ಭಾರತದ ಷೇರು ಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಇಂದು ಕುಸಿತ ಕಂಡ ಪರಿಣಾಮ ದಿನದ ಲಾಭಂಶದಲ್ಲಿ ಶೇ.1% ಕಡಿಮೆಯಾಗಿದೆ. ಸತತ ಎರಡನೆಯ ಇಳಿಕೆ ಇದಾಗಿದ್ದು, ಸೋಮವಾರ ದಿನಾಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕವು 503.25 ಪಾಯಿಂಟ್ಸ್ ಅಥವಾ ಶೇ 0.86ರಷ್ಟು ಕುಸಿತವಾಗಿ, 58,283.42 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಕ್ತಾಯಗೊಂಡಿದೆ.
ಈ ದಿನದ ವಹಿವಾಟಿನಲ್ಲಿ 1840 ಕಂಪೆನಿಗಳ ಷೇರು ಏರಿಕೆ ದಾಖಲಿದ್ದರೆ 1554 ಕಂಪೆನಿಯ ಷೇರುಗಳು ಇಳಿಕೆ ಕಂಡವು. ಸೆನೆಕ್ಸ್ ಪ್ಯಾಕ್ನಲ್ಲಿ ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್ಸರ್ವ್ ನಿಧಾನಗತಿಯಲ್ಲಿ ಮುಂದಿದ್ದವು. ನಂತರದ ಸ್ಥಾನಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಮಹೀಂದ್ರಾ ಮತ್ತು ಮಹೀಂದ್ರಾ, ನೆಸ್ಲೆ ಇಂಡಿಯಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಭಾಂಶದಲ್ಲಿ ಗುರುತಿಸಿಕೊಂಡವು.
ಮತ್ತೊಂದೆಡೆ ಆಕ್ಸಿಸ್ ಬ್ಯಾಂಕ್, ಟೆಕ್ ಮಹೀಂದ್ರಾ, ಮಾರುತಿ ಸುಜುಕಿ ಇಂಡಿಯಾ, ಪವರ್ ಗ್ರಿಡ್ ಕಾರ್ಪೋರೇಷನ್ ಇಂಡಿಯಾ, ಟೈಟಾನ್ ಕಂಪನಿ ಮತ್ತು ರೆಡ್ಡಿ ಲ್ಯಾಬೋರೇಟರಿ ಲಾಭಾಂಶದಲ್ಲಿ ಮುಂದಿದ್ದವು.
ಇನ್ನು 158 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ವಲಯವಾರು ಬೆಳವಣಿಗೆ ಗಮನಿಸಿದರೆ ನಿಫ್ಟಿಯ ಮಾಹಿತಿ ತಂತ್ರಜ್ಞಾನ ಹೊರತುಪಡಿಸಿ ಉಳಿದೆಲ್ಲವೂ ಇಳಿಕೆ ಕಂಡಿವೆ. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇ 0.5ರಷ್ಟು ಇಳಿದು, ಸ್ಮಾಲ್ಕ್ಯಾಪ್ ಸೂಚ್ಯಂಕ ಶೇ 20ರಷ್ಟು ಏರಿಕೆ ಕಂಡಿತು.
ಇನ್ನು ನಿಫ್ಟಿ ಸೂಚ್ಯಂಕವು 143 ಪಾಯಿಂಟ್ಸ್ ಅಥವಾ ಶೇ 0.82ರಷ್ಟು ಇಳಿಕೆ ಕಂಡು, 17,368.30 ಪಾಯಿಂಟ್ಸ್ನೊಂದಿಗೆ ವಹಿವಾಟು ಚುಕ್ತಾಗೊಳಿಸಿದೆ.
ವಲಯದ ಸೂಚ್ಯಂಕಗಳಲ್ಲಿ ಬ್ರಿಗೇಡ್ ಎಂಟರ್ಪ್ರೈಸಸ್ ಮತ್ತು ಶೋಭಾದಿಂದ ತೂಗುವ ನಿಫ್ಟಿ ರಿಯಾಲ್ಟಿ ಸೂಚ್ಯಂಕವು ಶೇ.1.35% ರಷ್ಟು ಕುಸಿದಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನೆರಾಬ್ಯಾಂಕ್ ಶೇ.1.34% ರಷ್ಟು ಎಳೆದಿದೆ. ರಾಡಿಕೋ ಮತ್ತು ಟಾಟಾ ಗ್ರಾಹಕ ಉತ್ಪನಗಳ ಕುಸಿತದಿಂದಾಗಿ ನಿಫ್ಟಿ ಎಫ್ಎಂಸಿಜಿ ಸೂಚ್ಯಂಕವು ಶೇ.0.96%ಕ್ಕೆ ಕುಸಿತ ಕಂಡಿದೆ.