ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ನೂರು ಕೋಟಿ ವ್ಯಾಕ್ಸಿನೇಷನ್ ನೀಡಿ, ದೇಶದೆಲ್ಲೆಡೆ ಮೈಲುಗಲ್ಲು ಸಾಧಿಸಿದೆ ಎಂದು ಭಾಷಣದಲ್ಲಿ ಹೇಳಿದ್ದಾರೆ. ಆದರೆ, ಈ ವಿಚಾರಕ್ಕೆ ಸಂಬಂಧಿಸಿಸಂತೆ ಎರಡನೇ ಡೋಸ್ ಲಸಿಕೆ ಪಡೆಯುವವರು 11 ಕೋಟಿಯಷ್ಟು ಜನರು ಬಾಕಿಯಿದ್ದಾರೆ. ಈ ಉದ್ದೇಶದಿಂದಲೇ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ದೆಹಲಿಯ ವಿಜ್ಞಾನಭವನದಲ್ಲಿ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜೊತೆ ಆಂತರಿಕ ಸಭೆಯನ್ನು ಕರೆದಿದ್ದಾರೆ.
ಮೂಲಗಳ ಪ್ರಕಾರ, COVID-19 ವ್ಯಾಕ್ಸಿನೇಷನ್ನ ಎರಡನೇ ಡೋಸ್ ಪಡೆಯದೇ ಬಾಕಿ ಉಳಿದವರ ಬಗ್ಗೆ ಸರ್ಕಾರವು ಕಾಳಜಿ ವಹಿಸಿ, ಸಭೆ ನಿಗದಿಪಡಿಸಿದೆ. ಎರಡನೇ ಡೋಸ್ಗೆ ಅರ್ಹರಾಗಿರುವ ಮಂದಿ ಇನ್ನೂ ಲಸಿಕೆ ಪಡೆದೇ ಇಲ್ಲ ಎನ್ನುವುದು ತಿಳಿದುಬಂದಿದೆ.
ಮಿಷನ್ ಮೋಡ್ನಲ್ಲಿ ಲಸಿಕೆಗಳನ್ನು ತೆಗೆದುಕೊಳ್ಳಲು ಎಲ್ಲಾ ರಾಜ್ಯಗಳನ್ನು ಒತ್ತಾಯಿಸಿ, ವಿವಿಧ ವ್ಯಾಕ್ಸಿನೇಷನ್ ಡ್ರೈವ್ಗಳನ್ನು ಉತ್ತೇಜಿಸಲು ಮತ್ತು ‘ಎಲ್ಲರಿಗೂ ವ್ಯಾಕ್ಸಿನೇಷನ್’ ಎಂಬ ಮೋದಿಯವರ ಧ್ಯೇಯವನ್ನು ಉಳಿಸುವುದು ಸಭೆಯ ಮೂಲ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ನಿಗದಿತ ಅಂತರದಲ್ಲಿ ಎರಡೂ ಡೊಸ್ ಪಡೆದ ಬಳಿಕವಷ್ಟೇ ಆ ವ್ಯಕ್ತಿಯ ಲಸಿಕೆ ಪಡೆಯುವ ಪ್ರಕ್ರಿಯೆ ಪೂರ್ವವಾಗುತ್ತದೆ ಮತ್ತು ಲಸಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಆಯಾ ರಾಜ್ಯಗಳಲ್ಲಿ ಹೇರಳವಾಗಿ ಲಸಿಕೆ ಲಭ್ಯವಿದೆ. ಹೀಗಿದ್ದರೂ ಜನರೇಕೆ ಎರಡನೇ ಡೋಸ್ ಪಡೆದಿಲ್ಲ ಎನ್ನುವುದು ಕೇಂದ್ರ ಸರ್ಕಾರಕ್ಕೆ ತಲೆನೋವಾಗಿದೆ.
ಅಕ್ಟೋಬರ್ 21 ರಂದು ಭಾರತವು 100 ಕೋಟಿ ಲಸಿಕೆಗಳನ್ನು ಪೂರೈಸಿದೆ. ಈಗ ಸರ್ಕಾರವು ಎರಡನೇಯ ಡೋಸ್ ಮತ್ತು ಸಂಪೂರ್ಣವಾಗಿ ಲಸಿಕೆ ಪಡೆದವರ ಬಗ್ಗೆ ಅಂಕಿಅಂಶಗಳನ್ನು ಕಲೆಹಾಕುತ್ತಿದೆ. ದೇಶದ ಶೇ. 75 ರಷ್ಟು ಜನರು ಮೊದಲನೇಯ ಡೋಸ್ ಪಡೆದಿದಿದ್ದು, ಶೇ. 31 ರಷ್ಟು ಜನರು ಎರಡೂ ಹಂತದ ಡೋಸ್ ಪಡೆದಿರುತ್ತಾರೆ. ದೇಶದ ಮಕ್ಕಳಿಗೆ ವ್ಯಾಕ್ಸಿನ್ ನೀಡಲು ಈಗಾಗಲೇ ಚಿಂತನೆ ನಡೆಸಲಾಗುತ್ತಿದೆ.ಆದರೆ ಮಕ್ಕಳಿಗೆ ನೀಡುವ ಲಸಿಕೆಯ ಬೆಲೆಯನ್ನು ಇನ್ನು ನಿಗದಿಪಡಿಸಲಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.