ಜುಮ್ಲಾ ಆವೃತ್ತಿಯ ಕೋವಿಡ್ ಲಸಿಕೆ ಕಥೆಗಳಿಂದ ಜನರ ಜೀವ ಉಳಿಸಲು ಸಾಧ್ಯವಿಲ್ಲ. ಅದೇನಿದ್ದರು ನಿಜವಾಗಿಯೂ ಸಂಪೂರ್ಣ ಲಸಿಕೆ ನೀಡಿದರೆ ಮಾತ್ರ ಸಾಧ್ಯ ಎಂದು ಬುಧವಾರ ರಾಹುಲ್ ಗಾಂಧಿ ಹೇಳಿದ್ದಾರೆ.
ನೂರು ಕೋಟಿ ಲಸಿಕೆ ನೀಡಿರುವ ಕುರಿತು ಮೋದಿ ನೇತೃತ್ವದ ಸರ್ಕಾರ ಹೇಳಿಕೊಂಡಿದ್ದು ಇದನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆಯಾದ ಸೋನಿಯಾ ಗಾಂಧಿ ವಿಮರ್ಶಿಸಿ ಖಾಸಗಿ ಪತ್ರಿಕೆಗೆ ಒಂದು ಲೇಖವನ್ನು ಬರೆದಿದ್ದಾರೆ. ಟ್ವೀಟರ್ ನಲ್ಲಿ ಈ ಲೇಖವನ್ನು ಹಂಚಿಕೊಂಡ ರಾಹುಲ್ ಗಾಂಧಿ, ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಮತ್ತು ಮಕ್ಕಳಿಗೆ ಲಸಿಕೆ ನೀಡಬೇಕಾಗಿದೆ ಎಂದು ಹೇಳಿದ್ದಾರೆ.
“ಜುಮ್ಲಾ ಲಸಿಕೆ ಕಥೆಗಳು ಜೀವ ಉಳಿಸುವುದಿಲ್ಲ, ನಿಜವಾದ ಲಸಿಕೆ ಮಾತ್ರ ಜೀವ ಉಳಿಸಲು ಸಾಧ್ಯ. #DutyToVaccinate” ಎಂಬ ಹ್ಯಾಶ್ ಟ್ಯಾಗ್ ಮಾಡಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಕೂಡ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಸೋನಿಯಾ ಗಾಂಧಿ ಅವರ ಲೇಖನವನ್ನು ಹಂಚಿಕೊಂಡಿದ್ದು, ಪ್ರಧಾನಿ ಮಂತ್ರಿಗಳು ಉಚಿತ ಲಸಿಕೆ ಎಂದು ಒತ್ತಿ ಹೇಳಲು ಇಷ್ಟ ಪಡುತ್ತಾರೆ ಆದರೆ ಅದು ಉಚಿತವಾಗಿರುವುದು ಅನುಕೂಲಕರವಾಗಿದೆ ಎಂಬುದನ್ನು ಅವರು ಮರೆತೆಬಿಡುತ್ತಾರೆ. ಬಿಜೆಪಿ ಸರ್ಕಾರ ಭಾರತದ ಸಾರ್ವತ್ರಿಕ ಉಚಿತ ಲಸಿಕೆ ನೀತಿಯಿಂದ ದೂರ ಸರಿದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ಕೂಡ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಸೋನಿಯಾ ಗಾಂಧಿ ಅವರ ಲೇಖನವನ್ನು ಹಂಚಿಕೊಂಡಿದ್ದು, ಕರೋವದಿಂದ ದೇಶ ಆರ್ಥಿಕವಾಗಿ ಕುಸಿದಿದ್ದೇವೆ. ಈಗ ನಮ್ಮ ಪರಿಸ್ಥಿತಿ ಮೋಡ ಕವಿದ ವಾತಾವರಣದಂತಾಗಿದೆ ಇದು ಸರಿಯಾಗಬೇಕು ಎಂದರೆ ಲಸಿಕೆ ವೇಗವನ್ನು ಸಂಪೂರ್ಣವಾಗಿ ಹೆಚ್ಚಿಸುವ ಅಗತ್ಯವಿದೆ. ನಮ್ಮ ಮಕ್ಕಳಿಗೂ ಸೇರಿದಂತೆ ಉಸಿತ ಲಸಿಕೆ ನೀಡುವ ಅಗತ್ಯವಿದೆ.
ಕಾಂಗ್ರೆಸ್ ಮುಖ್ಯ ವಕ್ತಾರ ರಣದೀದ್ ಸುರ್ಜೆವಾಲ ಕೂಡ ಸೋನಿಯಾ ಗಾಂಧಿ ಅವರ ಲೇಖನವನ್ನು ಹಂಚಿಕೊಂಡಿದ್ದು, ಪೊಳ್ಳು ಘೋಷಣೆಯಿಂದ ನಮ್ಮ ನಾಗರಿಕರ ಮೇಲೆ ಪರಿಣಾಮ ಬೀರುವುದಲ್ಲದೇ ರಾಷ್ಟ್ರದ ಸಂಪತ್ತಿನ ಮೇಲೂ ಪರಿಣಾಮ ಬೀರಲಿದೆ. ನಮ್ಮ ಮಕ್ಕಳೂ ಸೇರಿದಂತೆ ಎಲ್ಲರಿಗೂ ವೇಗವಾಗಿ ಲಸಿಕೆ ನೀಡಬೇಕು ಎಂದು ಹೇಳಿದ್ದಾರೆ.
ವಾಕ್ಸಿನೇಷನ್ ಮೈಲಿಗಲ್ಲು ಮತ್ತು ದೂರದ ಗುರಿ ಎಂಬ ತಲೆ ಬರಹದ ಲೇಖನದಲ್ಲಿ ಸೋನಿಯಾ ಗಾಂಧಿ, ನಮ್ಮ ಭಾರತೀಯ ನಾಗರಿಕರಿಗೆ ಸಾಧ್ಯವಾದಷ್ಟು ಬೇಗ ಲಸಿಕೆ ಹಾಕುವುದು ಅವರ ಆರೋಗ್ಯ ಮತ್ತು ಪ್ರಗತಿಗೆ ಸಂಭಂದಿಸಿದೆ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ನಮ್ಮ ಆರೋಗ್ಯ ಮುಂಚೂಣಿಯಲ್ಲಿರುವ ಕಾರ್ಯಕರ್ತರು ನೂರು ಕೋಟಿ ಲಸಿಕೆ ಡೋಸ್ ಮೈಲಿಗಲ್ಲು ಸಾಧಿಸಿರುವುದನ್ನು ಅಭಿನಂದಿಸುತ್ತೇವೆ. ಅನೇಕ ಅಡೆತಡೆಗಳನ್ನು ಬೇದಿಸಿ ನಮ್ಮ ಆರೋಗ್ಯ ಮುಂಚೂಣಿ ಕಾರ್ಯಕರ್ತರು, ವಿಜ್ಞಾನಿಗಳು, ಸಂಶೋಧಕರು ಮತ್ತು ಲಸಿಕೆ ತಯಾರಕರು ಮುನ್ನುಗಿದ್ದಾರೆ. ಅವರ ಎಲ್ಲಾ ಪ್ರಯತ್ನಕ್ಕೂ ಧನ್ಯವಾದಗಳು. ಆರಂಭಿಕ ತಿಂಗಳಲ್ಲಿನ ವಿಳಂಬ ನಿರ್ಣಯ ಮತ್ತು ಅನೇಕ ಗೊಂದಲಗಳ ನಂತರ ನಮ್ಮ ವಾಕ್ಸಿನೇಷನ್ ಡ್ರೈವ್ ವೇಗಗೊಂಡಿದೆ ಎಂದು ಸೋನಿಯಾ ಗಾಂಧಿ ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ನೂರು ಕೋಟಿ ಮೈಲಿಗಲ್ಲು ವಿಜ್ಞಾನ, ಭಾರತದ ಸಂಶೋಧನೆ ಮತ್ತು ಉತ್ಪಾದನಾ ಮೂಲಸೌಕರ್ಯವನ್ನು ದಶಕಗಳಿಂದ ನಿರ್ಮಿಸಿ ಬೆಳೆಸಿದ ವಿಜಯವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

2021ರ ಅಂತ್ಯದ ವೇಳೆಗೆ ಎಲ್ಲಾ ಅರ್ಹ ಭಾರತೀಯರಿಗೆ ಎರಡು ಡೋಸ್ ಲಸಿಕೆ ಹಾಕಲಾಗುತ್ತದೆ ಎಂಬ ಭರವಸೆಯನ್ನು ಈಡೇರಿಸುವ ಸಾಧ್ಯತೆಯಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಉಲ್ಲೇಖಿಸಿದ್ದಾರೆ.