• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಧರ್ಮದ ಆಧಾರದ ಮೇಲೆ ದಾಳಿ ಮಾಡುವವರು ಪುಕ್ಕಲರು : ಶಮಿ ಟ್ರೋಲ್ ವಿರುದ್ಧ ಕೊಹ್ಲಿ ಹೇಳಿಕೆ

Any Mind by Any Mind
October 31, 2021
in ಕ್ರೀಡೆ, ದೇಶ
0
ಧರ್ಮದ ಆಧಾರದ ಮೇಲೆ ದಾಳಿ ಮಾಡುವವರು ಪುಕ್ಕಲರು : ಶಮಿ ಟ್ರೋಲ್ ವಿರುದ್ಧ ಕೊಹ್ಲಿ ಹೇಳಿಕೆ
Share on WhatsAppShare on FacebookShare on Telegram

ಟಿ-20 ಕ್ರಿಕೆಟ್‌ ವಿಶ್ವಕಪ್‌ ಸರಣಿಯಲ್ಲಿ  ಪಾಕಿಸ್ತಾನದೆದುರು ಭಾರತ ಸೋತ ಬಳಿಕ ತಂಡದ ಆಟಗಾರ ಶಮಿ ವಿರುದ್ಧ ನಿಂದನಾತ್ಮಕ ಟೀಕೆಗಳ ಕುರಿತಂತೆ ತಂಡದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಹ್ಲಿ, “ಒಬ್ಬರ ಧರ್ಮದ ಆಧಾರದ ಮೇಲೆ ಅವರ ವಿರುದ್ಧ ದಾಳಿ ನಡೆಸುವುದು ಅತ್ಯಂತ ಕಳವಳಕಾರಿ ಸಂಗತಿ” ಎಂದು ಹೇಳಿದ್ದಾರೆ.

ADVERTISEMENT

ಪಾಕ್ ವಿರುದ್ಧ ಸೋಲು : ಶಮಿ ವಿರುದ್ಧ ದ್ವೇಷ – ಬೆನ್ನಿಗೆ ನಿಂತ ಸೆಹ್ವಾಗ್, ಪಠಾಣ್, ಹರ್ಭಜನ್

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡುವವರು ಬೆನ್ನುಮೂಳೆ ಇಲ್ಲದ ಜನರು ಎಂದಿರುವ ಕೊಹ್ಲಿ, ಅವರಿಗೆ (ಟ್ರೋಲ್ ಮಾಡುವವರಿಗೆ) ನಿಜ ಬದುಕಿನಲ್ಲಿ ಯಾರನ್ನೂ ವೈಯಕ್ತಿಕವಾಗಿ ಎದುರಿಸುವ ಹಾಗೂ ಮಾತನಾಡುವ ಧೈರ್ಯ ಇರುವುದಿಲ್ಲ, ಅವರು ಬೆನ್ನು ಮೂಳೆ ಇಲ್ಲದ ಜನರ ಗುಂಪು ಎಂದು ಕೊಹ್ಲಿ ಹೇಳಿದ್ದಾರೆ.

ಭಾರತದ ಕಳಪೆ ಪ್ರದರ್ಶನ: ಪಾಕಿಸ್ತಾನಕ್ಕೆ ಭರ್ಜರಿ ಜಯ

ಧರ್ಮವನ್ನು ಗುರಿಯಾಗಿಸಿ ಆಕ್ರಮಣ ಮಾಡುವುದು ಒಬ್ಬ ಮನುಷ್ಯ ಮಾಡಬಹುದಾದ ಅತ್ಯಂತ ಹೀನಾಯ ಕೃತ್ಯ. ಏಕೆಂದರೆ ಧರ್ಮ ಎಂಬುದು ಅತ್ಯಂತ ಪವಿತ್ರ ಮತ್ತು ವೈಯಕ್ತಿಕ ವಿಷಯವಾಗಿದೆ. ಯಾವುದೇ ವ್ಯಕ್ತಿಯನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಬಾರದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕ್ರಿಕೆಟಲ್ಲಿ ಭಾರತದ ವಿರುದ್ಧದ ಪಾಕ್‌ ಗೆಲುವು ಸಂಭ್ರಮಿಸುವುದು ದೇಶದ್ರೋಹವಲ್ಲ – ಸುಪ್ರೀಂ ನಿವೃತ್ತ ನ್ಯಾಯಾಧೀಶ ದೀಪಕ್‌ ಗುಪ್ತಾ

ಧರ್ಮದ ಆಧಾರದಲ್ಲಿ ಆಟಗಾರರನ್ನು ನೋಡುವುದು ಸಂಪೂರ್ಣ ತಪ್ಪು. ನಾನು ಯಾರೊಂದಿಗೂ ಈ ರೀತಿ ವರ್ತಿಸಿಲ್ಲ. ಆದರೆ ಇದು ಕೆಲವರ ಕೆಲಸ. ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಪ್ರಮುಖ ಭಾಗ. ಅವರು ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇಂತಹ ಟೀಕೆಗಳನ್ನು ಮಾಡುವವರಿಗಾಗಿ ನನ್ನ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ನಾವು ಶಮಿ ಜೊತೆ ಶೇಕಡಾ 200 ರಷ್ಟು ನಿಲ್ಲುತ್ತೇವೆ. ತಂಡದಲ್ಲಿನ ನಮ್ಮ ಸಹೋದರತ್ವವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ.

ಕೊಹ್ಲಿಗೂ ಮೊದಲು, ಶಮಿ ವಿರುದ್ಧ ಟ್ರೋಲ್‌ಗಳ ವಿರುದ್ಧ ಸಚಿನ್‌, ಗಂಭೀರ್‌, ಸೆಹ್ವಾಗ್‌ ಸೇರಿದಂತೆ ಹಲವು ಕ್ರಿಕೆಟಿಗರು ದನಿಯೆತ್ತಿದ್ದರು.

Tags: IndiaMahammad ShamiPakistanVirat Kohliಕೊಹ್ಲಿಗಂಭೀರ್ಟಿ-20 ಕ್ರಿಕೆಟ್ಪಾಕಿಸ್ತಾನಬಿಜೆಪಿಭಾರತವಿರಾಟ್ ಕೊಹ್ಲಿವಿಶ್ವಕಪ್ ಸರಣಿಸಚಿನ್ಸಾಮಾಜಿಕ ಜಾಲತಾಣಸೆಹ್ವಾಗ್
Previous Post

ಅಪ್ಪು ಇನ್ನು ನೆನಪು ಮಾತ್ರ : ಕಂಠೀರವ ಸ್ಟುಡಿಯೋ ಸುತ್ತಮುತ್ತ 144 ಸೆಕ್ಷನ್ ಜಾರಿ

Next Post

ತಂದೆಯ ದಾರಿಯಲ್ಲೆ ನಡೆದ ಮಗ ; ಸಂಭಾವನೆ ಪಡೆಯದೇ ಜಾಹೀರಾತು ಮಾಡಿದ ಅಪ್ಪು!

Related Posts

ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಸೇರಿ ಇಬ್ಬರು ಸಾ**
Top Story

ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಸೇರಿ ಇಬ್ಬರು ಸಾ**

by ಪ್ರತಿಧ್ವನಿ
August 27, 2026
0

ಲಕ್ನೋ: ತರಬೇತಿ ವಿಮಾನ ಪತನಗೊಂಡು ಇಬ್ಬರು ಪೈಲಟ್ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಕರ್ನಾಟಕದ ಅಭಿಷೇಕ್ ಪೂಜಾರಿ ಕೂಡ ಮೃತಪಟ್ಟಿದ್ದಾರೆ ಎನ್ನುವ...

Read moreDetails
ನೇಪಾಳದಲ್ಲಿ ಕಂಡು ಕೇಳರಿಯದ ಪ್ರವಾಹ: ಸಂಕಷ್ಟದಲ್ಲಿರುವ ಭಾರತೀಯರಿಗೆ ತುರ್ತು ಸಹಾಯವಾಣಿ

ನೇಪಾಳದಲ್ಲಿ ಕಂಡು ಕೇಳರಿಯದ ಪ್ರವಾಹ: ಸಂಕಷ್ಟದಲ್ಲಿರುವ ಭಾರತೀಯರಿಗೆ ತುರ್ತು ಸಹಾಯವಾಣಿ

August 27, 2026
2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ

2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ

August 27, 2026
RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ಇಲಾಖೆಯಿಂದ ಬಿಗ್‌ ಶಾಕ್..!

RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ಇಲಾಖೆಯಿಂದ ಬಿಗ್‌ ಶಾಕ್..!

August 27, 2026
ನೇಪಾಳದಲ್ಲಿ ಭೀಕರ ಪ್ರವಾಹ: 8 ಮಂದಿ ಸಾ**.. ಭದ್ರತಾ ಸಿಬ್ಬಂದಿ ಸೇರಿ ನೂರಾರು ಮಂದಿ ನಾಪತ್ತೆ

ನೇಪಾಳದಲ್ಲಿ ಭೀಕರ ಪ್ರವಾಹ: 8 ಮಂದಿ ಸಾ**.. ಭದ್ರತಾ ಸಿಬ್ಬಂದಿ ಸೇರಿ ನೂರಾರು ಮಂದಿ ನಾಪತ್ತೆ

August 26, 2026
Next Post
ತಂದೆಯ ದಾರಿಯಲ್ಲೆ ನಡೆದ ಮಗ ; ಸಂಭಾವನೆ ಪಡೆಯದೇ ಜಾಹೀರಾತು ಮಾಡಿದ ಅಪ್ಪು!

ತಂದೆಯ ದಾರಿಯಲ್ಲೆ ನಡೆದ ಮಗ ; ಸಂಭಾವನೆ ಪಡೆಯದೇ ಜಾಹೀರಾತು ಮಾಡಿದ ಅಪ್ಪು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada