• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಿಂದಗಿ-ಹಾನಗಲ್ನಲ್ಲಿ JDSಗೆ ಹೀನಾಯ ಸೋಲು; ಕಾರಣಗಳೇನು? HDK ಕಲಿತ ಪಾಠಗಳೇನು?

ನಚಿಕೇತು by ನಚಿಕೇತು
November 4, 2021
in ಕರ್ನಾಟಕ, ರಾಜಕೀಯ
0
ಸಿಂದಗಿ-ಹಾನಗಲ್ನಲ್ಲಿ JDSಗೆ ಹೀನಾಯ ಸೋಲು; ಕಾರಣಗಳೇನು? HDK ಕಲಿತ ಪಾಠಗಳೇನು?
Share on WhatsAppShare on FacebookShare on Telegram

ಜಿದ್ದಾ-ಜಿದ್ದಿಗೆ ಕಾರಣವಾಗಿದ್ದ ರಾಜ್ಯ ಉಪಚುನಾವಣೆ ತೀರ್ಪು ಪ್ರಕಟವಾಗಿದೆ. ಆದರೆ, ಎರಡೂ ಮತಕ್ಷೇತ್ರಗಳ ಚುನಾವಣೆಯಲ್ಲಿ ದಳಪತಿಗಳು ಮುಗ್ಗರಿಸಿದ್ದಾರೆ. ಕೇವಲ ಸೋತಿದ್ದಷ್ಟೇ ಅಲ್ಲದೆ ಠೇವಣಿಯನ್ನ ಉಳಿಸಿಕೊಳ್ಳಲಾಗದ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ರಾಜ್ಯ ರಾಜ್ಯಕೀಯದ ಸದ್ದು ಗದ್ದಲಕ್ಕೆ ಕಾರಣವಾಗಿದ್ದ ಉಪಸಮರದ ಫಲಿತಾಂಶ ಹೊರಬಿದ್ದಿದೆ. ಬೈ ಎಲೆಕ್ಷನ್ ಫಲಿತಾಂಶ ಕೈ-ಕಮಲ ಪಾಳಯಕ್ಕೆ ಸಿಹಿ-ಕಹಿ ಮಿಶ್ರಣ ನೀಡಿದೆ. ಆದ್ರೆ ದಳಪತಿಗಳಿಗೆ ಮಾತ್ರ ಸಂಪೂರ್ಣ ಕಹಿ ಅನುಭವವಾಗಿದೆ.

ADVERTISEMENT

ಜೆಡಿಎಸ್ಗೆ ಫಲಿತಾಂಶದಲ್ಲಿ ಹಿನಾಯ ಸೋಲು ಎದುರಾದ ಬಗ್ಗೆ ಸ್ವತಃ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಯವರಿಗೂ ಅಚ್ಚರಿಯನ್ನ ತಂದಿದೆ. ಅದರಲ್ಲೂ ಸಿಂದಗಿಯಲ್ಲಿ ಊಹಿಸದ ರೀತಿಯ ಫಲಿತಾಂಶ ಎದುರಾಗಿದೆ ಎಂದಿದ್ದಾರೆ.

ಬೈ-ಎಲೆಕ್ಷನ್ನಲ್ಲಿ ಜೆಡಿಎಸ್ ಹಿನಾಯವಾಗಿ ಮುಗ್ಗರಿಸಿದ್ದು, ದಳ ಅಭ್ಯರ್ಥಿಗಳು ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳ್ಕೊಂಡಿದ್ದಾರೆ. ಸಿಂದಗಿಯಲ್ಲಿ ನಾಜಿಯಾ ಶಕೀಲ್ ಅಂಗಡಿ 4,321 ಮತಗಳನ್ನ ಪಡೆದಿದ್ರೆ, ಹಾನಗಲ್ನಲ್ಲಿ ನಿಯಾಜ್ ಶೇಖ್ ಕೇವಲ 927 ಮತ ಪಡೆದಿದ್ದಾರೆ. ಈ ಫಲಿತಾಂಶದಿಂದ ಮತದಾರರು ಜೆಡಿಎಸ್ಗೆ ಪಂಚ ಪಾಠ ಕಲಿಸಿದ್ದಾರೆ.

ದಳಪತಿಗಳಿಗೆ ‘ಪಂಚ್’ಪಾಠ

  1. ಯಾವುದೇ ಪಕ್ಷ ಅಥವಾ ಯಾರ ಮೇಲೂ ಸಾಪ್ಟ್ ಕಾರ್ನರ್ ತೋರಿಸಬಾರದು
  2. ಉಪಚುನಾವಣೆ ಸೇರಿದಂತೆ ಪ್ರತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಬೇಕು
  3. ಯಾವುದೋ ಒಂದು ಸಮುದಾಯದ ಓಲೈಕೆಗೆ ಮುಂದಾದರೆ ಸೋಲು ಖಚಿತ
  4. ಚುನಾವಣೆಯಲ್ಲಿ ಕೇವಲ ಆರೋಪ ಪ್ರತ್ಯಾರೋಪಗಳಿಗೆ ಸೀಮಿತವಾಗಬಾರದು
  5. ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸದ ಅನಿವಾರ್ಯತೆ ಇದೆ
    ಇನ್ನು ಎರಡೂ ಉಪ ಚುನಾವಣೆಯಲ್ಲಿ ಜೆಡಿಎಸ್ನ ಹೀನಾಯ ಸಾಧನೆಯನ್ನ ಗಮನಿಸಿದರೆ ಎಚ್ಡಿಕೆ ಸೋಲಿಗೆ ಕಾರಣ ಏನು ಎಂದು ಗೊತ್ತಾಗಲಿದೆ. ಮತದಾರರು ಜೆಡಿಎಸ್ ನಾಯಕರ ಮಾತಿಗೆ ಮಣೆ ಹಾಕಿಲ್ಲ ಎನ್ನೋದು ಮಾತ್ರ ಸ್ಪಷ್ಟವಾಗುತ್ತೆ.

ಜೆಡಿಎಸ್ಗೆ ಮಣೆ ಹಾಕದ ಮತದಾರ

  1. ಎರಡೂ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳ ಘೋಷಣೆ
  2. ಜಮೀರ್ ಖಾನ್ ಜೊತೆಗಿನ ವಾಗ್ಯುದ್ಧದಲ್ಲೇ ಹೆಚ್ಚು ಕಾಲಹರಣ
  3. ‘ಕೈ’ ನಾಯಕರ ಪ್ರಚಾರದ ವೇಳೆ ಬಿಜೆಪಿ ಬಿ ಟೀಂ ಎಂದು ಪ್ರಸ್ತಾಪ
  4. ಆರ್ಎಸ್ಎಸ್ ವಿರುದ್ಧ ಕೆಂಡ ಕಾರಿದ್ರೂ ವರ್ಕೌಟ್ ಆಗದ ಪ್ಲ್ಯಾನ್
  5. ಮನಗೂಳಿ ಪುತ್ರ ಕಾಂಗ್ರೆಸ್ಗೆ ಹೋಗಿದ್ದೇ ಜೆಡಿಎಸ್ಗೆ ಠೇವಣಿ ನಷ್ಟ
  6. ಅಬ್ಬರದ ಪ್ರಚಾರ ಮಾಡಿದ್ರೂ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ವಿಫಲ

ಎರಡೂ ಮತಕ್ಷೇತ್ರಗಳಲ್ಲಿ ಜೆಡಿಎಸ್ನಿಂದ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನೆ ಘೋಷಣೆ ಮಾಡಲಾಗಿತ್ತು. ಆದ್ರೆ, ಪ್ರಚಾರಕ್ಕಿಂತ ಜಮೀರ್ ಖಾನ್ ಜೊತೆಗಿನ ವಾಗ್ಯುದ್ಧದಲ್ಲೇ ಹೆಚ್ಚು ಕಾಲಹರಣ ಮಾಡಿದ್ರು. ಇದಲ್ಲದೆ ‘ಕೈ’ ನಾಯಕರು ತಮ್ಮ ಪ್ರಚಾರದ ವೇಳೆ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಪ್ರಸ್ತಾಪ ಮಾಡಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು.

ಪ್ರಚಾರದ ವೇಳೆ ಆರ್ಎಸ್ಎಸ್ ವಿರುದ್ಧ ಕೆಂಡ ಕಾರಿದ್ರೂ ದಳಪತಿಗಳ ಪ್ಲ್ಯಾನ್ ವರ್ಕೌಟ್ ಆಗಲಿಲ್ಲ. ಇನ್ನು ಸಿಂದಗಿಯಲ್ಲಿ ಮನಗೂಳಿ ಪುತ್ರ ಕಾಂಗ್ರೆಸ್ಗೆ ಹೋಗಿದ್ದೇ ಜೆಡಿಎಸ್ಗೆ ಠೇವಣಿ ನಷ್ಟ ಅನುಭವಿಸೋಕೆ ಕಾರಣವಾಗಿದೆ. ಅಬ್ಬರದ ಪ್ರಚಾರ ಮಾಡಿದ್ರೂ ಎರಡೂ ಕ್ಷೇತ್ರಗಳಲ್ಲಿ ಮತದಾರರ ಮನ ಗೆಲ್ಲುವಲ್ಲಿ ಜೆಡಿಎಸ್ ವಿಫಲವಾಗಿದೆ.

ಎರಡೂ ಕ್ಷೇತ್ರಗದಳಲ್ಲಿ ಜೆಡಿಎಸ್ ಸೋತು ಸುಣ್ಣವಾಗಿದೆ. ಅಬ್ಬರದ ಪ್ರಚಾರ ನಡೆಸಿದ್ದ ಕುಮಾರಸ್ವಾಮಿಯವರಿಗೂ ಮತದಾರರು ಮಣೆ ಹಾಕಿಲ್ಲ ಎಂಬುದು ಸ್ಪಷ್ಟವಾಗಿದೆ. ಜೆಡಿಎಸ್ಗೆ ಮತದಾರರು ಟ್ರೈ ಟು ಬೆಟರ್ ನೆಕ್ಷ್ಟ್ ಟೈಮ್ ಸಂದೇಶ ರವಾನಿಸಿದ್ದು, ದಳಪತಿಗಳು ಎಚ್ಚೆತ್ತುಕೊಳ್ಳಬೇಕಿದೆ.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಪೆಟ್ರೋಲ್, ಡೀಸಲ್ ಮೇಲಿನ ತೆರಿಗೆ ಕಡಿತ  ಮೋದಿ ವರ್ಚಸ್ಸು ಉಳಿಸುವ ಹುನ್ನಾರವೇ?

Next Post

ಉಪಚುನಾವಣೆ ಸೋಲಿನ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಕೇಂದ್ರ : ನೆಟ್ಟಿಗರಿಂದ ಫುಲ್ ಟ್ರೋಲ್

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ದೆಹಲಿ ಸಭೆ ಬಳಿಕ ಕಾಂಗ್ರೆಸ್‌ನಲ್ಲಿ ಕುತೂಹಲ

ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ದೆಹಲಿ ಸಭೆ ಬಳಿಕ ಕಾಂಗ್ರೆಸ್‌ನಲ್ಲಿ ಕುತೂಹಲ

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

May 26, 2026
Next Post
ಉಪಚುನಾವಣೆ ಸೋಲಿನ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಕೇಂದ್ರ : ನೆಟ್ಟಿಗರಿಂದ ಫುಲ್ ಟ್ರೋಲ್

ಉಪಚುನಾವಣೆ ಸೋಲಿನ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಕೇಂದ್ರ : ನೆಟ್ಟಿಗರಿಂದ ಫುಲ್ ಟ್ರೋಲ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada