಗಳ ಮಾಹಿತಿಯನ್ನು ಜಿಲ್ಲಾ ಡಿಎಚ್ಓಗಳಿಗೆ ನೀಡುವುದು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯಾ ಝೋನ್ ಜಂಟಿ ಆಯುಕ್ತರಿಗೆ ಸಲ್ಲಿಸುವುದು ಮಾಹಿತಿ ಸಲ್ಲಿಸುವುದು. ಇತರೆ ಕಾಯಿಲೆ ಇರುವ ಮಕ್ಕಳಿಗೆ ಲಸಿಕೆ ನೀಡಲು ವೈದ್ಯರ ಪತ್ರ ಹಾಗೂ ಪೋಷಕರ ಸಹಮತ ಪತ್ರ ಕಡ್ಡಾಯವಾಗಿರಲಿದೆ. 15 ದಿನಗಳ ಒಳಗಾಗಿ ಟಿಡಿ ಅಥವಾ ಇನ್ನಿತರ ಲಸಿಕೆ ಪಡೆದಿದ್ದರೆ ಅಂಥಾ ಮಕ್ಕಳಿಗೆ 15 ದಿನಗಳ ನಂತರ ಲಸಿಕೆ ನೀಡಲು ಸೂಚನೆ. ಮಕ್ಕಳಿಗೆ ಲಸಿಕೆ ನೀಡಲು ಕನಿಷ್ಠ ಮೂರು ಕೌಂಟರ್ ಗಳ ವ್ಯವಸ್ಥೆ ಮಾಡುಬೇಕು. 18 ವರ್ಷ ಮೇಲ್ಪಟ್ಟವರ ಲಸಿಕಾ ಕೌಂಟರ್ ಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ಇಲ್ಲ. ಆಫ್ ಲೈನ್ ವಿದ್ಯಾರ್ಥಿಗಳಿಗೆ ಆಯಾ ಶಾಲೆ/ಕಾಲೇಜುಗಳೇ ಮುಂದೆ ನಿಂತು ಲಸಿಕೆ ಪಡೆಯುವಂತೆ ನೋಡಿಕೊಳ್ಳುಬೇಕು. ಖಾಸಗಿ ಆಸ್ಪತ್ರೆಯಲ್ಲೂ ಮಕ್ಕಳಿಗೆ ಪೋಷಕರು ಲಸಿಕೆ ಹಾಕಿಸಿಕೊಳ್ಳಬಹುದು. ಶಾಲೆ/ಕಾಲೇಜಿನಿಂದ ಹೊರಗುಳಿದಿರುವ ಮಕ್ಕಳಿಗೆ ನಗರಾಭಿವೃದ್ಧಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಅಹಯೋಗದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕೆಂದು ಆದೇಶಿಸಲಾಗಿದೆ.
ಹೀಗೆ ಕೊರೊನಾ ಆಗಮಿಸಿದ 2 ವರ್ಷಗಳ ಬಳಿಕ ಮಕ್ಕಳಿಗೆ ಲಸಿಕೆ ಲಭಿಸುತ್ತಿದೆ. ಇದೇ ವೇಳೆ ಓಮೈಕ್ರಾನ್ ನಿಂದ ಮೂರನೇ ಅಲೆಯೂ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೂ ಮೂರನೇ ಡೋಸ್ ಅಂದರೆ ಬೂಸ್ಟರ್ ಡೋಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.













