ಪಂಜಾಬ್ ರಾಜಕೀಯದಲ್ಲಿ ಮಾಜಿ ಸಿಎಂ ಅಮರೀಂದರ್ ಸಿಂಗ್ ಹೊಸ ಮನ್ವಂತರ ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ. ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದ ಕ್ಯಾಪ್ಟನ್ ಮುಂದಿನ ನಡೆಯ ಗೊಂದಲಗಳಿಗೆ ಕರೆಗೂ ತೆರೆ ಬಿದ್ದಿದೆ. ಕಾಂಗ್ರೆಸ್ಗೆ ಸೆಡ್ಡು ಹೊಡೆಯುವಂತೆ ಅಮರೀಂದರ್ ಸಿಂಗ್ ಲೋಕ ಕಾಂಗ್ರೆಸ್ ಎಂಬ ಹೊಸ ಪಕ್ಷ ಸ್ಥಾಪಿಸಿದ್ದಾರೆ.
ಇತ್ತೀಚೆಗೆ ಪಂಜಾಬ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕೈ ಪಡೆಯ ವಿರುದ್ಧ ಅಮರಿಂದರ್ ಸಿಂಗ್ ಸಮರ ಸಾರಿದ್ರು. ಜೊತೆಗೆ ಕಾಂಗ್ರೆಸ್ ಪಕ್ಷ ತೊರೆದ ಮೇಲೆ ಬಿಜೆಪಿ ಸೇರ್ತಾರೆ ಎಂಬ ಊಹಾಪೋಹಗಳು ಸಹ ಕೇಳಿ ಬಂದಿದ್ದವು. ಆದ್ರೆ ಈಗ ಅಮರಿಂದರ್ ಸಿಂಗ್ ಲೋಕ ಕಾಂಗ್ರೆಸ್ ಎಂಬ ತಮ್ಮದೇ ಒಂದು ಪಕ್ಷ ಸ್ಥಾಪಿಸುವ ಮೂಲಕ ಎಲ್ಲಾ ಊಹಪೋಹಗಳಿಗೆ ತೆರೆ ಎಳೆದಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಅಮರಿಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದೇ ತಡ, ಕೈ ಪಡೆಯ ವಿರುದ್ಧ ಸಿಂಗ್ ಸಿಡಿದೆದ್ದಿರು. ಇನ್ನೂ ಕಾಂಗ್ರೆಸ್ ತೊರೆಯುವುದಾಗಿ ಹೇಳಿಕೆ ನೀಡಿದ್ರು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ದೆಹಲಿಯಲ್ಲಿ ಅಮಿತ್ ಶಾ, ಮೋದಿಯವರನ್ನು ಕೂಡ ಭೇಟಿ ಮಾಡಿದ್ರು. ಈ ಭೇಟಿಯಿಂದ ಅಮರಿಂದರ್ ಸಿಂಗ್ ಕಮಲಕ್ಕೆ ಸೇರ್ಪಡೆ ಆಗ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿಗೆ ಸ್ವತಃ ಅಮರಿಂದರ್ ನಾನು ಕಾಂಗ್ರೆಸ್ ತೊರೆಯುವುದು ಮಾತ್ರ ಸತ್ಯ. ಆದ್ರೆ ಬಿಜೆಪಿ ಸೇರುತ್ತೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟನೆ ನೀಡಿದ್ರು.
ಪಕ್ಷ ತೊರೆದು ಈಗ ಲೋಕ ಕಾಂಗ್ರೆಸ್ ಎಂಬ ಪಕ್ಷವನ್ನು ಸ್ಥಾಪಿಸಿದ್ದಾರೆ. ಪಕ್ಷ ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಅಧಿಕೃತ ಸದಸ್ಯತ್ವಕ್ಕೆ 7 ಪುಟಗಳ ರಾಜೀನಾಮೆ ಪತ್ರವನ್ನು ಸೋನಿಯಾಗೆ ರವಾನೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೂ ಸಿಂಗ್ ತಮ್ಮ ಹೊಸ ಪಕ್ಷದ ಬಗ್ಗೆ ಟ್ವಿಟರ್ ಪೋಸ್ಟ್ ಮಾಡಿದ್ದು, ಪಕ್ಷದ ನೋಂದಣಿಗೆ ಅನುಮೋದನೆಯೊಂದೇ ಭಾರತದ ಚುನಾವಣಾ ಆಯೋಗದಲ್ಲಿ ಬಾಕಿ ಉಳಿದಿದೆ. ಕೆಲವೇ ದಿನಗಳಲ್ಲಿ ಪಕ್ಷದ ಚಿಹ್ನೆಯನ್ನು ಅಧಿಕೃತಗೊಳಿಸುವುದಾಗಿ ತಿಳಿಸಿದ್ದಾರೆ.
‘ಲೋಕ’ದ ಮುಂದಿನ ನಡೆ ಏನು?
ನಮ್ಮ ಪಕ್ಷ ಸಮಸ್ಯೆ ಆಧಾರಿತ ಬೆಂಬಲ ನೀಡುತ್ತದೆ
3 ಹೊಸ ಕೃಷಿ ಕಾನೂನುಗಳನ್ನು ರದ್ದು ಮಾಡುತ್ತೇವೆ
ಬಿಜೆಪಿ ಜೊತೆ ಹೊಂದಾಣಿಕೆ ಮಾತಿನ ಬಗ್ಗೆ ನಾ ಹೇಳಿಲ್ಲ ಪಕ್ಷ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುತ್ತದೆ ಅಷ್ಟೇ ಆದರೆ ಈ ಬಗ್ಗೆ ಬಿಜೆಪಿಯೊಂದಿಗೆ ಇನ್ನೂ ಮಾತನಾಡಿಲ್ಲ ನಮ್ಮ ಪಕ್ಷ ಸಮಸ್ಯೆ ಆಧಾರಿತ ಬೆಂಬಲ ನೀಡುತ್ತದೆ.
ಜೊತೆಗೆ 3 ಹೊಸ ಕೃಷಿ ಕಾನೂನುಗಳನ್ನು ರದ್ದಿನ ಬಗ್ಗೆ ಮಾತುಕತೆ ನಡೆಸುತ್ತೇವೆ. ನಮ್ಮ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾತಿನ ಬಗ್ಗೆ ನಾನು ಚರ್ಚೆ ಮಾಡಿಲ್ಲ. ಇನ್ನೂ ಪಕ್ಷ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುತ್ತದೆ ಅಷ್ಟೇ. ಆದರೆ ಈ ಬಗ್ಗೆ ಇನ್ನೂ ಬಿಜೆಪಿ ಜೊತೆ ಮಾತಾನಾಡಿಲ್ಲ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ತೊರೆದ ಕೂಡಲೇ ಹೊಸ ಪಕ್ಷ ಸ್ಥಾಪಿಸುವ ಸುಳಿವು ನೀಡಿದ್ದ ಅಮರಿಂದರ್, ಈಗ ಕೈ ಪಡೆಗೆ ಠಕ್ಕರ್ ನೀಡಲು ಲೋಕ ಕಾಂಗ್ರೆಸ್ ಪಾರ್ಟಿಯನ್ನು ಘೋಷಣೆ ಮಾಡಿದ್ದಾರೆ. ಜೊತೆಗೆ ಸೀಟು ಹಂಚಿಕೆ ಬಗ್ಗೆ ಬಿಜೆಪಿ ಮಾತಾಡುವುದಾಗಿ ಹೇಳಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹಾಗೂ ಲೋಕ ಕಾಂಗ್ರೆಸ್ ಪಕ್ಷ ಒಂದಾಗಲಿದ್ದು, ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ಅಮರೀಂದರ್ ಸೇಡು ತೀರಿಸಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.