ಪ್ರಧಾನಿಮಂತ್ರಿಗಳು ದುರಂತಕ್ಕೆ ತೀವ್ರ ಸಂಪಾತ ಸೂಚಿಸಿ ಟ್ವೀಟ್ ಮಾಡಿದ್ದು, “ಸಾವಿನ ವಿಷಯ ಕೇಳಿ ದುಃಖವಾಗಿದೆ. ಇಂತಹ ದುಃಖದ ಹೊತ್ತಲ್ಲಿ ಮೃತದ ಕುಟುಂಬದವರೊಂದಿಗೆ ಮಾನಸಿಕವಾಗಿ ನಾನಿದ್ದೇನೆ” ಎಂದು ಕಂಬನಿ ಮಿಡಿದಿದ್ದಾರೆ.
ಅಕ್ಟೋಬರ್ 7ರ ಬೆಳಗಿನ ಪ್ರಧಾನಮಂತ್ರಿ ಕಾರ್ಯಾಲಯದ ಈ ಟ್ವೀಟ್, ನಾಲ್ವರು ರೈತರ ಮೇಲೆ ಕಾರು ಚಲಾಯಿಸಿದ ತಮ್ಮದೇ ಪಕ್ಷದ, ತಮ್ಮದೇ ಸಂಪುಟದ ಸಚಿವರ ಪುತ್ರನ ಕೃತ್ಯದಲ್ಲಿ ಜೀವಬಿಟ್ಟ ರೈತರ ಕುರಿತು ಎಂದುಕೊಂಡಿದ್ದರೆ, ನೀವು ಮೋಸಹೋಗುತ್ತೀರಿ. ಕಾಂಗ್ರೆಸ್, ಶಿವಸೇನೆ, ಆಮ್ ಆದ್ಮಿ ಮತ್ತಿತರ ಪ್ರತಿಪಕ್ಷಗಳು ಮತ್ತು ರೈತ ಸಂಘಟನೆಗಳು ಸೇರಿದಂತೆ ದೇಶ-ವಿದೇಶದ ನೂರಾರು ವ್ಯಕ್ತಿ- ಸಂಘಟನೆಗಳು ಲಖೀಮ್ ಪುರ್ ಖೇರಿ ದುರಂತದ ಕುರಿತು ಪ್ರಧಾನಿ ಮೋದಿ, ಅವರ ಸರ್ಕಾರ ಮತ್ತು ಅವರ ಪಕ್ಷ ಬಿಜೆಪಿಯ ಮೌನದ ಬಗ್ಗೆ ಕಳೆದ ಐದು ದಿನಗಳಿಂದ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ಆ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮೋದಿಯವರು ಘಟನೆ ನಡೆದ ಮೂರು ದಿನಗಳ ಬಳಿಕ ಮೌನ ಮುರಿದಿದ್ದಾರೆ. ಅನ್ನದಾತರ ಮೇಲಿನ ಪೈಶಾಚಿಕ ಅಟ್ಟಹಾಸಕ್ಕೆ ಮಿಡಿದಿದ್ದಾರೆ ಎಂದುಕೊಂಡರೆ ಅದು ತಪ್ಪು.
ಮೋದಿಯವರ ಕಚೇರಿಯ ಅಧಿಕೃತ ಟ್ವೀಟ್ ಖಾತೆಯಲ್ಲಿ ಇಂದು ಬೆಳಗ್ಗೆ ಕಾಣಿಸಿಕೊಂಡ ಈ ಸಂತಾಪ ಸಂದೇಶ ಲಖೀಮ್ ಪುರ್ ಖೇರಿಯ ಪ್ರತಿಭಟನಾನಿರತ ರೈತರ ಮೇಲೆ ಕಾರು ಚಲಾಯಿಸಿದ ತಮ್ಮ ಸಹೋದ್ಯೋಗಿಯ ಪುತ್ರನ ಕೃತ್ಯದಲ್ಲಿ ಸಾವು ಕಂಡ ನತದೃಷ್ಟರ ಬಗ್ಗೆ ಅಲ್ಲವೇ ಅಲ್ಲ. ಅವರು ಹೀಗೆ ಕಣ್ಣೀರು ಮಿಡಿದಿರುವುದು ಭಾರೀ ಮಳೆಯಿಂದಾಗಿ ಮಳೆ ಕುಸಿದು ಕರ್ನಾಟಕದ ಬೆಳಗಾವಿಯಲ್ಲಿ ಸಂಭವಿಸಿದ ಸಾವಿಗೆ. ಭಾರೀ ಮಳೆಯಿಂದಾಗಿ ಮನೆ ಕುಸಿದು ಒಂದೇ ಮನೆಯ ಆರು ಮಂದಿ ಸಾವು ಕಂಡಿರುವ ದಾರುಣ ಘಟನೆಯ ಬಗ್ಗೆ ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ ಸಂತಾಪ ಹೇಳಿದ್ದಾರೆ. ಅಷ್ಟೇ ಅಲ್ಲ; ಉತ್ತರಪ್ರದೇಶದ ಬಾರಾಬಂಕಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೂ ಗುರುವಾರ ಬೆಳಗ್ಗೆ ಪ್ರಧಾನಮಂತ್ರಿಗಳ ಕಚೇರಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ ಮತ್ತು ಪರಿಹಾರ ಘೋಷಿಸಿದೆ.
ಆದರೆ, ಲಖೀಂಪುರ್ ಖೇರಿಯ ದಾರುಣ ಘಟನೆ ನಡೆದು ಐದು ದಿನಗಳುರುಳಿದರೂ ಪ್ರಧಾನಿ ಮೋದಿಯವರಾಗಲೀ, ಅವರ ಕಚೇರಿಯಾಗಲೀ, ಅಥವಾ ಅವರ ಸರ್ಕಾರವಾಗಲೀ, ಸರ್ಕಾರದ ಯಾವೊಬ್ಬ ಸಚಿವರು, ಅಧಿಕಾರಿಗಳಾಗಲೀ, ಬಿಜೆಪಿ ಪಕ್ಷದ ಯಾವೊಬ್ಬ ನಾಯಕರಾಗಲೀ ಈವರೆಗೆ ಒಂದು ವಿಷಾದದ, ಸಂತಾಪದ ಮಾತು ಆಡಿಲ್ಲ. ಬದಲಾಗಿ, ಘಟನೆಯ ಮಾರನೇ ದಿನ ಸ್ವತಃ ಪ್ರಧಾನಿ ಲಖೀಂಪುರ ಸಮೀಪದಲ್ಲೇ ಹಾದುಹೋಗಿ, ಉತ್ತರಪ್ರದೇಶದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ ಸಂತ್ರಸ್ತರ ಸಮಾಧಾನ ಮಾಡುವ ಪ್ರಯತ್ನವಾಗಲೀ, ಕನಿಷ್ಟ ತಮ್ಮದೇ ಪಕ್ಷದ ಸಚಿವರ ಮಗನ ಕೃತ್ಯದಲ್ಲಿ ಮಡಿದವರಿಗೆ ಒಂದು ಸಂತಾಪದ ಮಾತನ್ನಾಗಲೀ ಆಡಲಿಲ್ಲ!
ಬದಲಾಗಿ, ಸಂತ್ರಸ್ತರ ಭೇಟಿ ಮಾಡದಂತೆ, ಘಟನಾ ಸ್ಥಳಕ್ಕೆ ಹೋಗದಂತೆ ಪ್ರತಿಪಕ್ಷ ನಾಯಕರು, ರೈತ ಮುಖಂಡರನ್ನು ತಡೆದು, ಬಂಧಿಸಿ, ಗೃಹ ಬಂಧನದಲ್ಲಿಟ್ಟು ತೀರಾ ಪೈಶಾಚಿಕ ವರ್ತನೆ ತೋರಲಾಯಿತು. ಕನಿಷ್ಟ ಮನುಷ್ಯತ್ವವನ್ನೂ ಮರೆತು ಕೇಂದ್ರ ಮತ್ತು ಉತ್ತರಪ್ರದೇಶದ ಬಿಜೆಪಿ ಆಡಳಿತಗಳು ಈ ದುರಂತವನ್ನು ನಿರ್ವಹಿಸಿದ ರೀತಿ ಇದೀಗ ದೇಶ-ವಿದೇಶಗಳಲ್ಲಿ ಚರ್ಚೆಯ ವಸ್ತುವಾಗಿದೆ. ಒಂದು ಕಡೆ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋದ ಪ್ರತಿ ಪಕ್ಷ ನಾಯಕರನ್ನು ಹೀನಾಯವಾಗಿ ಬಂಧಿಸಿ, ಬಲಪ್ರಯೋಗದಿಂದ ಕೂಡಿಹಾಕಿದ್ದರೆ, ಸ್ವತಃ ಜೀಪು ಚಲಾಯಿಸಿ ನಾಲ್ವರು ರೈತರು ಸೇರಿದಂತೆ ದುರಂತದಲ್ಲಿ ಎಂಟು ಮಂದಿ ಸಾವನ್ನಪ್ಪಲು ಮೂಲ ಕಾರಣನಾದ ಇಡೀ ಹತ್ಯಾಕಾಂಡದ ರೂವಾರಿ ಎನ್ನಲಾಗುತ್ತಿರುವ ಕೇಂದ್ರ ಸಚಿವ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ರಾಜಾರೋಷವಾಗಿ ಓಡಾಡಿಕೊಂಡು, ಟಿವಿ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾನೆ! ಅದರಲ್ಲೂ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿರುವಾಗ ಕೂಡ ಪೊಲೀಸರು ಕನಿಷ್ಟ ವಿಚಾರಣೆಗಾಗಿ ಕೂಡ ಆತನನ್ನು ವಶಕ್ಕೆ ಪಡೆಯದೆ ಆತನಿಗೆ ರಕ್ಷಣೆ ನೀಡಿ ಆತನ ಭದ್ರತೆಗೆ ನಿಂತಿರುವುದು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಉತ್ತರಪ್ರದೇಶದ ಬಿಜೆಪಿ ಸರ್ಕಾರ ತಲುಪಿರುವ ಮಟ್ಟಕ್ಕೆ ಸಾಕ್ಷಿಯಾಗಿದೆ.
ಆಳುವ ಮಂದಿ ಮತ್ತು ಸರ್ಕಾರದ ಇಂತಹ ಹೇಯ ನಡೆ ದೇಶದ ಪೊಲೀಸ್ ವ್ಯವಸ್ಥೆ, ಕಾನೂನು ಮತ್ತು ನ್ಯಾಯಾಂಗದ ಮೇಲಿನ ಜನಸಾಮಾನ್ಯರ ನಂಬಿಕೆಯನ್ನೇ ಕಳಚಲಿದೆ. ಲಖೀಂಪುರ ಖೇರಿ ಘಟನೆಯ ಬಳಿಕ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹಾಗೂ ಅವರ ಸರ್ಕಾರಗಳ ಇಂತಹ ಅಪಾಯಕಾರಿ ಧೋರಣೆಯ ಹಿನ್ನೆಲೆಯಲ್ಲೇ ಸುಪ್ರೀಂಕೋರ್ಟ್ ಸ್ವತಃ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ಆ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಇದೀಗ ಸುಪ್ರೀಂಕೋರ್ಟ್ ನತ್ತ ನೆಟ್ಟಿವೆ!