ಹಾಸ್ಯ ಕಾರ್ಯಕ್ರಮವೊಂದರಲ್ಲಿ (Standup comedy show) ಹಿಂದೂ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳನ್ನು ಅವಮಾನಿಸಿದ್ದಾರೆ ಎಂಬ ಆರೋಪದಲ್ಲಿ ಒಂದು ತಿಂಗಳು ಜೈಲಿನಲಿದ್ದು ಜಾಮೀನಿನ ಮೇಲೆ ಹೊರಬಂದಿರುವ ಮುನ್ನಾವರ್ ಫಾರುಖ್, ಈಗಲೂ ದಿನನಿತ್ಯ ಬೆದರಿಕೆ ಕರೆಗಳು ಬರುತ್ತಿವೆ ಮತ್ತು ಕಾರ್ಯಕ್ರಮ ಮಾಡಿದರೆ ಆ ಸ್ಥಳವನ್ನು ಸುಟ್ಟು ಹಾಕುತ್ತೇವೆ ಎಂಬ ಕರೆಗಳು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೂರು ಪ್ರದರ್ಶನ ರದ್ದುಗೊಳಿಸಿದ ನಂತರ NDTVಯೊಂದಿಗೆ ಮಾತಾಡಿರು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರುಖ್ ಅವರು, ಈ ದೇಶದ ಯುವಕರು ನಾವು ಯಾರಿಗೆ ಓಟ್ ಹಾಕಬೇಕು ಎಂದು ನಿರ್ಧರಿಸುತ್ತಾರೊ ಅದೇರೀತಿ ನಾವು ಯಾವುದನ್ನು ನೋಡಬೇಕು ಎಂಬುದನ್ನು ನಿರ್ಧರಿಸಬಹುದು ಎಂದು ಹೇಳಿದ್ದಾರೆ.
“ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ” ಆರೋಪದ ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿ ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ಫಾರುಖ್, ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರವೂ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ ನನಗೆ ಅನೇಕ ಅಡೆತಡೆಗಳನ್ನು ಬಲಪಂಥಿಯರು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ನನಗೆ ದಿನಕ್ಕೆ 50 ಬೆದರಿಕೆ ಕರೆಗಳು ಬರುತ್ತವೆ, ನಾನು ನನ್ನ ಸಿಮ್ ಕಾರ್ಡ್ ಅನ್ನು ಮೂರು ಬಾರಿ ಬದಲಾಯಿಸಿದ್ದೇನೆ ಆದರೂ ನನ್ನ ಸಂಖ್ಯೆ ಸೋರಿಕೆಯಾಗಿದೆ, ಜನರು ಕರೆ ಮಾಡಿ ನನ್ನನ್ನು ನಿಂದಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಫಾರುಖ್ ನಡೆಸುವ ಕಾರ್ಯಕ್ರಮದ ಸ್ಥಳಗಳನ್ನು ಸುಟ್ಟುಹಾಕುವುದಾಗಿ ಬಲಪಂಥೀಯ ಗುಂಪು ಬೆದರಿಕೆ ಹಾಕಿದ ನಂತರ ಮುಂಬೈ ಪ್ರದರ್ಶನಗಳನ್ನು ಫಾರುಖ್ ರದ್ದುಗೊಳಿಸಿದ್ದಾರೆ. ರದ್ದತಿಯ ಕುರಿತು ಟ್ವೀಟ್ ಮಾಡಿರುವ ಅವರು, ಪ್ರೇಕ್ಷಕರ ಸುರಕ್ಷತೆಯು ತನಗೆ ಹೆಚ್ಚು ಮುಖ್ಯವಾಗಿದೆ ಹಾಗಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗುತ್ತಿಲ್ಲ . ದೊಡ್ಡ ವಿಷಯವೆಂದರೆ ಈ ಮೂರು ಶೋಗಳಿಗೆ, ಒಟ್ಟು 1,500 ಜನರು ಒಂದು ತಿಂಗಳ ಹಿಂದೆಯೇ ಟಿಕೆಟ್ ಖರೀದಿಸಿದ್ದಾರೆ. ಅವರ ಬಗ್ಗೆ ನನಗೆ ಬೇಸರವಾಗಿದೆ”ಎಂದು ಅವರು ಹೇಳಿದ್ದಾರೆ.
“ನಾನು ಬಹುಶಃ ತಪ್ಪು ಮಾಡಿದ್ದೇನೆ ಎಂದು ನಾನು ಕೆಲವೊಮ್ಮೆ ಭಾವಿಸುತ್ತೇನೆ, ಆದರೆ , ಕೆಲವರು ಇದರಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ಅರ್ಥವಾಯಿತು” ಎಂದು ಅವರು ಹೇಳಿದ್ದಾರೆ.
ಕಾಮಿಕ್ ಗೆ”ಎಲ್ಲರೂ ಗುರಿಯಾಗಿರುತ್ತಾರೆ” ಆದರೆ “ನನ್ನ ವಿಷಯದಲ್ಲಿ, ಅವರು ಧರ್ಮವನ್ನು ಎಳೆದು ತರುತ್ತಿದ್ದಾರೆ, ಅದು ನನಗೆ ಹೆದರಿಕೆ ತರುತ್ತದೆ” ಎಂದು ಹೇಳಿದ್ದಾರೆ.
ನಾನು ಬಂಧನ ಮತ್ತು ಜಾಮೀನಿನ ನಂತರ, ಸುಮಾರು 50 ಪ್ರದರ್ಶನಗಳಲ್ಲಿ ಪ್ರದರ್ಶನ ನೀಡಿದ್ದೇನೆ ಮತ್ತು ಅವುಗಳಲ್ಲಿ 90 ಪ್ರತಿಶತದಷ್ಟು ಕಾರ್ಯಕ್ರಮದಲ್ಲಿ ಪ್ರೇಕ್ಷಕರು ನಿಂತು ಚಪ್ಪಾಳೆ ತಟ್ಟಿದ್ದಾರೆ ಎಂದು ಫರುಕಿ ಹೇಳಿದರು. “ಯಾರು ಯಾವ ಧರ್ಮ ಅಥವಾ ಜಾತಿಗೆ ಸೇರಿದವರು ಎಂದು ಪ್ರೇಕ್ಷಕರು ಯೋಚಿಸುವುದಿಲ್ಲ ಮತ್ತು ನನ್ನ ಶೋಗಳಲ್ಲಿ ಯಾವುದೇ ಧರ್ಮದ ಬಗ್ಗೆ ಯಾವುದೇ ಕಾಮೆಂಟ್‌ಗಳು ಬಂದಿಲ್ಲ” ಎಂದು ಹೇಳಿದ್ದಾರೆ.
ಎರಡು ಗಂಟೆಗಳ ಪ್ರದರ್ಶನದಿಂದ 10 ಸೆಕೆಂಡುಗಳ ಕ್ಲಿಪ್ ಅನ್ನು ಮಾತ್ರ ಪ್ರಸಾರ ಮಾಡುವ ಮೂಲಕ ಬಜರಂಗದಳದ ಸದಸ್ಯರು ತನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸ್ಟ್ಯಾಂಡ್-ಅಪ್ ಕಲಾವಿದ ಮುನಾವರ್ ಫಾರುಖ್ ಹೇಳಿದ್ದಾರೆ.
“ನೀವು ಕ್ಲಿಪ್ ಅನ್ನು out of context ನಲ್ಲಿ ತೋರಿಸಿ ನಾನು (ಹಿಂದೂ ದೇವರುಗಳನ್ನು) ಅವಮಾನಿಸಿದ್ದೇನೆ ಎಂದು ಹೇಳುತ್ತೀರಿ” ಎಂದು ಹೇಳಿದ್ದಾರೆ.
drivers, volunteers and guards ಸೇರಿದಂತೆ 80 ಜನರು ಒಂದೇ ಪ್ರದರ್ಶನದಿಂದ ಜೀವನೋಪಾಯವನ್ನು ರೂಪಿಸಿಕೊಂಡಿದ್ದಾರೆ ಆದರೆ ” ಕಳೆದ ಒಂದೂವರೆ ವರ್ಷಗಳಿಂದ ಇವರು ನಿರುದ್ಯೋಗಿಗಳಾಗಿದ್ದಾರೆ. ಅವರ ಬಗ್ಗೆ ನನಗೆ ಬೇಸರವಾಗಿದೆ” ಎಂದುಬೇಸರ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ಮಾಲಿಕ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಪ್ರೊಗ್ರಾಮ್ ಮಾಡಿ ಎಂದು ಹೇಳುತ್ತಿದ್ದಾರೆ ಆದರೆ ಕಾರ್ಯಕ್ರಮದ ಜಾಗವನ್ನೇ ಸುಟ್ಟು ಹಾಕುತ್ತೇವೆ ಎಂದು ಹೇಳಿದರೆ ಯೋಚನೆ ಮಾಡಲೇಬೇಕಾಗುತ್ತದೆ. ಹಾಗಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೇವೆ. ಈ ಸ್ವತಂತ್ರ ದೇಶದಲ್ಲಿ ಈತರದ ಬೆದರಿಗಳು ತಪ್ಪು ಎಂದು ಹೇಳಿದ್ದಾರೆ.
“ದ್ವೇಷ ಗೆದ್ದಿದೆ, ಆದ್ದರಿಂದ ಪ್ರದರ್ಶನಗಳು ರದ್ದುಗೊಂಡಿವೆ. ಆದರೆ ಎಲ್ಲಿಯವರೆಗೆ ಅವರು ಗೆಲ್ಲಲು ಸಾಧ್ಯ? ನಾವು ಗೆದ್ದೇ ಗೆಲ್ಲುತ್ತೇವೆ, ಹಾಗ ಎಲ್ಲೆಡೆ ನಗುವನ್ನು ಹರಡುತ್ತೇವೆ” ಎಂದು ಮುನಾವರ್ ಫಾರುಖ್ ಹೇಳಿದ್ದಾರೆ.