ಭಾರತ ಚೀನಾ ಗಡಿಯಲ್ಲಿ ಈಗ ಶಾಂತಿ, ಸಾಮರಸ್ಯದ ಮಾತುಕತೆ ನಡೆಯುತ್ತಿದೆ. ಈ ನಡುವೆಯೇ ಕೆಲ ತಿಂಗಳ ಹಿಂದೆ ಭಾರತದ ಮೇಲೆ ಸೈಬರ್ ಅಟ್ಯಾಕ್ ಮಾಡಲು ಮುಂದಾಗುತ್ತಿದಂತೆ ಚೀನಾ. ಭಾರತ ಸರ್ಕಾರದ 12 ಸಂಸ್ಥೆಗಳ ಮೇಲೆ ಚೀನಾ ಹ್ಯಾಕರ್‌ಗಳ ಕಣ್ಣು ಬಿದ್ದಿರೋದು ಈಗ ಬಟಾ ಬಯಲಾಗಿದ್ದು, ಹ್ಯಾಕರ್‌ಗಳಿಗೂ ಚೀನಾ ಆರ್ಮಿಗೂ ಇರೋ ಸಂಬಂಧ ಬೆಚ್ಚಿ ಬೀಳಿಸುವಂತಿದೆ.
ಅಂದು 2020ರ ಅಕ್ಟೋಬರ್ 12. ಇದ್ದಕ್ಕಿಂದ್ದಂತೆ ಮುಂಬೈ ನಗರಿ ಎರಡು ಗಂಟೆ ಸ್ತಬ್ದಗೊಂಡಿತ್ತು. ಮುಂಬೈ, ಥಾಣೆ ಮತ್ತು ನವಿ ಮುಂಬೈನಲ್ಲಿ ವಿದ್ಯುತ್ ಸ್ಥಗಿತಗೊಂಡು ರೈಲುಗಳು ರದ್ದಾಗಿದ್ವು. ಸರ್ಕಾರಿ ಕಚೇರಿಗಳು ಮುಚ್ಚಿದವು, ಸ್ಟಾಕ್ ಮಾರುಕಟ್ಟೆಯೂ ಸ್ತಬ್ದಗೊಂಡಿತ್ತು. ಆವತ್ತು ಅಲ್ಲಿ ಏನಾಗಿತ್ತು? ಯಾಕೆ ಇಂತಹ ಘಟನೆ ನಡೆದಿತ್ತು ಅನ್ನೋದ್ರ ಹಿಂದೆ ಕುತಂತ್ರಿ ಚೀನಾ ಇರೋ ಆಘಾತಕಾರಿ ಸತ್ಯ ಹೊರಬಿದ್ದಿದೆ.

ಹೌದು, ಇಂತಹದ್ದೊಂದು ಆಘಾತಕಾರಿ ವಿಚಾರ ಇದೀಗ ಬಯಲಾಗಿದೆ. ಅಂದು ಮುಂಬೈ ನಗರದಲ್ಲಿ ಅಂತಹ ಘಟನೆ ಆಗೋದಕ್ಕೆ ಕಾರಣ ಚೀನಾ ಅನ್ನೋದು ಬಹಿರಂಗವಾಗಿದೆ. ಚೀನಾದ ಹ್ಯಾಕರ್ಗಳು ಭಾರತದ ಮೇಲೆ ಸೈಬರ್ ಅಟ್ಯಾಕ್ಗೆ ಪ್ಲಾನ್ ಮಾಡ್ತಿರೋದು ಗೊತ್ತಾಗಿದೆ. ಈ ವಿಚಾರವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ, ಅಮೆರಿಕ ಮೂಲದ ‘ರೆಕಾರ್ಡೆಡ್ ಫ್ಯೂಚರ್’ ಸಂಸ್ಥೆ.
‘ರೆಕಾರ್ಡೆಡ್ ಫ್ಯೂಚರ್’ ಹೇಳಿದ್ದೇನು?
ಭಾರತದ 12ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳ ಸಿಸ್ಟಂಗಳು ಹ್ಯಾಕ್
ಹ್ಯಾಕರ್ಗಳು ಚೀನಾ ಸರ್ಕಾರ ಬೆಂಬಲಿತ ಗುಂಪುಗಳಿಗೆ ಸೇರಿವೆ
ರೆಕಾರ್ಡೆಡ್ ಫ್ಯೂಚರ್’ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಯಲು
ವಿಶೇಷ ಸಾಫ್ಟ್‌ವೇರ್ʼಗಳನ್ನು ಬಳಸಿ ಭಾರತದ ಮೇಲೆ ದಾಳಿ
ಸಿಸ್ಟಂಗಳಿಗೆ ಮಾಲ್ವೇರ್ಗಳನ್ನ ಬಿಟ್ಟು ದಿಕ್ಕುತಪ್ಪಿಸುವ ಕೆಲಸ
ಮುಂಬೈ ವಿದ್ಯುತ್ ಘಟಕ ಸೇರಿ ಇತರ ಸಂಸ್ಥೆಗಳ ಸಿಸ್ಟಂ ಹ್ಯಾಕ್
2020ರ ಮದ್ಯದಲ್ಲಿ ಭಾರತದ 12ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳ ಸಿಸ್ಟಂಗಳು ಹ್ಯಾಕ್ ಆಗಿದ್ದವು. ಇದರ ಹಿಂದೆ ಇರುವ ಹ್ಯಾಕರ್ಗಳು ಚೀನಾ ಸರ್ಕಾರ ಬೆಂಬಲಿತ ಗುಂಪುಗಳಿಗೆ ಸೇರಿವೆ ಅನ್ನೋದು ‘ರೆಕಾರ್ಡೆಡ್ ಫ್ಯೂಚರ್’ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ. ವಿಶೇಷ ಸಾಫ್ಟ್‌ವೇರ್ʼಗಳನ್ನು ಬಳಸಿ ಭಾರತದ ಮೇಲೆ ದಾಳಿ ನಡೆಸಿ ಸಿಸ್ಟಂಗಳಿಗೆ ಮಾಲ್ವೇರ್ಗಳನ್ನ ಬಿಟ್ಟು ದಿಕ್ಕುತಪ್ಪಿಸುವ ಕೆಲಸ ನಡೆಯುತ್ತಿದೆ. 2020ರ ಅಕ್ಟೋಬರ್ನಲ್ಲಿ ಮುಂಬೈ ವಿದ್ಯುತ್ ಘಟಕ ಸೇರಿ ಇತರ ಸಂಸ್ಥೆಗಳ ಸಿಸ್ಟಂಗಳು ಕೂಡ ಇದೇ ರೀತಿ ಹ್ಯಾಕ್ ಆಗಿತ್ತು ಅಂತ ರೆಕಾರ್ಡೆಡ್ ಫ್ಯೂಚರ್’ ಹೇಳಿದೆ.
ಇನ್ನು ಹ್ಯಾಕ್ ಮಾಡಿದವರು ಜಸ್ಟ್ ಚೀನಾದ ಹ್ಯಾಕರ್ ಅಷ್ಟೇ ಅಲ್ಲ, ಇದೊಂದು ದೊಡ್ಡ ಪಿತೂರಿ. ಇದ್ರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಅನ್ನೋದು ಕೂಡ ರೆಕಾರ್ಡೆಡ್ ಫ್ಯೂಚರ್’ ಅಧ್ಯಯನದಲ್ಲಿ ಬಯಲಾಗಿದೆ.

ಭಾರತೀಯ ಸಿಸ್ಟಂಗಳನ್ನ ಹ್ಯಾಕ್ ಮಾಡಿದ್ದ ಚೀನೀ ಹ್ಯಾಕರ್ಸ್ ಗುಂಪುಗಳಲ್ಲಿ ರೆಡ್ ಇಕೋ ಕೂಡ ಇದೆ. ಇವು ಚೀನಾದ ಗುಪ್ತಚರ ಮತ್ತು ಭದ್ರತಾ ಸಂಸ್ಥೆಯಾದ ಎಂಎಸ್ಎಸ್ ಹಾಗೂ ಪಿಎಲ್ಎ ಸೇನೆಗೆ ಕೆಲಸ ಮಾಡುತ್ತವೆ. ಹ್ಯಾಕ್ ಮಾಡಿದ ದಿನದಂದೇ ಚೀನಾದ ಪಿಎಲ್ಎ ಸೇನೆ ಲಡಾಖ್ನಲ್ಲಿ ಭಾರತದ ಗಡಿಭಾಗವನ್ನ ಅತಿಕ್ರಮಿಸುವ ಕೆಲಸ ಆರಂಭಿಸಿತ್ತು ಅಂತಾಲು ಗೊತ್ತಾಗಿದೆ.
ಈ ವಿಚಾರ ಬಯಲಾಗುವ ಮೂಲಕ ಅಂದಿನ ಹ್ಯಾಕಿಂಗ್ ಹಿಂದೆ ಚೀನಾ ಇರೋದು ಕನ್ಫಮ್ ಆಗಿದೆ. ಇನ್ನು ಇದು ಭಾರತಕ್ಕೆ ದೊಡ್ಡ ಶಾಕ್ ನೀಡಿದೆ. ಇನ್ನು ಚೀನಾವನ್ನ ಅಷ್ಟು ಸುಲಭವಾಗಿ ತೆಗೆದುಕೊಳ್ಳಬಾರದು ಅನ್ನೋ ಸಂದೇಶ ಭಾರತಕ್ಕೆ ಈ ಮೂಲಕ ಸಿಕ್ಕಂತಾಗಿದೆ.












