ಜಿದ್ದಾ-ಜಿದ್ದಿಗೆ ಕಾರಣವಾಗಿದ್ದ ರಾಜ್ಯ ಉಪಚುನಾವಣೆ ತೀರ್ಪು ಪ್ರಕಟವಾಗಿದೆ. ಆದರೆ, ಎರಡೂ ಮತಕ್ಷೇತ್ರಗಳ ಚುನಾವಣೆಯಲ್ಲಿ ದಳಪತಿಗಳು ಮುಗ್ಗರಿಸಿದ್ದಾರೆ. ಕೇವಲ ಸೋತಿದ್ದಷ್ಟೇ ಅಲ್ಲದೆ ಠೇವಣಿಯನ್ನ ಉಳಿಸಿಕೊಳ್ಳಲಾಗದ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ರಾಜ್ಯ ರಾಜ್ಯಕೀಯದ ಸದ್ದು ಗದ್ದಲಕ್ಕೆ ಕಾರಣವಾಗಿದ್ದ ಉಪಸಮರದ ಫಲಿತಾಂಶ ಹೊರಬಿದ್ದಿದೆ. ಬೈ ಎಲೆಕ್ಷನ್ ಫಲಿತಾಂಶ ಕೈ-ಕಮಲ ಪಾಳಯಕ್ಕೆ ಸಿಹಿ-ಕಹಿ ಮಿಶ್ರಣ ನೀಡಿದೆ. ಆದ್ರೆ ದಳಪತಿಗಳಿಗೆ ಮಾತ್ರ ಸಂಪೂರ್ಣ ಕಹಿ ಅನುಭವವಾಗಿದೆ.
ಜೆಡಿಎಸ್ಗೆ ಫಲಿತಾಂಶದಲ್ಲಿ ಹಿನಾಯ ಸೋಲು ಎದುರಾದ ಬಗ್ಗೆ ಸ್ವತಃ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಯವರಿಗೂ ಅಚ್ಚರಿಯನ್ನ ತಂದಿದೆ. ಅದರಲ್ಲೂ ಸಿಂದಗಿಯಲ್ಲಿ ಊಹಿಸದ ರೀತಿಯ ಫಲಿತಾಂಶ ಎದುರಾಗಿದೆ ಎಂದಿದ್ದಾರೆ.
ಬೈ-ಎಲೆಕ್ಷನ್ನಲ್ಲಿ ಜೆಡಿಎಸ್ ಹಿನಾಯವಾಗಿ ಮುಗ್ಗರಿಸಿದ್ದು, ದಳ ಅಭ್ಯರ್ಥಿಗಳು ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳ್ಕೊಂಡಿದ್ದಾರೆ. ಸಿಂದಗಿಯಲ್ಲಿ ನಾಜಿಯಾ ಶಕೀಲ್ ಅಂಗಡಿ 4,321 ಮತಗಳನ್ನ ಪಡೆದಿದ್ರೆ, ಹಾನಗಲ್ನಲ್ಲಿ ನಿಯಾಜ್ ಶೇಖ್ ಕೇವಲ 927 ಮತ ಪಡೆದಿದ್ದಾರೆ. ಈ ಫಲಿತಾಂಶದಿಂದ ಮತದಾರರು ಜೆಡಿಎಸ್ಗೆ ಪಂಚ ಪಾಠ ಕಲಿಸಿದ್ದಾರೆ.
ದಳಪತಿಗಳಿಗೆ ‘ಪಂಚ್’ಪಾಠ
- ಯಾವುದೇ ಪಕ್ಷ ಅಥವಾ ಯಾರ ಮೇಲೂ ಸಾಪ್ಟ್ ಕಾರ್ನರ್ ತೋರಿಸಬಾರದು
- ಉಪಚುನಾವಣೆ ಸೇರಿದಂತೆ ಪ್ರತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಬೇಕು
- ಯಾವುದೋ ಒಂದು ಸಮುದಾಯದ ಓಲೈಕೆಗೆ ಮುಂದಾದರೆ ಸೋಲು ಖಚಿತ
- ಚುನಾವಣೆಯಲ್ಲಿ ಕೇವಲ ಆರೋಪ ಪ್ರತ್ಯಾರೋಪಗಳಿಗೆ ಸೀಮಿತವಾಗಬಾರದು
- ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸದ ಅನಿವಾರ್ಯತೆ ಇದೆ
ಇನ್ನು ಎರಡೂ ಉಪ ಚುನಾವಣೆಯಲ್ಲಿ ಜೆಡಿಎಸ್ನ ಹೀನಾಯ ಸಾಧನೆಯನ್ನ ಗಮನಿಸಿದರೆ ಎಚ್ಡಿಕೆ ಸೋಲಿಗೆ ಕಾರಣ ಏನು ಎಂದು ಗೊತ್ತಾಗಲಿದೆ. ಮತದಾರರು ಜೆಡಿಎಸ್ ನಾಯಕರ ಮಾತಿಗೆ ಮಣೆ ಹಾಕಿಲ್ಲ ಎನ್ನೋದು ಮಾತ್ರ ಸ್ಪಷ್ಟವಾಗುತ್ತೆ.
ಜೆಡಿಎಸ್ಗೆ ಮಣೆ ಹಾಕದ ಮತದಾರ
- ಎರಡೂ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳ ಘೋಷಣೆ
- ಜಮೀರ್ ಖಾನ್ ಜೊತೆಗಿನ ವಾಗ್ಯುದ್ಧದಲ್ಲೇ ಹೆಚ್ಚು ಕಾಲಹರಣ
- ‘ಕೈ’ ನಾಯಕರ ಪ್ರಚಾರದ ವೇಳೆ ಬಿಜೆಪಿ ಬಿ ಟೀಂ ಎಂದು ಪ್ರಸ್ತಾಪ
- ಆರ್ಎಸ್ಎಸ್ ವಿರುದ್ಧ ಕೆಂಡ ಕಾರಿದ್ರೂ ವರ್ಕೌಟ್ ಆಗದ ಪ್ಲ್ಯಾನ್
- ಮನಗೂಳಿ ಪುತ್ರ ಕಾಂಗ್ರೆಸ್ಗೆ ಹೋಗಿದ್ದೇ ಜೆಡಿಎಸ್ಗೆ ಠೇವಣಿ ನಷ್ಟ
- ಅಬ್ಬರದ ಪ್ರಚಾರ ಮಾಡಿದ್ರೂ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ವಿಫಲ
ಎರಡೂ ಮತಕ್ಷೇತ್ರಗಳಲ್ಲಿ ಜೆಡಿಎಸ್ನಿಂದ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನೆ ಘೋಷಣೆ ಮಾಡಲಾಗಿತ್ತು. ಆದ್ರೆ, ಪ್ರಚಾರಕ್ಕಿಂತ ಜಮೀರ್ ಖಾನ್ ಜೊತೆಗಿನ ವಾಗ್ಯುದ್ಧದಲ್ಲೇ ಹೆಚ್ಚು ಕಾಲಹರಣ ಮಾಡಿದ್ರು. ಇದಲ್ಲದೆ ‘ಕೈ’ ನಾಯಕರು ತಮ್ಮ ಪ್ರಚಾರದ ವೇಳೆ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಪ್ರಸ್ತಾಪ ಮಾಡಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು.
ಪ್ರಚಾರದ ವೇಳೆ ಆರ್ಎಸ್ಎಸ್ ವಿರುದ್ಧ ಕೆಂಡ ಕಾರಿದ್ರೂ ದಳಪತಿಗಳ ಪ್ಲ್ಯಾನ್ ವರ್ಕೌಟ್ ಆಗಲಿಲ್ಲ. ಇನ್ನು ಸಿಂದಗಿಯಲ್ಲಿ ಮನಗೂಳಿ ಪುತ್ರ ಕಾಂಗ್ರೆಸ್ಗೆ ಹೋಗಿದ್ದೇ ಜೆಡಿಎಸ್ಗೆ ಠೇವಣಿ ನಷ್ಟ ಅನುಭವಿಸೋಕೆ ಕಾರಣವಾಗಿದೆ. ಅಬ್ಬರದ ಪ್ರಚಾರ ಮಾಡಿದ್ರೂ ಎರಡೂ ಕ್ಷೇತ್ರಗಳಲ್ಲಿ ಮತದಾರರ ಮನ ಗೆಲ್ಲುವಲ್ಲಿ ಜೆಡಿಎಸ್ ವಿಫಲವಾಗಿದೆ.
ಎರಡೂ ಕ್ಷೇತ್ರಗದಳಲ್ಲಿ ಜೆಡಿಎಸ್ ಸೋತು ಸುಣ್ಣವಾಗಿದೆ. ಅಬ್ಬರದ ಪ್ರಚಾರ ನಡೆಸಿದ್ದ ಕುಮಾರಸ್ವಾಮಿಯವರಿಗೂ ಮತದಾರರು ಮಣೆ ಹಾಕಿಲ್ಲ ಎಂಬುದು ಸ್ಪಷ್ಟವಾಗಿದೆ. ಜೆಡಿಎಸ್ಗೆ ಮತದಾರರು ಟ್ರೈ ಟು ಬೆಟರ್ ನೆಕ್ಷ್ಟ್ ಟೈಮ್ ಸಂದೇಶ ರವಾನಿಸಿದ್ದು, ದಳಪತಿಗಳು ಎಚ್ಚೆತ್ತುಕೊಳ್ಳಬೇಕಿದೆ.