ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಗಳಲ್ಲಿ ಒಬ್ಬರಾದ ಭಾರತ ತಂಡದ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಕ್ರಿಕೆಟಿನ ಎಲ್ಲ ಮಾದರಿಗಳಿಗೂ ಇಂದು ವಿದಾಯ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಟರ್ಬೋನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ʻʻಎಲ್ಲಾ ಒಳ್ಳೆಯ ಸಂಗತಿಗಳು ಇಂದಿಗೆ ಕೊನೆಗೊಂಡಿವೆ. ಇಂದು ನಾನು ಜೀವನದಲ್ಲಿ ನನಗೆ ಎಲ್ಲವನ್ನು ನೀಡಿದ ಆಟಕ್ಕೆ ವಿದಾಯ ಹೇಳುತ್ತಿರುವೆ. ಸುದೀರ್ಘ 23 ವರ್ಷಗಳ ಕ್ರಿಕೆಟ್ ಪ್ರಯಾಣದಲ್ಲಿ ಸುಂದರ ಮತ್ತು ಸ್ಮರಣೀಯ ನೆನಪುಗಳನ್ನು ಕೊಟ್ಟ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸಲು ಬಯಸುವೆ,” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಪಂಜಾಬ್ ಮೂಲದ ಹರ್ಭಜನ್ ಸಿಂಗ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್, 236 ಎಕದಿನ ಪಂದ್ಯಗಳಿಂದ 269 ವಿಕೆಟ್ ಹಾಗೂ 28 ಟಿ-20 ಪಂದ್ಯಗಳಿಂದ 25 ವಿಕೆಟ್ ಪಡೆದಿದ್ದಾರೆ.
1998ರಲ್ಲಿ ನ್ಯೂಜಿಲೆಂಡ್ ವಿರುದ್ದ ಶಾರ್ಜಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪಾದಾರ್ಪನೆ ಮಾಡಿದ ಹರ್ಭಜನ್, ಕೊನೆಯದಾಗಿ 2016ರಲ್ಲಿ ಢಾಕಾದಲ್ಲಿ ಯುಎಇ ವಿರುದ್ದ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಕೊನೆ ಪಂದ್ಯ ಆಡಿದ್ದರು. ಐಪಿಎಲ್ ನಲಲಿ ಅವರು ಮುಂಬೈ ಇಂಡಿಯನ್ಸ್, ಚೆನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ರೈಡರ್ಸ್ ತಂಡವನ್ನ ಪ್ರತಿನಿಸಿದ್ದರು.
2001ರ ಮಾರ್ಚ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲ ಹ್ಯಾಟ್ರಿಕ್ ಪಡೆದ ಭಾರತೀಯ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಒಟ್ಟು 32 ವಿಕೆಟ್ಗಳನ್ನು ಅವರು ಪಡೆದಿದ್ದರು ಮತ್ತು ಆ ಸರಣಿಯನ್ನು ಅವಿಸ್ಮರಣೀಯವಾಗಿಸಿದ್ದರು. 2007 ಟ-20 ವಿಶ್ವಕಪ್ ಮತ್ತು 2011ರ ಎಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು.
ಈ ಬಗ್ಗೆ ವಿಡಿಯೋ ಒಂದನ್ನು ತಮ್ಮದೇ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿರುವ ಹರ್ಭಜನ್ ʻಜಲಂಧರ್ನ ಕಿರಿದಾದ ಬೀದಿಯಿಂದ ಭಾರತದ ಟರ್ಬೋನೇಟರ್ ಆಗುವವರೆಗೆ ಎಂದು ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ವಿದಾಯ ಕುರಿತ ಯೋಚನೆ ನನ್ನ ತಲೆಯಲ್ಲಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲು ಬಹಳ ಸಮಯವನ್ನು ತೆಗೆದುಕೊಂಡಿತು.. ಎಲ್ಲಾ ಕ್ರಿಕೆಟಿಗರಂತೆ ನಾನು ಭಾರತೀಯ ಜೆರ್ಸಿಯಲ್ಲಿ ವಿದಾಯ ಹೇಳಲು ಬಯಸಿದೆ. ಆದರೆ, ವಿಧಿ ನನ್ನ ಹಣೆಬರಹದಲ್ಲಿ ಬೇರೆಯದ್ದನ್ನು ಬರೆದಿತ್ತು ಎಂದು ದುಃಖದಿಂದ ಹೇಳಿದ್ದಾರೆ.
ಹರ್ಭಜನ್ ನಿವೃತಿ ಘೋಷಣೆಯನ್ನು ಸ್ವಾಗತಿಸಿರುವ ಹಿರಿಯ ಆಟಗಾರ ವಿ.ವಿ.ಎಸ್. ಲಕ್ಷ್ಮಣ್ ಮತ್ತು ಬಿಸಿಸಿಐ ಕೂಡ ಹರ್ಭಜನ್ ನಿರ್ಧಾರವನ್ನ ಟ್ವೀಟ್ ಮಾಡುವ ಮೂಲಕ ಸ್ವಾಗತಿಸಿ, ಮುಂದಿನ ಜೀವನಕ್ಕೆ ಶುಭಹಾರೈಸಿದ್ದಾರೆ.