ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲಂತೂ ಭಾರೀ ಚರ್ಚೆಗೆ ಗ್ರಾಸವಾದ ವಿಚಾರ ಆರ್ಥಿಕತೆ. ದೇಶ ಆರ್ಥಿಕವಾಗಿ ನೆಲಕಚ್ಚಿದೆ. ಜಿಡಿಪಿ ಪಾತಾಳ ಕಂಡಿದೆ ಎಂದು ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಕೆಂಡಕಾರುತ್ತಲೇ ಇವೆ. ಆದರೀಗ, ಭಾರತಕ್ಕೆ ಆರ್ಥಿಕ ಹೊಡೆತ ಬಿದ್ದಿರುವುದು ಮಾತ್ರ ನಿಜ ಎನ್ನುತ್ತಿವೆ ಮೂಲಗಳು.
ಕಳೆದೊಂದು ವರ್ಷದಿಂದ ಆರ್ಥಿಕ ಹೊಡೆತ ಅನ್ನೋದು ಅಕ್ಷರಶಃ ಭಾರತವನ್ನ ಹೈರಾಣಾಗಿಸಿದೆ. ಸಣ್ಣಪುಟ್ಟ ಕೈಗಾರಿಕೆಗಳು ಆರ್ಥಿಕತೆ ಸುನಾಮಿಗೆ ಸಿಲುಕಿ ನೆಲ ಕಚ್ಚಿವೆ. ದೇಶದ ಪ್ರತಿಷ್ಠಿತ ಕಂಪನಿಗಳೇ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿವೆ. ಇದರಿಂದ ಭಾರತದ ಆರ್ಥಿಕತೆ ಪಾತಾಳ ಸೇರಿದೆ. ಭಾರತದ ಜಿಡಿಪಿ ದಶಕಗಳ ಇಳಿಕೆ ಕಂಡಿದ್ದು, ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹೀಗಿರುವಾಗಲೇ ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಆರ್ಥಿಕ ಸಂಕಷ್ಟದಲ್ಲಿದೆ. ಈ ಪರಿಸ್ಥಿತಿ ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವದ ದೊಡ್ಡಣ್ಣ ಅಮೆರಿಕಾ ಕೂಡ ಈಗ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದೆ. ಅಮೆರಿಕಾ ಹಾಗೂ ಜಪಾನ್ನಲ್ಲಿ ಆರ್ಥಿಕ ಬೆಳವಣಿಗೆ ಕುಂಟುತಿದೆ. ಹಾಗೇ 2019ರಲ್ಲಿ ಜಗತ್ತಿನ ಶೇ.90 ರಷ್ಟು ರಾಷ್ಟ್ರಗಳು ಆರ್ಥಿಕ ಹಿಂಜರಿತಕ್ಕೆ ಒಳಗಾಗಿವೆ ಅಂತ ಐಎಂಎಫ್ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಪುನರುಚ್ಚರಿಸಿದ್ದಾರೆ.
ಜಗತ್ತಿನ ಶೇ. 90ರಷ್ಟು ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ ಉಂಟಾಗಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ. ಎರಡು ವರ್ಷಗಳ ಹಿಂದಿನ ಜಿಡಿಪಿಯನ್ನ ನೋಡೋದಾದ್ರೆ ವಿಶ್ವದ ಶೇ.75ರಷ್ಟು ದೇಶಗಳು ವೇಗವಾಗಿ ಅಭಿವೃದ್ಧಿಯಾಗುತ್ತಿದ್ದವು. ಆದ್ರೆ ಈಗ ಜಾಗತಿಕ ಆರ್ಥಿಕತೆ ಒಂದೇ ಸಮನಾಗಿ ಕುಸಿತ ಕಾಣುತ್ತಿದೆ. 2021ರಲ್ಲಿ ಆರ್ಥಿಕ ಬೆಳವಣಿಗೆ ದಶಕದಲ್ಲೇ ಅತ್ಯಂತ ಕಡಿಮೆ ರೇಟ್ಗೆ ಕುಸಿದಿದೆ ಎಂದು ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ.
ಮುಂದುವರಿದ ರಾಷ್ಟ್ರಗಳ ಕಥೆ ಒಂದು ಕಥೆ. ಇನ್ನೊಂದೆಡೆ ಮುಂದುವರಿಯುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ ಹೇಳತೀರದ ಮಟ್ಟಕ್ಕೆ ತಲುಪಿದೆ. ಚೀನಾದ ವೇಗವಾದ ಬೆಳವಣಿಗೆಯೂ ಕೂಡ ಕ್ರಮೇಣವಾಗಿ ಕಡಿಮೆಯಾಗ್ತಿದ್ದು, 2021 ವಿಶ್ವದ ಆರ್ಥಿಕತೆ ಅತ್ಯಂತ ಕಠಿಣ ವರ್ಷ ಎಂದು ಹೇಳಲಾಗುತ್ತಿದೆ.
ವಿಶ್ವಕ್ಕೆ ದೊಡ್ಡಣ್ಣನಾಗಿ ಮೆರಿಬೇಕು ಎಂಬ ಕನಸು ಹೊತ್ತಿದ್ದ ಅಮೆರಿಕಾ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರೊಂದಿಗೆ ವಿಶ್ವದ ಬಹುತೇಕ ರಾಷ್ಟ್ರಗಳಿಂದು ಆರ್ಥಿಕ ಹಿಂಜರಿತಕ್ಕೆ ಸಿಲುಕಿ ನರಳುತ್ತಿವೆ. ಎಲ್ಲಾ ದೇಶಗಳಿಗೂ ಈ ಸಂಕಷ್ಟದಿಂದ ಸುಧಾರಿಸಿಕೊಳ್ಳಲು ಅಪಾರ ಸಮಯ ಬೇಕಿದೆ ಎನ್ನಲಾಗುತ್ತಿದೆ.
2020-21ರಲ್ಲಿ ಆರ್ಥಿಕತೆಯ ಸ್ಥಿತಿಗತಿ ಬಗ್ಗೆ ಒಂದು ಒಳನೋಟ
1. ಕೋವಿಡ್-19 ಸಾಂಕ್ರಾಮಿಕವು ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಯಿತು, ಇದು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಅತ್ಯಂತ ತೀವ್ರ ಕುಸಿತವಾಗಿದೆ.
2. ಲಾಕ್ಡೌನ್ಗಳು ಮತ್ತು ಸಾಮಾಜಿಕ ಅಂತರದ ಮಾನದಂಡಗಳು ಆಗಲೇ ನಿಧಾನಗತಿಯಲ್ಲಿದ್ದ ಜಾಗತಿಕ ಆರ್ಥಿಕತೆಯನ್ನು ಸ್ಥಗಿತಗೊಳಿಸಿದವು.
3. ಜಾಗತಿಕ ಆರ್ಥಿಕ ಉತ್ಪಾದನೆಯು 2020 ರಲ್ಲಿ 3.5% ರಷ್ಟು ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ (ಐಎಂಎಫ್ ಜನವರಿ 2021 ಅಂದಾಜುಗಳು)
4. ಬಡ್ಡಿ ದರಗಳನ್ನು ಕಡಿಮೆ ಮಾಡುವುದು ಹಾಗೂ ಪರಿಮಾಣಾತ್ಮಕ ಕ್ರಮಗಳು ಮೂಲಕ ಆರ್ಥಿಕತೆಗಳನ್ನು ಬೆಂಬಲಿಸಲು ಜಗತ್ತಿನಾದ್ಯಂತದ ಸರ್ಕಾರಗಳು ಮತ್ತು ಕೇಂದ್ರೀಯ ಬ್ಯಾಂಕುಗಳು ವಿವಿಧ ನೀತಿಗಳನ್ನು ರೂಪಿಸಿವೆ.
5. ಭಾರತವು ನಿಯಂತ್ರಣ, ವಿತ್ತೀಯ, ಹಣಕಾಸು ಮತ್ತು ದೀರ್ಘಕಾಲೀನ ರಚನಾತ್ಮಕ ಸುಧಾರಣೆಗಳು ಎಂಬ ನಾಲ್ಕು ಸ್ತಂಭಗಳ ತಂತ್ರವನ್ನು ಅಳವಡಿಸಿಕೊಂಡಿದೆ.
6. ಸರಿಹೊಂದಿಸಿದ ಹಣಕಾಸಿನ ಮತ್ತು ವಿತ್ತೀಯ ಬೆಂಬಲವನ್ನು ಒದಗಿಸಲಾಯಿತು, ಲಾಕ್ಡೌನ್ ಸಮಯದಲ್ಲಿ ದುರ್ಬಲರಿಗೆ ನೆರವು ನೀಡುವುದು ಮತ್ತು ಅನ್ಲಾಕ್ ಸಂದರ್ಭದಲ್ಲಿ ಬಳಕೆ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು.. ಅನುಕೂಲಕರ ವಿತ್ತೀಯ ನೀತಿಯು ಹೇರಳವಾದ ದ್ರವ್ಯತೆ ಮತ್ತು ಸಾಲಗಾರರಿಗೆ ತಕ್ಷಣದ ಪರಿಹಾರವನ್ನು ಖಾತ್ರಿಗೊಳಿಸಿತು.
7. ಎನ್ಎಸ್ಒನ ಅಂದಾಜಿನ ಪ್ರಕಾರ, ಭಾರತದ ಜಿಡಿಪಿ 2021 ನೇ ಹಣಕಾಸು ವರ್ಷದಲ್ಲಿ (-) 7.7% ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಲಾಗಿದೆ – 2021 ನೇ ಹಣಕಾಸು ವರ್ಷದ ಮೊದಲ ಅರ್ಧವಾರ್ಷಿಕಕ್ಕೆ ಹೋಲಿಸಿದರೆ 2021 ನೇ ಹಣಕಾಸು ವರ್ಷದ ಎರಡನೇ ಅರ್ಧವಾರ್ಷಿಕದಲ್ಲಿ 23.9% ರಷ್ಟು ದೃಢವಾದ ಬೆಳವಣಿಗೆ.
8. 2021-22 ನೇ ಹಣಕಾಸು ವರ್ಷದಲ್ಲಿ ಭಾರತದ ನಿಜವಾದ ಜಿಡಿಪಿ 11.0% ಬೆಳವಣಿಗೆಯನ್ನು ದಾಖಲಿಸಲಿದೆ ಮತ್ತು ನಾಮಮಾತ್ರ (ಹಣದುಬ್ಬರ ಹೊಂದಿಸದ) ಜಿಡಿಪಿ 15.4% ರಷ್ಟು ಏರಿಕೆಯಾಗಲಿದೆ-ಇದು ಸ್ವಾತಂತ್ರ್ಯದ ನಂತರದ ಗರಿಷ್ಠ ಜಿಡಿಪಿ ಬೆಳವಣಿಯಾಗಿದೆ.
9. ಕೋವಿಡ್-19 ಲಸಿಕೆಗಳ ಚಾಲನೆಯೊಂದಿಗೆ ಆರ್ಥಿಕ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳುತ್ತಿವೆ.
ಸರ್ಕಾರಿ ಬಳಕೆ ಮತ್ತು ನಿವ್ವಳ ರಫ್ತುಗಳು ಬೆಳವಣಿಗೆಯು ಮತ್ತಷ್ಟು ಕುಸಿಯುವುದನ್ನು ತಡೆದವು. ಆದರೆ ಹೂಡಿಕೆ ಮತ್ತು ಖಾಸಗಿ ಬಳಕೆಯು ಬೆಳವಣಿಗೆ ಕೆಳಕ್ಕಿಳಿಯಲು ಕಾರಣವಾದವು.
10. 2020-21ನೇ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಸರ್ಕಾರಿ ಬಳಕೆಯಿಂದ ಚೇತರಿಕೆಯು ಶಕ್ತಿಯನ್ನು ಪಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17 ರಷ್ಟು ಬೆಳೆವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ.
11. 2021ನೇ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ರಫ್ತು 5.8% ಮತ್ತು ಆಮದು 11.3% ರಷ್ಟು ಕುಸಿಯುವ ನಿರೀಕ್ಷೆಯಿದೆ. ಭಾರತವು 2021ನೇ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ.2ರಷ್ಟು ಚಾಲ್ತಿ ಖಾತೆ ಹೆಚ್ಚುವರಿ ಹೊಂದಲಿದೆ ಎಂದು ನಿರೀಕ್ಷಿಸಲಾಗಿದೆ, ಇದು 17 ವರ್ಷಗಳ ನಂತರ ಐತಿಹಾಸಿಕ ಗರಿಷ್ಠವಾಗಿದೆ.
12. ಪೂರೈಕೆ ವಲಯದಲ್ಲಿ, ಒಟ್ಟು ಮೌಲ್ಯವರ್ಧಿತ (ಜಿವಿಎ) ಬೆಳವಣಿಗೆಯು 2020-21ನೇ ಹಣಕಾಸು ವರ್ಷದಲ್ಲಿ -7.2% ರಷ್ಟಿರಲಿದೆ ಮತ್ತು 2020ನೇ ಹಣಕಾಸು ವರ್ಷದಲ್ಲಿ 3.9% ರಷ್ಟಿತ್ತು.
13. 2021ನೇ ಹಣಕಾಸು ವರ್ಷದಲ್ಲಿ 3.4% ರಷ್ಟು ಬೆಳವಣಿಗೆಯೊಂದಿಗೆ ಕೃಷಿ ಕ್ಷೇತ್ರವು ಭಾರತದ ಆರ್ಥಿಕತೆಯ ಮೇಲೆ ಕೋವಿಡ್ -19 ಸಾಂಕ್ರಾಮಿಕ ರೋಗದ ಆಘಾತವನ್ನು ಕಡಿಮೆ ಮಾಡಿದೆ.
ಕೈಗಾರಿಕೆ ಮತ್ತು ಸೇವೆಗಳು 2021ನೇ ಹಣಕಾಸು ವರ್ಷದ ಅವಧಿಯಲ್ಲಿ ಕ್ರಮವಾಗಿ 9.6% ಮತ್ತು 8.8% ರಷ್ಟು ಕುಸಿತ ಕಾಣಲಿವೆ ಎಂದು ಅಂದಾಜಿಸಲಾಗಿದೆ.