• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆ ಬೆಂಗಳೂರಿನಲ್ಲಿ ಅಪ್ಪು ಪುತ್ಥಳಿಗೆ ಭಾರೀ ಡಿಮ್ಯಾಂಡ್ !

ಕರ್ಣ by ಕರ್ಣ
November 7, 2021
in ಕರ್ನಾಟಕ
0
ಅಪ್ಪನ ಹಾದಿಯಲ್ಲೇ ಸಾಗಿದ ಅಪ್ಪು; ಪುನೀತ್ ರಾಜ್‌ಕುಮಾರ್‌ರಿಂದ ನೇತ್ರದಾನ
Share on WhatsAppShare on FacebookShare on Telegram

ಯುವರತ್ನ ಪುನೀತ್ ರಾಜ್ ಕುಮಾರ್ ಸಾವು ಕರುನಾಡಿಗೆ ತುಂಬಲಾರದ ನಷ್ಟ. ಇಂದಿಗೆ ಅಪ್ಪು ಅಗಲಿ ಹತ್ತು ದಿನಗಳು ಕಳೆದಿವೆ. ಇದರ ನಡುವೆ ತಮ್ಮ ನೆಚ್ಚಿನ ನಟನನ್ನು ಪ್ರತಿಮೆಯ ಮೂಲಕ ಜೀವಂತವಿಡಲು ಅಭಿಮಾನಿಗಳು ಮುಂದಾಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಅಪ್ಪು ಪುತ್ಥಳಿ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿದೆ.

ADVERTISEMENT

ನಗರದ ಹಲವು ಶಿಲ್ಪಿಗಳಿಗೆ ಅಪ್ಪು ಪ್ರತಿಮೆ ನಿರ್ಮಿಸಿಕೊಡುವಂತೆ ಮನವಿ!

ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎನ್ನುವುದನ್ನು ಈಗಲೂ ಅರಗಿಸಿಕೊಳ್ಳಲು ಅಭಿಮಾನಿಗಳಿಂದ ಸಾಧ್ಯವಿಲ್ಲ. ಹೀಗಾಗಿ ಅಪ್ಪುವನ್ನು ಪ್ರತಿಮೆಯ ಮೂಲಕ ಇನ್ನುಳಿದ ಕಾಲ ಬದುಕಿಸಲು ಅಭಿಮಾನಿಗಳು ನಿರ್ಧರಿಸಿದಂತಿದೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಅಪ್ಪು ಪುತ್ಥಳಿ ನಿರ್ಮಾಣಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೌದು, ಬೆಂಗಳೂರಿನಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಬೇಡಿಕೆ ಹೆಚ್ಚಿದೆ. ಪುನೀತ್ ಅಗಲಿ ಒಂದು ವಾರದಲ್ಲೇ ಅಪ್ಪು ಪ್ರತಿಮೆಗೆ ನಗರದಲ್ಲಿ ಬಹು ಬೇಡಿಕೆ ಶುರುವಾಗಿದೆ. ಅಪ್ಪು ನಿಧನದ ಒಂದೇ ವಾರದಲ್ಲಿ ನಗರದಲ್ಲಿ 100ಕ್ಕೂ ಅಧಿಕ ಪುತ್ಥಳಿಗೆ ಕೋರಿಕೆ ಹೆಚ್ಚಾಗಿದೆ. ಬಿಬಿಎಂಪಿ ಆವರಣದಲ್ಲೂ ಯುವರತ್ನ ಪುನೀತ್ ರಾಜ್ ಕುಮಾರ್ ಪುತ್ಥಳಿ ಸ್ಥಾಪನೆಗೆ ಮನವಿ ಮಾಡಿಕೊಳ್ಳಲಾಗಿದೆ. ಬಿಬಿಎಂಪಿ ಕಾರ್ಮಿಕರ ಸಂಘಟನೆಯಿಂದ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾಗೆ ಮನವಿ ಮಾಡಲಾಗಿದೆ. ಡಾ. ರಾಜ್ ಕುಮಾರ್ ಪ್ರತಿಮೆ ಪಕ್ಕದಲ್ಲೇ ಇರುವ ಜಾಗದಲ್ಲಿ ಮೂರು ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲು ಒತ್ತಾಯ ಕೇಳಿ ಬಂದಿದೆ.

ಬೆಂಗಳೂರಿನಲ್ಲಿ ಹಲವು ಸಂಘ ಸಂಸ್ಥೆಗಳಿಂದ ಹೆಚ್ಚಿದ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಬೇಡಿಕೆ!

ಇನ್ನು ಬೆಂಗಳೂರಿನ ಹೆಸರಾಂತ ಶಿಲ್ಪಿ ಶಿವದತ್ತ ಎಂಬವರಿಗೆ 20ಕ್ಕೂ ಹೆಚ್ಚು ಪ್ರತಿಮೆ ನಿರ್ಮಿಸುವಂತೆ ಆರ್ಡರ್ ಬಂದಿದೆಯಂತೆ. ನಗರದ ಕತ್ರಿಗುಪ್ಪೆಯಲ್ಲಿರುವ ಸ್ತಪತಿ ಕ್ರಿಯೇಷನ್ಸ್ ನ ಮಾಲೀಕ ಶಿವದತ್ತ ಅವರಿಗೆ ಈಗಾಗಲೇ 20ಕ್ಕೂ ಅಧಿಕ ಪುನೀತ್ ರಾಜ್ ಕುಮಾರ್ ಪ್ರತಿಮೆಗೆ ಬೇಡಿಕೆ ಬಂದಿದೆ. ಇದರ ಜೊತೆಗೆ ಆರ್ ಆರ್ ನಗರದ ಆಕಾರದ ಮಾಲೀಕ‌ ಶಿಲ್ಪಿ ಶಿವಕುಮಾರ್ ಗೂ 60 ಪುತ್ಥಳಿ ನಿರ್ಮಿಸುವಂತೆ ಬೇಡಿಕೆ ಬಂದಿದೆ.‌ ಈ ಬಗ್ಗೆ ಪ್ರತಿಕ್ರಿಯಿಸಿದ ಪೋಟ್ರಯೇಟ್ ಬಸ್ಟ್ ಕಲಾವಿದ ಶಿವಕುಮಾರ್, ನನಗೆ 60ಕ್ಕೂ ಅಧಿಕ ಪ್ರತಿಮೆ ನಿರ್ಮಿಸುವಂತೆ ಹಲವರು‌ ಕೇಳಿಕೊಂಡಿದ್ದಾರೆ. ಈ ಅಲ್ಪವಾಧಿಯಲ್ಲಿ ಅಷ್ಟು ಪ್ರತಿಮೆ ತಯಾರಿಸುವುದು ಸಾಧ್ಯವೇ ಎಂಬುವುದು ಗೊತ್ತಿಲ್ಲ. ಆದರೆ ಆದಷ್ಟು ಪ್ರತಿಮೆ ತಯಾರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. 

ಒಟ್ಟಾರೆ ಪುನೀತ್ ರಾಜ್ ಕುಮಾರ್ ಅಗಲಿ ಒಂದು ವಾರ ದಾಟುತ್ತಿದ್ದಂತೆ ಅವರ ಪ್ರತಿಮೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಚ್ಚು ಕಮ್ಮಿ ಈಗಾಗಲೇ ನಗರದಲ್ಲಿ ನೂರಕ್ಕೂ ಅಧಿಕ ಪುತ್ಥಳಿಗೆ ಬೇಡಿಕೆ ಬಂದಿದೆ. ಆದರೆ ಪ್ರತಿಮೆ ಸ್ಥಾಪನೆಗೆ ವಿಘ್ನ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಹೈ ಕೋರ್ಟ್ ಅನಧಿಕೃತ ಜಾಗದಲ್ಲಿ ಇರುವ ಇತರರ ಪ್ರತಿಮೆಯನ್ನು ತೆರವು ಮಾಡಲು ಸೂಚಿಸಿದೆ. ಆದರೆ ಈಗ ಅಪ್ಪು ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಮುನ್ನಲೆಗೆ ಬಂದಿತ್ತು, ಏನಾಗುತ್ತೆ ಎಂಬುವುದನ್ನು ಕಾದು ನೋಡಬೇಕಿದೆ.

Tags: puneeth rajkumarPuneethRajkumar #Death #RIPPowerstar #RAkshithaPrem #KFI #Karnataka #Pratidhvani
Previous Post

ರೈತರ ಕಣ್ಣುಗಳನ್ನು ಕೀಳುತ್ತೇನೆ, ಕೈಗಳನ್ನು ಕತ್ತರಿಸುತ್ತೇನೆ” – ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಂಸದ

Next Post

ಸಿದ್ದರಾಮಯ್ಯರನ್ನು ಸೋಲಿಸಿ ದಳಪತಿ ಬೀಗುವಂತೆ ಮಾಡಿದ ಜಿಟಿ ದೇವೇಗೌಡ ಈಗ ಸಿದ್ದರಾಮಯ್ಯರ ಆಪ್ತ

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

May 20, 2026
Next Post
ಸಿದ್ದರಾಮಯ್ಯರನ್ನು ಸೋಲಿಸಿ ದಳಪತಿ ಬೀಗುವಂತೆ ಮಾಡಿದ ಜಿಟಿ ದೇವೇಗೌಡ ಈಗ ಸಿದ್ದರಾಮಯ್ಯರ ಆಪ್ತ

ಸಿದ್ದರಾಮಯ್ಯರನ್ನು ಸೋಲಿಸಿ ದಳಪತಿ ಬೀಗುವಂತೆ ಮಾಡಿದ ಜಿಟಿ ದೇವೇಗೌಡ ಈಗ ಸಿದ್ದರಾಮಯ್ಯರ ಆಪ್ತ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada