• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಸಿ.ಟಿ ರವಿ ; ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡ ನೆಟ್ಟಿಗರು

ಶರಣು ಚಕ್ರಸಾಲಿ by ಶರಣು ಚಕ್ರಸಾಲಿ
October 27, 2021
in ಕರ್ನಾಟಕ, ರಾಜಕೀಯ
0
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಸಿ.ಟಿ ರವಿ ; ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡ ನೆಟ್ಟಿಗರು
Share on WhatsAppShare on FacebookShare on Telegram

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ,”ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಎನ್ನುವ ನಿಮ್ಮ ವಾದದ ಪ್ರಕಾರ ಮುಸ್ಲಿಂ ಟೋಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ?,”ಎಂದು ಅತಿ ಕೀಳುಮಟ್ಟದ ಭಾಷೆ ಬಳಸಿ ನಿಂದಿಸಿರುವ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತ ಪಡಿಸಿ, ರವಿ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ.

ADVERTISEMENT

ಸಿ ಟಿ ರವಿ ಅವರ ಫೇಸ್ ಬುಕ್ ವಾಲ್ ಗೊಮ್ಮೆ ಇಣುಕಿದರೆ ಸಾಕು, ನೆಟ್ಟಿಗರ ಆಕ್ರೋಶ ಯಾವ ಪರಿಯಲ್ಲಿದೆ ಎನ್ನುವುದು ತಿಳಿಯುತ್ತಿದೆ. ರವಿ ಅವರ ಈ ಒಂದು ಪೋಸ್ಟ್ ನಿಂದ ಇಡೀ ಬಿಜೆಪಿಯನ್ನೇ ಗುರಿಯಾಗಿಸಿಕೊಂಡ ನೆಟ್ಟಿಗರು; ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್, ಸಚಿವ ಆರ್ ಅಶೋಕ ಮುಂತಾದ ಬಿಜೆಪಿ ನಾಯಕರು ಮುಸ್ಲಿಂ ಟೋಪಿ ಧರಿಸಿದ ಭಾವಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಮನಬಂದಂತೆ ರವಿ ಹಾಗೂ ಬಿಜೆಪಿ ಪಾಳಯದ ಚಳಿ ಬಿಡಿಸುತ್ತಿದ್ದಾರೆ.

ವೀರನಗೌಡ ಬಿ. ಎಚ್ ಎನ್ನುವವರು ರವಿ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿ, “ಕರುಬರು ಅಷ್ಟೇ ಕಂಬಳಿ ಹಾಕಬೇಕು ಅಂತ ಯಾವ ನಾಲಾಯಕ ಹೇಳಿದ್ದು ನಿಮಗೆ? ಮೊದಲು ಕಂಬಳಿ ಬಗ್ಗೆ ಬುರುಡೆ ಬೊಮ್ಮಾಯಿಯವರು ಮಾತಾಡಿದ್ದಾರೆ. ಕಂಬಳಿ ಹೊದ್ದು ಬೆಳೆದವರಿಗೆ ಕಂಬಳಿ ಹಾಕಲು ಯೋಗ್ಯತೆ ಬೇಕು ಅಂತ ಹೇಳಿದ್ದಕ್ಕೆ ಸಿದ್ದರಾಮಯ್ಯ ಅವರು ತಿರುಗೇಟು ಕೊಟ್ಟಿದ್ದಾರೆ. ಈ ಹಿಂದೆ ಬೊಮ್ಮಾಯಿ ಕೂಡ ಮುಸ್ಮಿಂ ಟೋಪಿ ಹಾಕಿದ್ದರು. ಅವರು ಯಾರಿಗೆ ಹುಟ್ಟಿರಬೇಕು ಅಂತ ನೀವೆ ಹೇಳಿ?” ಎಂದು ಕುಟುಕಿದ್ದಾರೆ.

“ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಯಾಗಿದ್ದವರು. ಸಾರ್ಥಕ ಆಯ್ತು… ಯಾವ ದೇವರು ಹೊಟ್ಟೆಯೊಳಗೆ ಸೇರಿದ್ರೋ…” ಎಂದು ಸ್ವಾರ್ಣಾ ಭಟ್ ಪೋಸ್ಟ್ ಹಾಕಿದ್ದಾರೆ. ಶ್ರೀಶೈಲ್ ಕೂಡಗಿ ಎನ್ನುವವರು ಪ್ರತಿಕ್ರಿಯಿಸಿ, “ನಾನು ಕೂಡ ಒಬ್ಬ ಕಟ್ಟರ್ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತ. ರಾಜಕೀಯವಾಗಿ ವಿರೋಧಿಸುವುದನ್ನು ಕಲಿಯಿರಿ. ಓರ್ವ ಹಿರಿಯ ಮತ್ತು ಮಾಜಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರಿಗೆ ಯಾರಿಗೆ ಹುಟ್ಟಿರಬೇಕು ಎಂದು ನೀವು ಕೇಳುವುದು ಸಭ್ಯತೆಯ ಎಲ್ಲೆಯನ್ನು ಮೀರಿದಂತೆ ಕಾಣುತ್ತದೆ. ಸಂಸ್ಕಾರ ಬಿಟ್ಟು ಅಹಂಕಾರ ನಮ್ಮದಾದರೆ ಸಂಹಾರ ಆ ದೇವರು ನಮಗೆ ಕೊಡುವ ಉತ್ತರವಾಗಿರುತ್ತದೆ” ಎಂದಿದ್ದಾರೆ.

“ರೀ ಸಿ ಟಿ ರವಿಯವರೇ, ನಿಮ್ಮ ರಾಜಕೀಯ ಏನೇ ಇರಲಿ. ನಿಮ್ಮ ಪದ ಬಳಕೆ ಇಷ್ಟೊಂದು ಕೀಳು ಮಟ್ಟವೇ? ನಿಮ್ಮಂಥವರು ರಾಜಕಾರಣಕ್ಕೆ ಕಪ್ಪು ಚುಕ್ಕೆ. ನಾಚಿಕೆ ಆಗಬೇಕು ನಿಮ್ಮ ನಡವಳಿಕೆಗೆ” ಎಂದು ಕುಮಾರಸ್ವಾಮಿ ಎಂಪಿ ಎನ್ನುವವರು ತಿರುಗೇಟು ನೀಡಿದ್ದಾರೆ. ಕಾಂತರಾಜು ಎನ್ನುವವರು ಪ್ರತಿಕ್ರಿಸಿದ್ದು, “ರವಿ ಅಣ್ಣ, ಜಾತಿ ಧರ್ಮ ಬಿಟ್ಟು ನಿಮ್ಮ ಸಾಧನೆ ಏನು ಎನ್ನುವುದನ್ನು ಮೊದಲು ಜನರಿಗೆ ತಿಳಿಸಿ. ಅದರಲ್ಲೂ ಚಿಕ್ಕಮಂಗಳೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು ವಿವರಿಸಿ,” ಎಂದು ವಾಗ್ದಾಳಿ ನಡೆಸಿದ್ದಾರೆ.

“ಸರ್, ಪದಬಳಕೆಯ ಮೇಲೆ ಹಿಡಿತವಿರಲಿ. ನೀವು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು. ಈ ರೀತಿ ಮಾತುಗಳು ಸಮಾಜದಲ್ಲಿ ಶಾಂತಿ ಸಹಬಾಳ್ವೆ ಕದಡುತ್ತವೆ. ನಿಮಗೆಲ್ಲ ರಾಜಕೀಯ ತತ್ವ, ಸಿದ್ಧಾಂತಗಳೇ ಗೊತ್ತಿಲ್ಲ. ನಿಮ್ಮಂಥವರಿಗೆ ಸಮಾಜ ಸೇವೆ ಹೆಸರಿನಲ್ಲಿ ರಾಜಕೀಯ ಏಕೆ ಬೇಕು?” ಎಂದು ಮಹೇಶಗೌಡ್ ಪ್ರಶ್ನಿಸಿದ್ದಾರೆ.

ದೇವರಾಜ್ ಪಾಟೀಲ್ ಎನ್ನುವವರು ಪ್ರತಿಕ್ರಿಯಿಸಿ, “ಈ ನಿಮ್ಮ ನೀಚ ಹೇಳಿಕೆಯಿಂದ ನಿಮ್ಮ ಆಲೋಚನೆ ಮಟ್ಟ ಎಲ್ಲಿದೆ ಎಂದು ತೋರಿಸುತ್ತದೆ. ಯಡಿಯೂರಪ್ಪ, ಜಗದೀಶ ಶೆಟ್ಟರ್, ಮೋದಿ ಅವರು ಮುಸ್ಲಿಂ ಹಬ್ಬದ ದಿನಗಳಲ್ಲಿ ಸಹಜವಾಗಿ ಮುಸ್ಲಿಂ ಸಮುದಾಯದ ವಸ್ತ್ರ ಉಡುಪುಗಳನ್ನು ಧರಿಸಿದ್ದಾರೆ. ಇದು ಬಹುತ್ವ ಭಾರತ. ಬುದ್ಧ, ಬಸವ ,ಸ್ವಾಮಿ ವಿವೇಕನಾಂದ, ಅಂಬೇಡ್ಕರ್ ರ ಭಾರತ‌ ಕಣೋ. ಇಲ್ಲಿ ಯಾರಿಗೆ ಯಾರು ಹುಟ್ಟಿರುವುದಿಲ್ಲ. ಹಾಗೆ ನೋಡಿದ್ರೆ ಸ್ವಾಮಿ ವಿವೇಕಾನಂದರು ತಮ್ಮ ಬರವಣಿಗೆಯಲ್ಲಿ ಮಹಮ್ಮದ್ ಪೈಗಂಬರ್ ರ ಬಗ್ಗೆ ತುಂಬಾ ಹೊಗಳಿದ್ದಾರೆ. ನಿಮ್ಮ ಪ್ರಕಾರ ಸ್ವಾಮಿ ವಿವೇಕನಾಂದರು ಮುಸ್ಲಿಂರಿಗೆ ಹುಟ್ಟಿದ್ದಾರಾ? ನಿಮ್ಮ ಹೇಳಿಕೆ ಸರಿ ಇಲ್ಲ ರವಿ ಸರ್. ರಾಜ್ಯದಲ್ಲಿ ಮಾನ್ಯ ಸಿದ್ದರಾಮಯ್ಯನವರ ವರ್ಚಸ್ಸು ನೋಡಿ ತಾವು ಹತಾಶರಾದ್ದಂತೆ ಕಾಣುತ್ತಿದ್ದು, ನಿಮ್ಮ ಮನಸ್ಥಿತಿ ಕುಗ್ಗಿ ಈ ರೀತಿ ಮಾತನಾಡುತ್ತಿದ್ದೀರಿ” ಅಂತ ತಿರುಗೇಟು ನೀಡಿದ್ದಾರೆ.

ಇನ್ನು, ದಿನೇಶ್ ದೊಡ್ಡಮನೆ ಎನ್ನುವವರು, ಅಯೋಗ್ಯ ಚೀಟಿ ರವಿ ಹಿರಿಯ ನಾಯಕ, ಮಾಜಿ ಸಿಎಂಗೆ ಯಾವ ರೀತಿ ಗೌರವ ನೀಡಬೇಕು ಎನ್ನುವುದನ್ನು ನಿಮ್ಮ ಆರ್ ಎಸ್ ಎಸ್ ಕಲಿಸಿಲ್ಲವೇ? ಅಥವಾ ಅಲ್ಲಿ ಕಲಿಸುವುದು ಇದೇನಾ?” ಎಂದು ಕುಟುಕಿದ್ದಾರೆ.

ಒಟ್ಟಾರೆ ಸಿ ಟಿ ರವಿ ಅವರ ಈ ಒಂದು ಪೋಸ್ಟ್ ಆರ್ ಎಸ್ ಎಸ್, ಬಿಜೆಪಿ ಹಾಗೂ ಪಕ್ಷದ ನಾಯಕರನ್ನು ತೀವ್ರ ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.

Tags: BJPCovid 19ಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿ ಟಿ ರವಿಸಿದ್ದರಾಮಯ್ಯ
Previous Post

11 ಕೋಟಿ ಜನರಿಗೆ 2ನೇ ಹಂತದ ಲಸಿಕೆ ಬಾಕಿಯಿದೆ : ಇಂದು ಕೇಂದ್ರ ಆರೋಗ್ಯ ಸಚಿವಾಲಯದಿಂದ ಸಭೆ!

Next Post

‘ಜುಮ್ಲಾ’ ಆವೃತ್ತಿಯ ಕೋವಿಡ್ ಲಸಿಕೆ ಕಥೆಗಳು ಜನರ ಜೀವ ಉಳಿಸುವುದಿಲ್ಲ: ರಾಹುಲ್ ಗಾಂಧಿ

Related Posts

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..
Top Story

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

by ಪ್ರತಿಧ್ವನಿ
May 23, 2026
0

ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ...

Read moreDetails
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

May 23, 2026
“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

May 23, 2026
ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

May 23, 2026
Next Post
‘ಜುಮ್ಲಾ’ ಆವೃತ್ತಿಯ  ಕೋವಿಡ್ ಲಸಿಕೆ ಕಥೆಗಳು ಜನರ ಜೀವ ಉಳಿಸುವುದಿಲ್ಲ: ರಾಹುಲ್ ಗಾಂಧಿ

'ಜುಮ್ಲಾ' ಆವೃತ್ತಿಯ ಕೋವಿಡ್ ಲಸಿಕೆ ಕಥೆಗಳು ಜನರ ಜೀವ ಉಳಿಸುವುದಿಲ್ಲ: ರಾಹುಲ್ ಗಾಂಧಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada