ಉತ್ತರ ಪ್ರದೇಶ ಚುನಾವಣೆಯ ಕಾವು ಏರುತ್ತಿದ್ದಂತೆಯೇ, ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಚಾಟ ಮುಂದುವರೆದಿದೆ. ಮುಖ್ಯವಾಗಿ, ಪಾಕಿಸ್ತಾನದ ರಾಷ್ಟ್ರಪಿತ ಜಿನ್ನಾ ಅವರ ಹೆಸರು ಪದೇ ಪದೇ ಕೇಳಿ ಬರುತ್ತಿದೆ. ಭಾರತೀಯ ಸಮಾಜ್ ಪಾರ್ಟಿ ಮುಖ್ಯಸ್ಥ ಸುಹೇಲ್ ದೇವ್ ಅವರು, ಜಿನ್ನಾ ಭಾರತದ ಪ್ರಧಾನಿಯಾಗಿದ್ದಿದ್ದರೆ ವಿಭಜನೆಯೇ ನಡೆಯುತ್ತಿರಲಿಲ್ಲ ಎಂದು ಹೇಳಿರುವುದು ಈಗ ಹೊಸ ರಾಜಕೀಯ ವಿವಾದದ ಕೇಂದ್ರ ಬಿಂದುವಾಗಿದೆ.
ಸುಹೇಲ್ ದೇವ್ ಹೇಳಿಕೆಯ ಬೆನ್ನಲ್ಲೇ, ತಮ್ಮ ಧ್ವಿ ಸೇರಿಸಿರುವ AIMIM ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ, ದೇಶ ವಿಭಜನೆಯಾಗಲು ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಅಂದಿನ ಕಾಂಗ್ರೆಸ್ ನಾಯಕರ ನಿರ್ಧಾರಗಳಿಂದಾಗಿ ದೇಶ ವಿಭಜನೆಯಾಗಬೇಕಾಯಿತು ಎಂದು ಹೇಳಿದ್ದಾರೆ.
“ಇತಿಹಾಸವನ್ನು ಓದದೇ ಇರುವಂತಹ ಜನರಾದ ಆರ್‌ಎಸ್ಎಸ್, ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳಿಗೆ ನಾನು ಬಹಿರಂಗ ಸವಾಲೆಸೆಯುತ್ತೇನೆ. ವಿಭಜನೆಗೆ ಮುಸ್ಲೀಮರು ಕಾರಣರಲ್ಲ. ಆ ಸಂದರ್ಭದಲ್ಲಿ ಮುಸ್ಲೀಮರು ಕೇವಲ ನವಾಬರಿಗೆ ಅಥವಾ ನವಾಬರಂತಹ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಗೌರವ ನೀಡುತ್ತಿದ್ದರು. ಅಂದಿನ ಕಾಂಗ್ರೆಸ್ ಹಾಗೂ ಅದರ ನಾಯಕರು ವಿಭಜನೆಯ ಕಾರಣಕರ್ತರು,” ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಭಾರತೀಯ ಸಮಾಜ್ ಪಾರ್ಟಿಯ ನಾಯಕರಾದ ರಾಜ್ಭಾರ್ ಅವರು ವಾರಣಾಸಿಯಲ್ಲಿ ನಡೆದ ಸಮಾವೇಶದಲ್ಲಿ ದೇಶ ವಿಭಜನೆಗೆ ಆರ್ಎಸ್ಎಸ್ ಅನ್ನು ದೂಷಿಸಿದ್ದರು. ಒಂದು ವೇಳೆ ಆರ್‌ಎಸ್ಎಸ್ ನಾಯಕರು ಮಹಮ್ಮದ್ ಅಲಿ ಜಿನ್ನಾ ಅವರನ್ನು ಭಾರತದ ಮೊದಲ ಪ್ರಧಾನಿಯಾಗಲು ಬಿಟ್ಟಿದ್ದಿದ್ದರೆ, ವಿಭಜನೆಯಂತಹ ದುರಂತ ನಡೆಯುತ್ತಿರಲಿಲ್ಲ, ಎಂದು ಹೇಳಿದ್ದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿರುವುದು ತೀವ್ರವಾಗಿ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಹಿಂದುತ್ವವನ್ನೇ ಬಂಡವಾಳವನ್ನಾಗಿಸಿರುವ ಬಿಜೆಪಿಯು ಮತೀಯ ವಿಚಾರಗಳಿಂದ ಮತದಾರರನ್ನು ತನ್ನತ್ತ ಸೆಳೆಯುವ ಯಾವುದೇ ಪ್ರಯತ್ನವನ್ನು ಕೈಬಿಡುತ್ತಿಲ್ಲ. ಈಗ ಅದೇ ಹಾದಿಯನ್ನು ಇತರ ಪಕ್ಷಗಳೂ ಹಿಡಿದಿದ್ದು, ಧರ್ಮಾಧಾರಿತ ರಾಜಕಾರಣದಲ್ಲಿ ತೊಡಗಿರುವುದು ವಿಪರ್ಯಾಸವಾ






