ಶಿವಮೊಗ್ಗ: ಆರಗ ಜ್ಞಾನೇಂದ್ರ ಅವರು ಇಡೀ ರಾಜ್ಯಕ್ಕೆ ಗೃಹ ಮಂತ್ರಿಯಾಗಿಲ್ಲ. ಬದಲಾಗಿ ತೀರ್ಥಹಳ್ಳಿಗೆ ಮಾತ್ರ ಗೃಹಸಚಿವರಾಗಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ಟೀಕಿಸಿದ್ದಾರೆ. ಆರಗ ಸಚಿವರಾದಾಗ ನಾನೂ ಅವರಿಗೆ ಶುಭ ಹಾರೈಸಿದ್ದೆ. ಆದರೆ ಈಗ ಅವರು ನಡೆದುಕೊಳ್ಳುವ ರೀತಿ ನೋಡಿದರೆ ತೀರ್ಥಹಳ್ಳಿ ಮರ್ಯಾದೆ ತೆಗೆಯುವ ಕೆಲಸ ಮಾಡುತ್ತಿದ್ದು, ತೀರ್ಥಹಳ್ಳಿಯ ಪೊಲೀಸ್ ಠಾಣೆಗಳು ಹಾಗೂ ಆರ್ ಎಫ್ಓ ಕಚೇರಿಗೆ ಮಾತ್ರ ಆರಗ ಸೀಮಿತರಾಗಿದ್ದಾರೆ. ಬಿಜೆಪಿಯವರೇ ಅಕ್ರಮವಾಗಿ ಮರಳು ಹೊಡೆ ಯುತ್ತಿದ್ದು, ಬಿಜೆಪಿ ಕಾರ್ಯಕರ್ತರೇ ಗೃಹಸಚಿವರು, ಪೊಲೀಸರು ಆಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುವ ಕೆಲಸವನ್ನು ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಗೃಹಸಚಿವರ ವಿರುದ್ಧ ಕಿಡಿಕಾರಿದ್ದಾರೆ. ಹಾಗೂ
ಗಾಂಧಿ ಹಾಗೂ ನೆಹರೂ ವಿರುದ್ಧವಾಗಿ ಕೆಲವರು ಪುಸ್ತಕ ಬರೆಯುತ್ತಾರೆ. ಹೀಗೆ ಪುಸ್ತಕ ಬರೆಯುವವರ ವೈಯಕ್ತಿಕ ಬದುಕು ಕುಲಗೆಟ್ಟು ಹೋಗಿದೆ. ಇವರು ತಮ್ಮ ಮಕ್ಕಳಿಗೇ ಮಾದರಿ ಆಗಲು ಸಾಧ್ಯವಿಲ್ಲ. ಇಂಥವರು ಗಾಂಧಿ ಹಾಗೂ ನೆಹರೂ ವಿರುದ್ಧವಾಗಿ ಪುಸ್ತಕ ಬರೆಯುತ್ತಾರೆ. ಪ್ರಧಾನಿ ಮೋದಿ ಚಿನ್ನದ ರಸ್ತೆ ಮಾಡುತ್ತಾರೆ, ದೇಶದ ಸಾಲ ತೀರಿಸಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಸಾಲಮಾಡಿ ದೇಶಬಿಟ್ಟು ಓಡಿಹೋದವರು ಯಾರೂ ವಾಪಸ್ ಬಂದಿಲ್ಲ ಎಂದು ಎಂದು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಿಮ್ಮನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.