ಸಾಗರ ತಹಸೀಲ್ದಾರ್ ಖಾತೆ ಬದಲಾವಣೆಯಿಂದ ತುಮರಿ ಸರ್ಕಾರಿ ಶಾಲೆ ಕ್ರೀಡಾಂಗಣ ಖಾಸಗಿಯವರ ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಶಕರಾದ ಹರತಾಳು ಹಾಲಪ್ಪನವರ ಸೂಚನೆಯಂತೆ ಇಂದು ಶಾಲಾ ಭೂ ಮಂಜೂರಾತಿಗೆ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಸರ್ವೇ ಕಾರ್ಯ ನಡೆಸಿತು.
ಕಂದಾಯ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಭೂ ಮಾಪನ ಅಧಿಕಾರಿ ಹನುಮಂತಪ್ಪ, ಶಿಕ್ಷಣ ಇಲಾಖೆಯ ಈಸಿಓ ನಾಗರಾಜ್, ಮಂಜಪ್ಪ ನೇತೃತ್ವದ ತಂಡ ಬೆಳಿಗ್ಗೆ ತುಮರಿಗೆ ಆಗಮಿಸಿ ಶಾಲಾಭಿವೃದ್ಧಿ ಸಮಿತಿ ಮತ್ತು ನೂರಾರು ಸಾರ್ವಜನಿಕರ ಸಮ್ಮುಖದಲ್ಲಿ ಶಾಲಾ ಕಟ್ಟಡ ಮತ್ತು ಕ್ರೀಡಾಂಗಣ ಮಂಜೂರಾತಿಗೆ ಸ್ಥಳ ಪರಿಶೀಲಿಸಿ ಸರ್ವೇ ಪ್ರಕ್ರಿಯೆಗಳನ್ನು ನಡೆಸಿದರು.
ಸ್ಥಳದಲ್ಲಿ ಹಾಜರಿದ್ದ ಕ್ರೀಡಾಂಗಣ ಹೋರಾಟ ಸಮಿತಿ ಪ್ರಮುಖ ಮಾಜಿ ಗ್ರಾ ಪಂ ಅಧ್ಯಕ್ಷ ಜಿ ಟಿ ಸತ್ಯನಾರಾಯಣ ‘ತುಮರಿ ಗ್ರಾಮದ ಸರ್ವೇ ನಂಬರ್ 24 ರಲ್ಲಿ ನೂರು ವರ್ಷದಿಂದ ಶಾಲೆ ಮತ್ತು ಕ್ರೀಡಾಂಗಣವಿದ್ದರೂ ಈವರೆಗೂ ಜಾಗ ಮಂಜೂರಾತಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸರ್ಕಾರಿ ಶಾಲೆ ಉಳಿಸಿ ಹೋರಾಟ ಜಾರಿ ಇದ್ದು ಮಾನ್ಯ ಶಾಶಕರು ಸಭೆ ನಡೆಸಿ ಶಾಲಾ ಮಂಜೂರಾತಿಗೆ ಸೂಚನೆ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ನ್ಯಾಯಯುತವಾಗಿ ಜಾಗ ಮಂಜೂರಾತಿ ಶಾಲೆಗೆ ಆಗಬೇಕು ಎಂದು ಆಗ್ರಹಿಸಿದರು.
ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಲೋಕಪಾಲ್ ಜೈನ್ ಮಾತನಾಡಿ ” ತಹಸೀಲ್ದಾರ್ ಖಾತೆ ಬದಲಾವಣೆ ಪ್ರಕ್ರಿಯೆಯಿಂದ ಸರ್ಕಾರದ ಶಾಲೆ ಸಂಕಷ್ಟಕ್ಕೆ ಸಿಕ್ಕಿತ್ತು, ಕಂದಾಯ ಇಲಾಖೆ ಈ ಹಿಂದೆಯೂ ನಾಲ್ಕೂರು ಬಾರಿ ಜಾಗ ಮಂಜೂರಾತಿಗೆ ಸರ್ವೇ ಪ್ರಕ್ರಿಯೆ ನಡೆಸಿದ್ದು ಜಾಗ ಮಂಜೂರಾತಿ ಆಗಿಲ್ಲ. ಈ ಬಾರಿ ಆಗಲೇಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮಂಜಯ್ಯ ಜೈನ್ ಮಾತನಾಡಿ ‘ ಹಿರಿಯ ಅಧಿಕಾರಿಗಳು ಸ್ಥಳ ಭೇಟಿ ಮಾಡಿ ಈಗಾಗಲೇ ಸಮಸ್ಯೆ ಬಗೆ ಹರಿಸಬೇಕಿತ್ತು, ವಸ್ತುನಿಷ್ಠವಾಗಿ ಶಾಲೆ ಉಳಿಸಿ ಹೋರಾಟ ನಡೆಯುತ್ತಾ ಇದ್ದು ಶಾಲೆ ಆಸ್ತಿಯನ್ನು ಖಾಸಗಿಯವರಿಗೆ ಬಿಡುವ ಪ್ರಶ್ನೆ ಇಲ್ಲ, ತುರ್ತಾಗಿ ಶಾಲೆಗೆ ಜಾಗ ಮಂಜೂರು ಮಾಡಬೇಕು ಎಂದರು.
ಸ್ಥಳದಲ್ಲಿ ಹೋರಾಟ ಸಮಿತಿಯ ಕೃಷ್ಣ ಬಂಡಾರಿ, ಸಂತೋಷ್ ಕುಮಾರ್ ಶೆಟ್ಟಿ, ಮಧು ದೇವಾಡಿಗ, ಮಂಜು, ಸುಬ್ರಹ್ಮಣ್ಯ, ಗ್ರಾ ಪಂ ಉಪಾಧ್ಯಕ್ಷೇ ಶ್ರೀದೇವಿ ರಾಮಚಂದ್ರ, ಸದಸ್ಯರಾದ ಶ್ರೀಧರಮೂರ್ತಿ, ನಾಗರಾಜ್, ಶ್ರೀನಿವಾಸ, ಶ್ರೀಧರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಂದ್ರಪ್ಪ, ಗಣೇಶ್, ದಿವಾಕರ್, ಕಬ್ಬದೂರ್ ದೇವರಾಜ್ ಮತ್ತಿತರರು ಹಾಜರಿದ್ದರು.
ಶಾಲೆಯ ಕಟ್ಟಡ ಮತ್ತು ಮುಂಬಾಗದಲ್ಲಿ ಸರ್ಕಾರಿ ಅನುದಾನದಿಂದ ನಿರ್ಮಾಣವಾದ ಶಾಲಾ ಕ್ರೀಡಾಂಗಣವನ್ನು ಕಳೆದ ವರ್ಷ ಸಾಗರ ತಹಸೀಲ್ದಾರ್ ಕೊರೊನಾ ಲಾಕ ಡೌನ್ ಕಾಲದಲ್ಲಿ ಸಾರ್ವಜನಿಕ ಆಕ್ಷೇಪಣೆ ಅವಕಾಸವಿಲ್ಲದಿರುವಾಗ ಖಾಸಗಿಯವರಿಗೆ ಎಂಟು ಎಕರೆ ಭೂ ಪ್ರದೇಶವನ್ನು ಖಾತೆ ಬದಲಾವಣೆ ಮಾಡಿದ್ದರಿಂದ ಸಾರ್ವಜನಿಕ ವಿರೋಧಗಳು ಧಾಖಲಾಗಿತ್ತು. ಜಾಲತಾಣಗಳಲ್ಲಿ ಕನ್ನಡ ಶಾಲೆ ಉಳಿಸಿ ಅಭಿಯಾನ ಆರಂಭಿಸಲಾಗಿತ್ತು.
ವಿ ಈ ಬಗ್ಗೆ ಮೊಟ್ಟ ಮೊದಲ ಬಾರಿಗೆ ಈ ಬಗ್ಗೆ ಮೊಟ್ಟಮೊದಲ ಬಾರಿಗೆ ಪ್ರತಿಧ್ವನಿ ಗ್ರೌಂಡ್ ರಿಪೋರ್ಟ್ ಮಾಡಿ ರಾಜ್ಯದ ಗಮನ ಸೆಳೆದಿತ್ತು.