• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನೋಟು ನಿಷೇಧಕ್ಕೆ ಐದು ವರ್ಷ: ಬೆಟ್ಟ ಅಗೆದು ಇಲಿಯನ್ನೂ ಹಿಡಿಯದ ಆಡಳಿತ ಯಂತ್ರ!

ಫಾತಿಮಾ by ಫಾತಿಮಾ
November 8, 2021
in ದೇಶ, ರಾಜಕೀಯ
0
ನೋಟು ನಿಷೇಧಕ್ಕೆ ಐದು ವರ್ಷ: ಬೆಟ್ಟ ಅಗೆದು ಇಲಿಯನ್ನೂ ಹಿಡಿಯದ ಆಡಳಿತ ಯಂತ್ರ!
Share on WhatsAppShare on FacebookShare on Telegram

ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಈ ದಿನ ರಾತ್ರೋ ರಾತ್ರಿ ನೋಟು ನಿಷೇಧ ಜಾರಿಗೆ ತಂದಿದ್ದರು. ಈ ದೇಶದಲ್ಲಿ ಇದೇ ಮೊದಲ ಬಾರಿಗೆ ಅತಿ ದೊಡ್ಡ ಆರ್ಥಿಕ ನೀತಿಯೊಂದು ರಾಜಕೀಯ ಹುನ್ನಾರಗಳನ್ನು ಒಳಗೊಂಡು ಜಾರಿಗೆ ಬಂತು. ಭ್ರಷ್ಟಾಚಾರ ಬಯಲಿಗೆಳೆಯುವುದು, ಕಪ್ಪು ಹಣ ಹೊರತರುವುದು ಎಂದೆಲ್ಲಾ ಸರ್ಕಾರ ಹೇಳಿಕೊಂಡರೂ ಅದರ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಹೊರಬೀಳಲು ಹೆಚ್ಚಿನ ಸಮಯ ತಗುಲಲಿಲ್ಲ. ಇಡೀ ಆಡಳಿತ ಯಂತ್ರ ಬೆಟ್ಟ ಅಗೆದು ಇಲಿಯನ್ನೂ ಹಿಡಿಯಲು ಅಸಮರ್ಥವಾಯಿತು.

ADVERTISEMENT

ಇಡೀ ದೇಶಕ್ಕೆ ದೇಶವೇ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾರ್ವಜನಿಕ ಬ್ಯಾಂಕ್ ಶಾಖೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿತ್ತು. ಹಳ್ಳಿಗಳ ಪುಟ್ಟ ಪುಟ್ಟ ಅಂಗಡಿಗಳ ಯುವಕರು, ವೃದ್ಧರು, ಕೂಲಿ ಕಾರ್ಮಿಕರು, ಜಾತಿಭೇದವಿಲ್ಲದೆ ದಿನನಿತ್ಯದ ಅಗತ್ಯಗಳನ್ನೂ ಪೂರೈಸಲು ಹಣವಿಲ್ಲದೆ ತೀವ್ರ ಬಿಕ್ಕಟ್ಟು ಎದುರಿಸಿದರು. ಆದರೆ ಅವರಲ್ಲಿ ಬಹುತೇಕ ಮಂದಿ ಮೋದಿ ಸರಿಯಾದುದ್ದನ್ನೇ ಮಾಡುತ್ತಿದ್ದಾರೆ ಎಂದು ನಂಬಿಕೊಂಡಿದ್ದರು.

ಯಾಕೆಂದರೆ ಅವರಲ್ಲಿ ಅನೇಕರಲ್ಲಿ ಶ್ರೀಮಂತರನ್ನು, ಕಪ್ಪು ಹಣ ಹೊಂದಿರುವವರನ್ನು ಶಿಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಭಾವನೆ ಇತ್ತು. ಇದು ಆರ್ಥಿಕ ಅಸಮಾನತೆಯ ವಿರುದ್ದ ಮೋದಿ ಸಾರಿದ ಸಮರ ಎಂದೇ ಅವರನ್ನು ನಂಬಿಸಲಾಗಿತ್ತು. ಕಪ್ಪು ಹಣ ಒಂದು ಹೊರಬಂದರೆ ಸಾಕು ಇಡೀ ದೇಶ ಸುಭಿಕ್ಷವಾಗುತ್ತದೆ ಎಂದು ಜನಸಾಮಾನ್ಯರು ನಂಬಿಕೊಂಡಿದ್ದರು. ಬಿಜೆಪಿಯ ರಾಜಕೀಯ ಉದ್ದೇಶವೂ ಇದೇ ಆಗಿತ್ತು.

ನೋಟು ನಿಷೇಧದ ಸಂದರ್ಭದಲ್ಲಿ ಆಡಳಿತ ಪಕ್ಷವು ರಾಜಕೀಯ ಲಾಭ ಪಡೆದುಕೊಳ್ಳಲು ಹೂಡಿದ ಮತ್ತೊಂದು ಬಾಣ ರಾಷ್ಟ್ರೀಯ ಭದ್ರತೆ. ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಮಟ್ಟ ಹಾಕಲು ಮತ್ತು ಮಾವೋವಾದಿಗಳ ಕೈಗಳನ್ನು ಆರ್ಥಿಕವಾಗಿ ಕಟ್ಟಿ ಹಾಕಲು ಈ ಕ್ರಮ ಅನಿವಾರ್ಯ ಎನ್ನುವ ಸಿದ್ಧಾಂತ ತೇಲಿ ಬಿಡಲಾಯಿತು. ಇದರಿಂದ ಭಾವುಕರಾದ ಜನ ‘ಸೈನಿಕರು ವರ್ಷಪೂರ್ತಿ ದಿನದ 24 ಗಂಟೆಗಳನ್ನೂ ದೇಶದ ರಕ್ಷಣೆಗಾಗಿ ವ್ಯಯಿಸುವಾಗ ನಾವು ಬ್ಯಾಂಕ್ ಮುಂದೆ ಕ್ಯೂ ನಿಲ್ಲುವುದು ದೊಡ್ಡ ತ್ಯಾಗವೇನಲ್ಲ’ ಎಂಬ ಭಾವನೆ ಬೆಳೆಸಿಕೊಂಡರು.

ಅಲ್ಲದೆ ನೋಟು ರದ್ದತಿಯು ಬಡವರಿಗೆ ನೇರ ನಗದು ನೀಡುವ ತನ್ನ ಚುನಾವಣಾ ಭರವಸೆಯನ್ನು ಈಡೇರಿಸಲು ಸರ್ಕಾರಕ್ಕೆ ಹಣಕಾಸಿನ ನೆರವನ್ನು ನೀಡುತ್ತದೆ ಎಂಬ ವ್ಯಾಪಕ ಗ್ರಹಿಕೆಯೂ ಜನಸಾಮಾನ್ಯರಲ್ಲಿ ಇತ್ತು.

ಆದರೆ ನೋಟು ನಿಷೇಧವು ಯಾವ ರೀತಿಯಲ್ಲೂ ಭಯೋತ್ಪಾದನೆಯನ್ನು ಹತೋಟಿಗೆ ತರುವಲ್ಲಿ ಸಹಕಾರಿಯಾಗಲಿಲ್ಲ ಅಥವಾ ಕಪ್ಪು ಹಣವನ್ನೂ ಬಯಲಿಗೆಳೆಯಲಿಲ್ಲ . ಬದಲಿಗೆ ಇದು ಜನರಲ್ಲಿ ಸುಪ್ತವಾಗಿದ್ದ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಿ ದೇಶಕ್ಕಾಗಿ ನಾವೂ ಕೊಡುಗೆ ನೀಡುತ್ತಿದ್ದೇವೆ ಎಂಬ ಭ್ರಮೆಯನ್ನು ಸೃಷ್ಟಿಸಿತು. ಅಂತಿಮವಾಗಿ ತೆರಿಗೆ ಕಳ್ಳತನದಿಂದ ಸಂಗ್ರಹವಾದ ಕೋಟ್ಯಾಂತರ ದುಡ್ಡು ಜನರ ಕಲ್ಯಾಣಕ್ಕೆ ಬಳಕೆಯಾಗುತ್ತದೆ, ಈ ದೇಶದ ಬಡವರಿಗೂ ಸಂಪನ್ಮೂಲ ಹಂಚಿಕೆಯಾಗುತ್ತದೆ ಎಂಬ ತಾತ್ಕಾಲಿಕ ಭರವಸೆಯೇ ಅನೇಕರಿಗೆ ಮುಖ್ಯವಾಗಿತ್ತು. ಮತ್ತು ಇಂತಹ ಅಪ್ರಾಯೋಗಿಕ ನಂಬಿಕೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತಲು ಆಡಳಿತ ಪಕ್ಷವು ಅತ್ಯಂತ ಯಶಸ್ವಿಯೂ ಆಗಿತ್ತು.

ಆದರೆ ದೀರ್ಘಾವಧಿಯ ರಾಜಕೀಯ ಪ್ರಭಾವವಳಿಯೊಂದನ್ನು ಸೃಷ್ಟಿಸಿದ ಆರ್ಥಿಕ ನೀತಿಯು ಭ್ರಷ್ಟರನ್ನು ಶಿಕ್ಷಿಸಲು ಅಸಮರ್ಥವಾದದ್ದು, ಸಮಾನ ಸಮಾಜವನ್ನು ಸೃಷ್ಟಿಸದ್ದು, ಆದಾಯದ ಸಮಾನ ಹಂಚಿಕೆ ಸಾಧ್ಯವಾಗದ್ದು, ಭಯೋತ್ಪಾದನೆಯನ್ನು ದುರ್ಬಲಗೊಳಿಸದ್ದು ಐದು ವರ್ಷಗಳ ನಂತರ ಸಾರ್ವಜನಿಕ ನೆನಪಿನಿಂದ ಮಾಸಿದ್ದರೂ ಇತಿಹಾಸದಲ್ಲಿ ಇಂದು ರಾಜಕೀಯ ಬ್ಲಂಡರ್ ಆಗಿ ದಾಖಲುಗೊಳ್ಳುವುದನ್ನು ತಡೆಯಲು ಮಾತ್ರ ಸಾಧ್ಯವಿಲ್ಲ.

Tags: BJPಆಡಳಿತ ಯಂತ್ರಐದು ವರ್ಷಕೋವಿಡ್-19ನರೇಂದ್ರ ಮೋದಿನೋಟು ನಿಷೇಧಬಿಜೆಪಿ
Previous Post

ಅಕ್ಷರ ಸಂತನಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ!

Next Post

ಸಿನಿಮಾ ಪೋಸ್ಟರಿನಾಚೆ ಜಿಗಿದು ಮನೆ-ಮನದ ಆರಾಧ್ಯದೈವವಾದ ಪುನೀತ್!

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

by ಪ್ರತಿಧ್ವನಿ
April 21, 2026
0

ವಿಶೇಷ ಲೇಖನ : ನಾ. ದಿವಾಕರ್‌.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...

Read moreDetails
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

April 21, 2026
Next Post
ಸಿನಿಮಾ ಪೋಸ್ಟರಿನಾಚೆ ಜಿಗಿದು ಮನೆ-ಮನದ ಆರಾಧ್ಯದೈವವಾದ ಪುನೀತ್!

ಸಿನಿಮಾ ಪೋಸ್ಟರಿನಾಚೆ ಜಿಗಿದು ಮನೆ-ಮನದ ಆರಾಧ್ಯದೈವವಾದ ಪುನೀತ್!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada