Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಫ್ರಾನ್ಸ್‌ ನಲ್ಲಿ ಐದನೇ ಅಲೆ ಕೊರೋನಾ: ಲಸಿಕೆ ಪಡೆಯದಿದ್ದರೆ ಸಾರ್ವಜನಿಕ ಓಡಾಟಕ್ಕೆ ನಿರ್ಬಂಧ !

ಕರ್ಣ

ಕರ್ಣ

November 22, 2021
Share on FacebookShare on Twitter

ಭಾರತದಲ್ಲಿ ಸದ್ಯ ಕೊರೊನಾ ಸೋಂಕು ಕಡಿಮೆಯಾಗಿದ್ದು, ಹೊಸ ಕೇಸ್ಗಳು ತಹಬದಿಗೆ ಬರುತ್ತಿವೆ. ಆದರೂ, ಕೋವಿಡ್ 19 ಮೂರನೇ ಅಲೆ ಯಾವಾಗ ಆರಂಭವಾಗುತ್ತೆ ಎಂಬ ಆತಂಕ ಇದ್ದೇ ಇದೆ. ಒಂದು ವೇಳೆ ಮತ್ತೊಂದು ಅಲೆ ಬಂದರೆ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ..?  ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆಯೇ..? ಎಂಬ ಚರ್ಚೆಗಳೂ ನಡೆಯುತ್ತಲೇ ಇದೆ. ಆದರೆ, ಫ್ರಾನ್ಸ್‌ನಲ್ಲಿ ಈಗಾಗಲೇ ಕೊರೊನಾ ಐದನೇ ಅಲೆ ಆರಂಭವಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಹೌದು, ಫ್ರಾನ್ಸ್‌ನಲ್ಲಿ ಐದನೇ ತರಂಗದ ಕೊರೊನಾ ವೈರಸ್ ಸೋಂಕುಗಳು ಅಪಾಯಕಾರಿ ಮಟ್ಟದಲ್ಲಿ ಏರುತ್ತಿವೆ ಎಂದು ಸರ್ಕಾರ ವರದಿ ಮಾಡಿದೆ. ಕಳೆದ ವಾರದಿಂದ ಹೊಸ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿವೆ ಎಂದೂ ತಿಳಿದುಬಂದಿದೆ.

ಫ್ರಾನ್ಸ್ನಲ್ಲಿ ದೈನಂದಿನ ಪ್ರಕರಣಗಳೆಷ್ಟು..?

ಹೆಚ್ಚು ಓದಿದ ಸ್ಟೋರಿಗಳು

118 ಲೀಟರ್‌ ಎದೆಹಾಲು ಮಾರಿದ ಅಮೆರಿಕ ಮಹಿಳೆ!

ನಕಲಿ ಖಾತೆ ಲೆಕ್ಕ ನೀಡದೇ  ಟ್ವಿಟರ್‌ ಖರೀದಿಸಲ್ಲ: ಎಲಾನ್‌ ಮಸ್ಕ್‌!

ವಿಮಾನ ಸಂಸ್ಥೆ ಮಾರಾಟ, ನೋಟು ಮುದ್ರಣ: ಲಂಕಾ ನೂತನ ಪ್ರಧಾನಿ ಘೋಷಣೆ

7 ದಿನಗಳ ಸರಾಸರಿ ಹೊಸ ಪ್ರಕರಣಗಳು 17,153ಕ್ಕೆ ತಲುಪಿದ್ದು, ಇದು ವಾರದ ಹಿಂದಿನ 9,458ಕ್ಕಿಂತ ಹೆಚ್ಚಾಗಿದ್ದು,81 ಪ್ರತಿಶತದಷ್ಟು ಏರಿಕೆ ಕಂಡಿದೆ ಎಂದು ಫ್ರಾನ್ಸ್‌ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಐದನೇ ಅಲೆಯು ಮಿಂಚಿನ ವೇಗದಲ್ಲಿ ಪ್ರಾರಂಭವಾಗುತ್ತಿದೆ” ಎಂದೂ ಅಲ್ಲಿನ ಸರ್ಕಾರದ ವಕ್ತಾರ ಗೇಬ್ರಿಯಲ್ ಅಟ್ಟಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದುಪ್ಪಟ್ಟಾದ ಕೋವಿಡ್ ಕೇಸ್.!!

ಇತ್ತೀಚಿನ 7 ದಿನಗಳ ಹೆಚ್ಚಳವು ಹಿಂದಿನ 3 ವಾರಗಳಲ್ಲಿ ದಾಖಲಾದ ಪ್ರಕರಣಗಳ ಸರಾಸರಿ ಏರಿಕೆಗಿಂತ 3 ಪಟ್ಟು ಹೆಚ್ಚಾಗಿದೆ, ಇದು ಸೋಂಕು ಹರಡುತ್ತಿರುವ ವೇಗವನ್ನು ಸೂಚಿಸುತ್ತದೆ ಎಂದು ಫ್ರಾನ್ಸ್‌ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.


ಐದನೇ ಅಲೆ ಎದುರಿಸಲು ಫ್ರಾನ್ಸ್‌ ಸಜ್ಜು.!!

ಆದರೂ, ಸದ್ಯಕ್ಕೆ ಸೋಂಕುಗಳ ಹೆಚ್ಚಳವು ಆಸ್ಪತ್ರೆಗಳಿಗೆ ಕೋವಿಡ್ ರೋಗಿಗಳ ಬೃಹತ್ ಒಳಹರಿವಿಗೆ ಕಾರಣವಾಗಿಲ್ಲ ಎನ್ನಲಾಗಿದೆ. ಅಲ್ಲದೆ, ತೀವ್ರ ನಿಗಾ ಘಟಕ ಅಥವಾ ಐಸಿಯುನಲ್ಲಿರುವ ರೋಗಿಗಳ ಸಂಖ್ಯೆಯೂ ಸೀಮತವಾಗಿದ್ದು, ಇದಕ್ಕೆ ಕಾರಣ ಫ್ರಾನ್ಸ್‌ನ ಹೆಚ್ಚಿನ ಪ್ರಮಾಣದ ವ್ಯಾಕ್ಸಿನೇಷನ್‌. ಲಸಿಕೆ ಹಾಕಿಸಿದ ಕಾರಣದಿಂದ ಕೋವಿಡ್‌ನ ಅತ್ಯಂತ ಅಪಾಯಕಾರಿ ರೂಪಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬರುತ್ತದೆ ಎಂದು ಫ್ರಾನ್ಸ್‌ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವವರು ಎಷ್ಟು ಮಂದಿ. ?

ಒಟ್ಟು 7,974 ಕೋವಿಡ್ ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಪೈಕಿ 1,333 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಒಂದು ತಿಂಗಳ ಹಿಂದೆ  ಆಸ್ಪತ್ರೆಯಲ್ಲಿ ಕ್ರಮವಾಗಿ 6,500 ಮತ್ತು 1,000ಕ್ಕೆ ಮಂದಿ ಚಿಕಿತ್ಸೆ ಪಡೆಯುತ್ತಿದ್ದರು.


ವ್ಯಾಕ್ಸಿನೇಷನ್ ಹೆಚ್ಚಿಸಿದ ಫ್ರಾನ್ಸ್‌ !

ಸೋಂಕಿನ ಪ್ರಮಾಣ ಫ್ರಾನ್ಸ್‌ನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಫ್ರಾನ್ಸ್‌ನಲ್ಲಿ ಹೆಚ್ಚೆಚ್ಚು ಲಸಿಕೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಫ್ರಾನ್ಸ್‌ ಸರ್ಕಾರದ ವಕ್ತಾರ ಗೇಬ್ರಿಯಲ್ ಅಟ್ಟಲ್ ನಾವು ಬಹಳ ದೊಡ್ಡ ಮಟ್ಟದಲ್ಲಿ ವ್ಯಾಕ್ಸಿನೇಷನ್ ಡ್ರೈವ್‌ ನಡೆಸುತ್ತಿದ್ದೇವೆ. ನಾಡಿನ ಮುಕ್ಕಾಲು ಭಾಗ ಮಂದಿ ಈಗಾಗಲೇ ಲಸಿಕೆ ಪಡೆದು ರಕ್ಷಣೆ ಹೊಂದಿದ್ದಾರೆ. ಅಲ್ಲದೆ, ಬೂಸ್ಟರ್‌ ಡೋಸ್‌ಗಳಿಗೆ ಸಂಬಂಧಿಸಿದಂತೆಯೂ ನಾವು ಇತರೆ ರಾಷ್ಟ್ರಗಳಿಗಿಂತ ಮುಂದುವರೆದಿದ್ದೇವೆ ಎಂದು ಹೇಳಿದ್ದಾರೆ. ಇತರ ದೇಶಗಳಿಗಿಂತ ಮೊದಲೇ ಫ್ರಾನ್ಸ್ ಆರೋಗ್ಯ ಪಾಸ್ ಪರಿಚಯಿಸಿದ್ದು ಸಹ ಕೋವಿಡ್ ನಿಯಂತ್ರಣದಲ್ಲಿಡಲು ಸಹಾಯ ಮಾಡಿದೆ. ಆರೋಗ್ಯ ಪಾಸ್‌ ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಅನೇಕ ಸಾಂಸ್ಕೃತಿಕ ಸ್ಥಳಗಳಲ್ಲಿ ಕಡ್ಡಾಯ ಮಾಡಲಾಗಿದೆ. ಇನ್ನು ಸಂಪೂರ್ಣವಾಗಿ ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡರೂ ಗಂಭೀರವಾದ ಸಮಸ್ಯೆಗಳೇನು ಕಾಣಿಸಿಕೊಳ್ಳದೇ ಇರುವುದು ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬುವುದಕ್ಕಿರುವ ಸಾಕ್ಷಿ. ಇನ್ನೂ ಲಸಿಕೆ ಪಡೆಯ ಜನರ ಮೇಲೆ ಸಾರ್ವಜನಿಕವಾಗಿ ಓಡಾಡುವುದನ್ನು ಫ್ರಾನ್ಸ್‌ ನಿರ್ಬಂಧ ತಂದಿದೆ ಎಂದೂ ಅವರು ಹೇಳಿದ್ದಾರೆ.

RS 500
RS 1500

SCAN HERE

don't miss it !

ಪತ್ರಿಕಾ ಸ್ವಾತಂತ್ರ್ಯಕ್ಕೆ ಹಾಕುವ ಕಡಿವಾಣದಿಂದ ನಾಗರಿಕರ ಸ್ವಾತಂತ್ರ್ಯಕ್ಕೂ ಧಕ್ಕೆ !
ಅಭಿಮತ

ಪತ್ರಿಕಾ ಸ್ವಾತಂತ್ರ್ಯಕ್ಕೆ ಹಾಕುವ ಕಡಿವಾಣದಿಂದ ನಾಗರಿಕರ ಸ್ವಾತಂತ್ರ್ಯಕ್ಕೂ ಧಕ್ಕೆ !

by Shivakumar A
May 13, 2022
ದಲಿತ ಮುಖ್ಯಮಂತ್ರಿ ಆಗುತ್ತಾರೆ ಅಂತ ಕನಸು ಕಾಣೋನು ಹುಚ್ಚ: ಎ.ನಾರಾಯಣಸ್ವಾಮಿ
ಕರ್ನಾಟಕ

ದಲಿತ ಮುಖ್ಯಮಂತ್ರಿ ಆಗುತ್ತಾರೆ ಅಂತ ಕನಸು ಕಾಣೋನು ಹುಚ್ಚ: ಎ.ನಾರಾಯಣಸ್ವಾಮಿ

by ಪ್ರತಿಧ್ವನಿ
May 16, 2022
ನನಗೆ ಕಾಂಗ್ರೆಸ್ ನಲ್ಲಿ ಅವಕಾಶ ನೀಡಿದ್ದು ರಾಹುಲ್ ಗಾಂಧಿ, ನನ್ನ ವಿರುದ್ಧ ವಂಚನೆ ಆರೋಪ ಸುಳ್ಳು : ನಟಿ ರಮ್ಯಾ
ಕರ್ನಾಟಕ

ನನಗೆ ಕಾಂಗ್ರೆಸ್ ನಲ್ಲಿ ಅವಕಾಶ ನೀಡಿದ್ದು ರಾಹುಲ್ ಗಾಂಧಿ, ನನ್ನ ವಿರುದ್ಧ ವಂಚನೆ ಆರೋಪ ಸುಳ್ಳು : ನಟಿ ರಮ್ಯಾ

by ಪ್ರತಿಧ್ವನಿ
May 12, 2022
ಆತ್ಮಾಹುತಿ ಬಾಂಬರ್ ದಾಳಿ; 6 ಮಂದಿ ಸಾವು
ವಿದೇಶ

ಆತ್ಮಾಹುತಿ ಬಾಂಬರ್ ದಾಳಿ; 6 ಮಂದಿ ಸಾವು

by ಪ್ರತಿಧ್ವನಿ
May 15, 2022
ಬೆಂಗಳೂರಿನಲ್ಲಿ 50 ವರ್ಷದಲ್ಲೇ 2ನೇ ಅಧಿಕ ಚಳಿ ದಾಖಲೆ!
ಕರ್ನಾಟಕ

ಬೆಂಗಳೂರಿನಲ್ಲಿ 50 ವರ್ಷದಲ್ಲೇ 2ನೇ ಅಧಿಕ ಚಳಿ ದಾಖಲೆ!

by ಪ್ರತಿಧ್ವನಿ
May 13, 2022
Next Post
ಹಾನಗಲ್ ಬೈ ಎಲೆಕ್ಷನ್ ಸೋಲಿನ ಪಾಠ: ಹಾವೇರಿ ಜಿಲ್ಲೆಯಲ್ಲಿ ಆ್ಯಕ್ಟೀವ್ ಆದ ಎಲ್ಲಾ ಪಕ್ಷಗಳ ಶಾಸಕರು

ಹಾನಗಲ್ ಬೈ ಎಲೆಕ್ಷನ್ ಸೋಲಿನ ಪಾಠ: ಹಾವೇರಿ ಜಿಲ್ಲೆಯಲ್ಲಿ ಆ್ಯಕ್ಟೀವ್ ಆದ ಎಲ್ಲಾ ಪಕ್ಷಗಳ ಶಾಸಕರು

ಚಾರಿತ್ರಿಕ ರೈತ ಮುಷ್ಕರದ ಒಂದು ವರ್ಷ

ಚಾರಿತ್ರಿಕ ರೈತ ಮುಷ್ಕರದ ಒಂದು ವರ್ಷ

ರೋಶನಿ ಬೇಗಂ: ಟಿಪ್ಪುವಿನ ಮರಣಾನಂತರವೂ ಬ್ರಿಟಿಷರನ್ನು ಕಾಡಿದ ಧೀರ ಮಹಿಳೆ

ರೋಶನಿ ಬೇಗಂ: ಟಿಪ್ಪುವಿನ ಮರಣಾನಂತರವೂ ಬ್ರಿಟಿಷರನ್ನು ಕಾಡಿದ ಧೀರ ಮಹಿಳೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist