• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸಾಲ ಬಾಕಿ, ಆಡಳಿತ ವೈಫಲ್ಯ : ರಿಲಯನ್ಸ್ ಕ್ಯಾಪಿಟಲ್ ನಿರ್ದೇಶಕ ಮಂಡಳಿಯನ್ನು ತನ್ನ ವಶಕ್ಕೆ ಪಡೆದ RBI

Any Mind by Any Mind
November 29, 2021
in ದೇಶ, ರಾಜಕೀಯ
0
ಸಾಲ ಬಾಕಿ, ಆಡಳಿತ ವೈಫಲ್ಯ :  ರಿಲಯನ್ಸ್ ಕ್ಯಾಪಿಟಲ್ ನಿರ್ದೇಶಕ ಮಂಡಳಿಯನ್ನು ತನ್ನ ವಶಕ್ಕೆ ಪಡೆದ RBI
Share on WhatsAppShare on FacebookShare on Telegram

ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾಗಿರುವ ರಿಲಯನ್ಸ್​ ಕ್ಯಾಪಿಟನ್ ಕಂಪನಿಯ ಆಡಳಿತ ಮಂಡಳಿಯನ್ನು ಭಾರತೀಯ ರಿಸರ್ವ್​ ಬ್ಯಾಂಕ್ (RBI) ಸೋಮವಾರ ಸೂಪರ್​ಸೀಡ್ ಮಾಡಿದೆ.

ADVERTISEMENT

ನಿರ್ದೇಶಕರ ಮಂಡಳಿ ಸಮರ್ಪಕವಾಗಿ ಆಡಳಿತ ನಿರ್ವಹಿಸುವಲ್ಲಿ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಮತ್ತು ಸಾಲ ಮರು ಪಾವತಿಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸೂಪರ್ ಸೀಡ್ ಮಾಡಲಾಗಿದ್ದು, ಆಡಳಿತಾಧಿಕಾರಿಯಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರರಾವ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕ ಮಾಡಿದೆ.

ರಿಲಯನ್ಸ್ ಕ್ಯಾಪಿಟಲ್ ಕಂಪನಿ ವಿರುದ್ಧ ದಿವಾಳಿ ಕಾಯ್ದೆ ಅನ್ವಯ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರಕ್ಕೆ ದಿವಾಳಿ ನಿಯಮಗಳನ್ವಯ ರಿಲಯನ್ಸ್ ಆಸ್ತಿಯನ್ನು ವಿಲೇ ಮಾಡಲು RBI ನಿಂದ ಕೋರಲಾಗಿದೆ.

ಅಕ್ಟೋಬರ್ 31ರ ಮಾಹಿತಿ ಪ್ರಕಾರ ಎಚ್​ಡಿಎಫ್​ಗೆ ₹ 4.77 ಕೋಟಿ ಹಾಗೂ ಆಯಕ್ಸಿಸ್​ ಬ್ಯಾಂಕ್​ಗೆ ₹ 0.71 ಕೋಟಿ ಬಡ್ಡಿಕಟ್ಟುವುದುನ್ನು ರಿಲಯನ್ಸ್ ಕ್ಯಾಪಿಟಲ್ ಬಾಕಿ ಉಳಿಸಿಕೊಂಡಿದೆ. ಎಚ್​ಡಿಎಫ್​ಸಿಯಿಂದ 6 ತಿಂಗಳಿನಿಂದ 7 ವರ್ಷಗಳ ಅವಧಿಗೆ ಶೇ 10.6ರಿಂದ ಶೇ 13ರ ಬಡ್ಡಿದರದಲ್ಲಿ ಹಾಗೂ ಆಯಕ್ಸಿಸ್​ ಬ್ಯಾಂಕ್​ನಿಂದ 3ರಿಂದ 7 ವರ್ಷಗಳ ಅವಧಿಗೆ ಶೇ 8.25ರ ಬಡ್ಡಿದರದಲ್ಲಿ ರಿಲಯನ್ಸ್ ಕ್ಯಾಪಿಟಲ್ ಸಾಲ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶಗಳ ನಿರ್ಬಂಧ ಇರುವುದರಿಂದ ಆಸ್ತಿಗಳ ನಗದೀಕರಣ ಸಾಧ್ಯವಾಗುತ್ತಿಲ್ಲ. ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಈ ವಿಷಯವನ್ನು ಕಂಪನಿಯು ತಿಳಿಸಿದೆ. ಹೀಗಾಗಿ ಸಾಲದ ತೀರುವಳಿ ಸಾಧ್ಯವಾಗುತ್ತಿಲ್ಲ ಎಂದರು.

ರಿಲಯನ್ಸ್ ಕ್ಯಾಪಿಟಲ್ HDFC ಮತ್ತು ಆಕ್ಸಿಸ್ ಬ್ಯಾಂಕುಗಳಿಂದ 624 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಇದನ್ನು ಮರುಪಾವತಿಸುವ ವಿಫಲವಾಗಿದೆ. ಈ ಕಾರಣದಿಂದ ಸೂಪರ್ ಸೀಡ್ ಮಾಡಲಾಗಿದೆ.

“ಇನ್‍ಸಾಲ್ವೆನ್ಸಿ ಎಂಡ್ ಬ್ಯಾಂಕ್ರಪ್ಟ್ಸಿ (ಇನ್ಸಾಲ್ವೆನ್ಸಿ ಎಂಡ್ ಲಿಕ್ವಿಡೇಶನ್ ಪ್ರೊಸೀಡಿಂಗ್ಸ್ ಆಫ್ ಫಿನಾನ್ಶಿಯಲ್ ಸರ್ವಿಸ್ ಪ್ರೊವೈಡರ್ಸ್ ಎಂಡ್ ಅಪ್ಲಿಕೇಶನ್ ಟು ಅಡ್ಜುಡಿಕೇಟಿಂಗ್ ಅಥಾರಿಟಿ) ರೂಲ್ಸ್ 2019 ಅನ್ವಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ ಸೂಕ್ತ ಕ್ರಮಕೈಗೊಳ್ಳಿದೆ,” ಎಂದು ಹೇಳಿಕೆ ತಿಳಿಸಿದೆ.

ಕಂಪೆನಿಯ ದಿವಾಳಿತನ ಘೋಷಣೆಗೆ ಸಂಬಂಧಿಸಿದ ಪ್ರಕ್ರಿಯೆಗಳಿಗಾಗಿ ಆಡಳಿತಾಧಿಕಾರಿಯನ್ನು ಇನ್ಸಾಲ್ವೆನ್ಸಿ ರಿಸೊಲ್ಯೂಶನ್ ಪ್ರೊಫೆಶನಲ್ ಆಗಿ ನೇಮಕಗೊಳಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್‍ನ ಮುಂಬೈ ಪೀಠಕ್ಕೆ ಆರ್‍ಬಿಐ ಅರ್ಜಿ ಸಲ್ಲಿಸಲಿದೆ ಎಂದು ಹೇಳಿಕೆ ತಿಳಿಸಿದೆ.

Tags: BJPCongress PartyCovid 19PoliticsRBIಕ್ಯಾಪಿಟಲ್ನರೇಂದ್ರ ಮೋದಿಬಿಜೆಪಿರಿಲಯನ್ಸ್
Previous Post

ಚರ್ಚೆಯಿಲ್ಲದೆ ಕೃಷಿ ಕಾನೂನುಗಳು ರದ್ದು : ಕೇಂದ್ರ ಸರ್ಕಾರ ಭಯಭೀತರಾದಂತೆ ಕಾಣುತ್ತಿದೆ ಎಂದು ರಾಹುಲ್ ಗಾಂಧಿ ಟೀಕೆ!

Next Post

ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ಬಡವರ ಬಾದಾಮಿ ಹಬ್ಬ : ಕಡಲೆಕಾಯಿ ಪರಿಷೆಗೆ ಅದ್ದೂರಿ ಚಾಲನೆ!

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

by ಪ್ರತಿಧ್ವನಿ
April 28, 2026
0

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಆಡಳಿತ ವಿರೋಧಿ ಅಲೆ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ All India Trinamool Congress ಸರ್ಕಾರದ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

April 27, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಬಂಗಾಳದಲ್ಲಿ ದೀದಿ ಎಷ್ಟು ಪವರ್ ಫುಲ್ ಲೇಡಿ..? ಮೋದಿ ಮಣಿಸುತ್ತಾಳಾ ಈ ಗಟ್ಟಿಗಿತ್ತಿ..?

April 27, 2026
Next Post
ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ಬಡವರ ಬಾದಾಮಿ ಹಬ್ಬ : ಕಡಲೆಕಾಯಿ ಪರಿಷೆಗೆ ಅದ್ದೂರಿ ಚಾಲನೆ!

ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ಬಡವರ ಬಾದಾಮಿ ಹಬ್ಬ : ಕಡಲೆಕಾಯಿ ಪರಿಷೆಗೆ ಅದ್ದೂರಿ ಚಾಲನೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada