• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮೈಸೂರಿನ ಪ್ರತಿ ದಲಿತರ ಮನೆಯಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರವಿತ್ತು : ಮಾಜಿ ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದು ಯಾಕೆ ಗೊತ್ತೇ?

ಪ್ರತಿಧ್ವನಿ by ಪ್ರತಿಧ್ವನಿ
October 31, 2021
in ಕರ್ನಾಟಕ
0
ಮೈಸೂರಿನ ಪ್ರತಿ ದಲಿತರ ಮನೆಯಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರವಿತ್ತು : ಮಾಜಿ ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದು ಯಾಕೆ ಗೊತ್ತೇ?
Share on WhatsAppShare on FacebookShare on Telegram

1978 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನು ಜನತಾ ಪಕ್ಷದ ಮೈಸೂರು ತಾಲೂಕು ಘಟಕದ ಅಧ್ಯಕ್ಷನಾಗಿದ್ದೆ. ಮೈಸೂರಿನ ಚಾಮುಂಡಿ ಕ್ಷೇತ್ರದ ಹಾರೋಹಳ್ಳಿ ಎಂಬ ಹರಿಜನರ ಕಾಲೋನಿಗೆ ಮತ ಕೇಳಲು ಹೋಗಿದ್ದಾಗ ಅಲ್ಲಿ ಎಲ್ಲರ ಮನೆಯಲ್ಲೂ ಇಂದಿರಾ ಗಾಂಧಿಯವರ ಭಾವಚಿತ್ರವಿತ್ತು ಎಂದು ಹೇಳಿದ್ದಾರೆ.

ADVERTISEMENT

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಹುತಾತ್ಮ ದಿನ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಭಾಗವಹಿಸಿ, ಮಾತನಾಡಿದ್ದು, 1978 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನು ಜನತಾ ಪಕ್ಷದ ಮೈಸೂರು ತಾಲೂಕು ಘಟಕದ ಅಧ್ಯಕ್ಷನಾಗಿದ್ದೆ. ರಾಜಶೇಖರ ಮೂರ್ತಿಯವರು ಚಾಮುಂಡೇಶ್ವರಿ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಯಾಗಿದ್ದರು. ನಾನು ಮತ್ತು ಅವರು ಹಾರೋಹಳ್ಳಿ ಎಂಬ ಹರಿಜನರ ಕಾಲೋನಿಗೆ ಮತ ಕೇಳಲು ಹೋಗಿದ್ದೆವು. ಆಗ ಆ ಊರಿಗೆ ದೇವಸ್ಥಾನ ಕಟ್ಟಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜಶೇಖರ ಮೂರ್ತಿಯವರು ಊರಿನವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ನಾನು ಊರನ್ನು ನೋಡಿ ಬರೋಣ ಎಂದು ಹೊರಟು ಮನೆಗಳಿಗೆ ಹೋಗಿದ್ದೆ, ಅಲ್ಲಿನ ಪ್ರತಿ ದಲಿತರ ಮನೆಯಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರವಿತ್ತು. ಜಯ ದೇವರಾಜ ಅರಸು ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರನ್ನು ಮತ ಕೇಳಲು ಯಾವ ಊರಿನ ಒಳಗೂ ಬಿಟ್ಟಿರಲಿಲ್ಲ, ಆದರೆ ಫಲಿತಾಂಶ ನೋಡಿದರೆ ಆ ಚುನಾವಣೆಯಲ್ಲಿ ಜಯ ದೇವರಾಜ ಅರಸು ಅವರು ಗೆದ್ದಿದ್ದರು. ಅಷ್ಟರ ಮಟ್ಟಿಗೆ ಶ್ರೀಮತಿ ಇಂದಿರಾ ಗಾಂಧಿಯವರು ಬಡವರ ಮನಸ್ಸಿನಲ್ಲಿ ನೆಲೆಯೂರಿದ್ದರು ಎಂದು ಹೇಳಿದ್ದಾರೆ..

ಲಾಲ್ ಬಹದ್ದೂರ್ ಶಾಸ್ತ್ರಿಯವರ ನಂತರ ದೇಶದ ಪ್ರಧಾನಿಯಾದ ಶ್ರೀಮತಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದಲ್ಲೇ ಸಾಕಷ್ಟು ವಿರೋಧ ಎದುರಿಸಿದವರು ಎಂದಿದ್ದಾರೆ. 1969 ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಯಿತು. ನಜಲಿಂಗಪ್ಪನವರು ಸಿಂಡಿಕೇಟ್ ಬಣದ ನಾಯಕರಾದರೆ, ಇಂದಿರಾ ಗಾಂಧಿಯವರು ಇನ್ನೊಂದು ಬಣದ ನಾಯಕತ್ವ ವಹಿಸಿಕೊಂಡರು. ಆ ನಂತರದಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಹಾಗೂ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿದ ರೀತಿ ಆದರ್ಶಪ್ರಾಯವಾದುದ್ದು ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿಯವರು 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದು ಬಡತನವನ್ನು ನಿರ್ಮೂಲನೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಗರೀಬಿ ಹಠಾವೋ ಘೋಷಣೆಯ ಮೂಲಕ ಬಡಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಮಹಿಳೆಯರಿಗೆ, ರೈತರಿಗೆ ಅವರು ಹಲವು ಯೋಜನೆಗಳನ್ನು ರೂಪಿಸಿದ್ದರು. ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸಿ, ಭೂರಹಿತರಿಗೆ ಭೂಮಿಯ ಒಡೆತನ ಸಿಗುವಂತೆ ಮಾಡಿದರು. ರಾಜಧನ ರದ್ದು, ಬ್ಯಾಂಕುಗಳು ರಾಷ್ಟ್ರೀಕರಣ ಇವರ ಕಾಲದ ಪ್ರಮುಖ ಸುಧಾರಣೆಗಳಾಗಿವೆ. ಬಡವರಿಗೆ ಬ್ಯಾಂಕುಗಳ ಸೌಲಭ್ಯ ಸಿಗುವಂತೆ ಮಾಡಿದವರು ಶ್ರೀಮತಿ ಇಂದಿರಾ ಗಾಂಧಿಯವರು. ಈ ಎಲ್ಲಾ ಕಾರ್ಯಕ್ರಮಗಳ ಪರಿಣಾಮವಾಗಿ ಜನ ಅವರನ್ನು ದೇವತೆಯಂತೆ ಕಾಣುತ್ತಿದ್ದರು ಎಂದು ಹೇಳಿದ್ದಾರೆ.

1978 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನು ಜನತಾ ಪಕ್ಷದ ಮೈಸೂರು ತಾಲೂಕು ಘಟಕದ ಅಧ್ಯಕ್ಷನಾಗಿದ್ದೆ. ರಾಜಶೇಖರ ಮೂರ್ತಿಯವರು ಚಾಮುಂಡೇಶ್ವರಿ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಯಾಗಿದ್ದರು. ನಾನು ಮತ್ತು ಅವರು ಹಾರೋಹಳ್ಳಿ ಎಂಬ ಹರಿಜನರ ಕಾಲೋನಿಗೆ ಮತ ಕೇಳಲು ಹೋಗಿದ್ದೆವು. ಆಗ ಆ ಊರಿಗೆ ದೇವಸ್ಥಾನ ಕಟ್ಟಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜಶೇಖರ ಮೂರ್ತಿಯವರು ಊರಿನವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ನಾನು ಊರನ್ನು ನೋಡಿ ಬರೋಣ ಎಂದು ಹೊರಟು ಮನೆಗಳಿಗೆ ಹೋಗಿದ್ದೆ, ಅಲ್ಲಿನ ಪ್ರತಿ ದಲಿತರ ಮನೆಯಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರವಿತ್ತು. ಜಯ ದೇವರಾಜ ಅರಸು ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರನ್ನು ಮತ ಕೇಳಲು ಯಾವ ಊರಿನ ಒಳಗೂ ಬಿಟ್ಟಿರಲಿಲ್ಲ, ಆದರೆ ಫಲಿತಾಂಶ ನೋಡಿದರೆ ಆ ಚುನಾವಣೆಯಲ್ಲಿ ಜಯ ದೇವರಾಜ ಅರಸು ಅವರು ಗೆದ್ದಿದ್ದರು. ಅಷ್ಟರ ಮಟ್ಟಿಗೆ ಶ್ರೀಮತಿ ಇಂದಿರಾ ಗಾಂಧಿಯವರು ಬಡವರ ಮನಸ್ಸಿನಲ್ಲಿ ನೆಲೆಯೂರಿದ್ದರು ಎಂದಿದ್ದಾರೆ.

1970, 80 ರ ದಶಕದಲ್ಲಿ ಇಂದಿರಾ ಗಾಂಧಿಯವರು ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನಪ್ರಿಯರಾಗಿದ್ದವರು, ಅದರಲ್ಲೂ ವಿಶೇಷವಾಗಿ ಸಮಾಜದ ಬಡವರ್ಗದ ಜನ ಅವರನ್ನು ದೇವರಂತೆ ಕಾಣುತ್ತಿದ್ದರು. ರಾಜಕಾರಣಿಗಳಿಗೆ ಇಂತಹಾ ವಿಶೇಷ ಸ್ಥಾನಮಾನ, ಗೌರವ ಸಿಗುವುದು ಬಲು ಅಪರೂಪ. ಒಮ್ಮೆ ಹುಣಸೂರಿನ ಶಾಸಕರಾದ ಪ್ರೇಮ್ ಕುಮಾರ್ ಅವರ ರೂಮಿನಲ್ಲಿ ಎಫ್.ಎಂ ಖಾನ್ ಅವರ ಜೊತೆ ಕೂತಿದ್ದಾಗ ಯಾರೋ ಒಬ್ಬ ಬಂದು ಚುನಾವಣೆಗೆ ಹಣ ಬೇಕು ಎಂದು ಕೇಳಿದ ಆಗ ಖಾನ್ ಅವರು ಹಣ ಯಾಕಪ್ಪ ಬೇಕು? ಸುಮ್ಮನೆ ಹೋಗಿ ಇಂದಿರಾ ಗಾಂಧಿಯವರ ಫೋಟೋ ಮತ್ತು ಕರಪತ್ರ ಕೊಡಿ ಸಾಕು ಎಂದರು. ಕೊನೆಗೆ ಫಲಿತಾಂಶ ನೋಡಿ ನನಗೂ ಆಶ್ಚರ್ಯವಾಯ್ತು. ಅವರು 28ರಲ್ಲಿ 27 ಸ್ಥಾನಗಳನ್ನು ಗೆದ್ದಿದ್ದರು. ಆಗ ಬಂಗಾರಪ್ಪ ನವರು ಅಧ್ಯಕ್ಷರಾಗಿದ್ದರು, ಗುಂಡೂರಾವ್ ಅವರು ವಿರೋಧ ಪಕ್ಷದ ನಾಯಕರಾಗಿದ್ದರು ಎಂದು ಹೇಳಿದ್ದಾರೆ.

ಪೂರ್ವ ಪಾಕಿಸ್ತಾನವನ್ನು ಪಶ್ಚಿಮ ಪಾಕಿಸ್ತಾನದ ಅಧೀನದಿಂದ ಮುಕ್ತಿಗೊಳಿಸಿದರು. ಈ ಸಂದರ್ಭದಲ್ಲಿ ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆಯಿತು. ನಂತರ ಬಾಂಗ್ಲಾದೇಶದ ವಿಮೋಚನೆಯಾಯಿತು. ಆ ಸಮಯದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿಯವರನ್ನು ದುರ್ಗೆ ಎಂದು ಕರೆದಿದ್ದರು. ಅವರ ಧೈರ್ಯ ಮತ್ತು ದಿಟ್ಟತನದ ನಿರ್ಧಾರಗಳಿಂದಾಗಿ ಉಕ್ಕಿನ ಮಹಿಳೆ ಎಂದು ಕರೆಯಲ್ಪಡುತ್ತಿದ್ದಾರೆ.

ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದರು. ನಮ್ಮ ನಾಯಕಿಯಾದ ಸೋನಿಯಾ ಗಾಂಧಿಯವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದ್ದಾರೆ. ಹತ್ತು ವರ್ಷಗಳ ಕಾಲ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿದ್ದು ಸೋನಿಯಾ ಗಾಂಧಿಯವರು. ಪ್ರಧಾನಿ ಹುದ್ದೆ ಬೇಡ ಎನ್ನುವವರು ಯಾರಾದರೂ ಇದ್ದಾರ ಬೇರೆ ಪಕ್ಷದಲ್ಲಿ? ಪಂಚಾಯತಿ ಅಧ್ಯಕ್ಷಗಿರಿಗಾಗೇ ಗೆದ್ದ ಸದಸ್ಯರನ್ನು ಬೇರೆಡೆಗೆ ಕರೆದುಕೊಂಡು ಹೋಗಿ, ಆಮಿಷ ನೀಡುವ ಇಂತಹಾ ಕಾಲಘಟ್ಟದಲ್ಲಿ ಮನೆ ಬಾಗಿಲಿಗೆ ಬಂದಿದ್ದ ಪ್ರಧಾನಿ ಹುದ್ದೆಯನ್ನು ಬೇಡ ಎಂದವರು ಸೋನಿಯಾ ಗಾಂಧಿ ಅವರು. ನೆಹರು ಅವರ ಇಡೀ ಕುಟುಂಬ ದೇಶಕ್ಕಾಗಿ ತ್ಯಾಗ ಬಲಿದಾನಗೈದಿದೆ. ಅವರ ಆದರ್ಶ ಮತ್ತು ಧ್ಯೇಯವನ್ನು ಮುಂದುವರೆಸಿಕೊಂಡು ಹೋಗುವ ಕೆಲಸವನ್ನು ನಾವೆಲ್ಲ ಮಾಡಬೇಕು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿದ್ದರು. ತೀರ ಬಡತನದಲ್ಲಿದ್ದ ರೈತ ಕುಟುಂಬದಲ್ಲಿ ಜನಿಸಿದ ಅವರು ತಡವಾಗಿ ಶಿಕ್ಷಣ ಸಿಕ್ಕಿದ್ದರಿಂದ ತಮ್ಮ 22 ನೇ ವಯಸ್ಸಿಗೆ ಎಸ್.ಎಸ್.ಎಲ್.ಸಿ ಪಾಸ್ ಮಾಡಿ, ಕಾನೂನು ಪಧವಿ ಪಡೆದು, ವಕೀಲರಾಗಿ ಕೆಲಸ ಮಾಡುತ್ತಿದ್ದರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು.

ಒಮ್ಮೆ ಅವರು ನ್ಯಾಯಾಲಯದಲ್ಲಿ ವಾದ ಮಾಡುತ್ತಾ ಇರುವಾಗ ಯಾರೋ ಒಬ್ಬರು ಬಂದು ಒಂದು ಚೀಟಿ ಕೊಡುತ್ತಾರೆ, ಅದರಲ್ಲಿ ನಿಮ್ಮ ಪತ್ನಿ ಕಾಲವಾಗಿದ್ದಾರೆ ಎಂದು ಬರೆದಿರುತ್ತದೆ. ಆದರೂ ಕೂಡ ಅವರು ಸ್ವಲ್ಪವೂ ವಿಚಲಿತರಾಗದೆ ತಮ್ಮ ವಾದ ಮುಂದುವರೆಸಿದರು. ನಂತರ ಪತ್ನಿಯ ಶವ ನೋಡಲು ಹೋಗಿದ್ದರು. ಇಷ್ಟರ ಮಟ್ಟಿನ ಕರ್ತವ್ಯ ನಿಷ್ಠೆ ಅವರಿಗಿತ್ತು ಎಂಬುದನ್ನು ನಾವು ನೆನಪು ಮಾಡಿಕೊಳ್ಳಬೇಕು.

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ 565 ಸಂಸ್ಥಾನಗಳು ಇದ್ದಾವೆ, ಇವೆಲ್ಲ ಒಂದುಗೂಡುವುದು ಅಸಾಧ್ಯ ಎಂದು ಬ್ರಿಟೀಷರು ಭಾವಿಸಿದ್ದರು. ಆಗ ಪಟೇಲರು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡು ಈ ಎಲ್ಲಾ ಸಂಸ್ಥಾನಗಳನ್ನು ಒಗ್ಗೂಡಿಸಿದ ರೀತಿ ಅವಿಸ್ಮರಣೀಯ. ಮಾತುಕತೆ, ರಾಜಿ ಸಂಧಾನ, ಬಲಪ್ರಯೋಗ ಮೂರು ರೀತಿಯಲ್ಲಿ ಕಾರ್ಯಾಚರಣೆ ನಡೆಸಿ, ದೇಶ ಒಗ್ಗೂಡಿಸುವ ಕಾರ್ಯ ಮಾಡಿದರು. ಜಮ್ಮು ಕಾಶ್ಮೀರ, ಹೈದರಾಬಾದ್, ತಮಿಳುನಾಡು ಮುಂತಾದವುಗಳನ್ನು ಬಲ ಪ್ರಯೋಗದಿಂದ ಒಗ್ಗೂಡಿಸಿದ್ದು. ಇಂತಹಾ ಅತ್ಯಂತ ಕ್ಲಿಷ್ಟಕರವಾದ ಕೆಲಸವನ್ನು ಮಾಡುವುದು ಸಾಮಾನ್ಯ ನಾಯಕರಿಂದ ಆಗದ ಕೆಲಸ ಎಂದಿದ್ದಾರೆ.

ಬಿಜೆಪಿಯವರು ಪಟೇಲರ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನೆಹರು ಅವರಿಗೆ ಅಗೌರವ ತೋರಿ, ಪಟೇಲರಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತು ಎಂದು ಅಪಪ್ರಚಾರ ಮಾಡುವ ಮೂಲಕ ದಲಿತರನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ನಂತರದಲ್ಲಿ ಹುಟ್ಟಿದ ನರೇಂದ್ರ ಮೋದಿ ಅವರು ದೇಶದ ಸ್ವಾತಂತ್ರ್ಯದ ಬಗ್ಗೆ, ದೇಶಭಕ್ತಿಯ ಬಗ್ಗೆ ದೊಡ್ಡ ದೊಡ್ಡ ಮಾತನಾಡಿ ತಮ್ಮಿಂದಲೇ ದೇಶ ಉಳಿದಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಭಾರತೀಯ ಜನತಾ ಪಕ್ಷದವರು ಢೋಂಗಿ ದೇಶಭಕ್ತರು. ಕಾಂಗ್ರೆಸ್ ನವರು ಮಾತ್ರ ದೇಶಕ್ಕಾಗಿ ಪ್ರಾಣ, ಆಸ್ತಿ ಪಾಸ್ತಿ ತ್ಯಾಗ ಮಾಡಿದ್ದಾರೆ. ಇದು ಕಾಂಗ್ರೆಸ್ ಗೂ ಮತ್ತು ಬಿಜೆಪಿಗೂ ಇರುವ ವ್ಯತ್ಯಾಸ.

ದೇಶಕಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ಪಕ್ಷ. ನರೇಂದ್ರ ಮೋದಿಯವರು ಕಾಂಗ್ರೆಸ್ ಪಕ್ಷ ದೇಶಕ್ಕೆ ಏನು ಮಾಡಿದೆ ಎಂದು ನಮ್ಮನ್ನೇ ಕೇಳುತ್ತಾರೆ. ದೇಶದಲ್ಲಿ ಡಿಜಿಟಲ್ ಕ್ರಾಂತಿ ಆಗಲು ರಾಜೀವ್ ಗಾಂಧಿ ಕಾರಣ, ನರೇಂದ್ರ ಮೋದಿ ಪ್ರಧಾನಿಯಾಗಿರುವುದೇ ಕಾಂಗ್ರೆಸ್ ನವರಿಂದ. ಕಾಂಗ್ರೆಸ್ ನವರು ಸ್ವಾತಂತ್ರ್ಯಕ್ಕಾಗಿ ಹೋರಾಡದೆ ಇದ್ದಿದ್ದರೆ, ದೇಶಕ್ಕೆ ಸ್ವಾತಂತ್ರ್ಯ ಬರುತ್ತಿತ್ತಾ? ಮೋದಿ ಪ್ರಧಾನಿ ಆಗುತ್ತಿದ್ದರಾ?

ದೇಶಕ್ಕಾಗಿ ಅನೇಕ ಕಾಂಗ್ರೆಸ್ ನಾಯಕರು ತ್ಯಾಗ ಬಲಿದಾನಗೈದಿದ್ದಾರೆ. ನಾವು ಅವರಂತೆ ತ್ಯಾಗ, ಬಲಿದಾನ ಮಾಡಲು ಆಗದಿದ್ದರೂ ಅವರು ನಡೆದ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಮತ್ತು ದೇಶಕ್ಕೆ ನೀಡುವ ಕೊಡುಗೆಯಾಗಿದೆ ಎಂದಿದ್ದಾರೆ.

Tags: BJPCongress Partyಇಂದಿರಾ ಗಾಂಧಿಬಿಜೆಪಿಸಿದ್ದರಾಮಯ್ಯ
Previous Post

ಪುನೀತ್‌ಗೆ ಸಕಲ ಸರ್ಕಾರಿ ಗೌರವ ಸಲ್ಲಿಕೆ, ಸಿ.ಎಂ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರಿಂದ ಅಂತಿಮ ನಮನ

Next Post

ಪುನೀತ್ ಅವರನ್ನು ಭೇಟಿ ಮಾಡುವ ಕನಸಿತ್ತು ಅದು ಕನಸಾಗೆ ಉಳಿಯಿತು : ಅಭಿಮಾನಿಗಳ ಮನದಾಳದ ಮಾತು

Related Posts

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ
ಕರ್ನಾಟಕ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

by ಪ್ರತಿಧ್ವನಿ
April 26, 2026
0

ನವದೆಹಲಿ, ಏ. 26: ಎರಡು ದಿನಗಳ ದೆಹಲಿ ಪ್ರವಾಸದ ವೇಳೆ ಬೆಂಗಳೂರು ನಗರದ ಅಭಿವೃದ್ಧಿ, ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆಗಳು ಹಾಗೂ ವಿವಿಧ ರಾಜ್ಯಗಳ ಚುನಾವಣೆಗಳ ಕುರಿತು...

Read moreDetails
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
ಪುನೀತ್ ಅವರನ್ನು ಭೇಟಿ ಮಾಡುವ ಕನಸಿತ್ತು ಅದು ಕನಸಾಗೆ ಉಳಿಯಿತು : ಅಭಿಮಾನಿಗಳ ಮನದಾಳದ ಮಾತು

ಪುನೀತ್ ಅವರನ್ನು ಭೇಟಿ ಮಾಡುವ ಕನಸಿತ್ತು ಅದು ಕನಸಾಗೆ ಉಳಿಯಿತು : ಅಭಿಮಾನಿಗಳ ಮನದಾಳದ ಮಾತು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada