ಪುರುಷರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರದಲ್ಲು ಹೆಣ್ಣು ಮಕ್ಕಳು ಪುರುಷರಷ್ಟೆ ಸರಿಸಮಾನವಾಗಿ ಸಾಧನೆ ಮಾಡುತ್ತ ಮುನ್ನಡೆಯುತ್ತಿರುವ ಹೆಣ್ಣುಮಕ್ಕಳು ಹೆತ್ತವರಿಗೆ ಎಂದಿಗು ಭಾರ ಎಂಬುದನ್ನ ಎಂಬುವ ಪರಿಸಸ್ಥಿತಿ ಇನ್ನು ಬದಲಾಗಿಲ್ಲ.
ವಯಸ್ಸಿಗೆ ಬರುವ ಮೊದಲೇ ಹೆಣ್ಣು ಮಕ್ಕಳ ಮೇಲೆ ಸಂಸಾರ ನೌಕೆಯ ಭಾರ ಹೊರಿಸುವ ಬಾಲ್ಯ ವಿವಾಹ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿದ್ದು ಇದರಲ್ಲಿ, ನಮ್ಮ ರಾಜ್ಯ ಕರ್ನಾಟಕ ಅಗ್ರಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
2020ರಲ್ಲಿ ರಾಜ್ಯಾದ್ಯಂತ 184 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿದು ಪರಿಸ್ಥಿತಿಯ ಗಂಬೀರತೆಗೆ ಕೈಗನ್ನಡಿಯಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (NCRB) ಬಿಡುಗಡೆ ಮಾಡಿರುವ ವಿಶೇಷ ವರದಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ.
ಕರೋನ ಬರುವುದಕ್ಕು ಮುನ್ನ ಮತ್ತು ಬಂದ ನಂತರ ಬಾಲ್ಯ ವಿವಾಹಗಳಲ್ಲಿ ಶೇಕಡ 50%ರಷ್ಟು ಪ್ರಕರಣಗಳು ಏರಿಕೆಯಾಗಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಆದರೆ, ಯಾವ ಪ್ರಕರಣ ಸಹ ಪೊಲೀಸ್ ಠಾಣೆ ಮೆಟ್ಟಿಲೇರದಿರುವುದು ಕಂಡು ಬರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ನೋಡುತ್ತಾ ಹೋದರೆ ವರ್ಷದಿಂದ ವರ್ಷಕ್ಕೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ 2018ರಲ್ಲಿ 501,2019ರಲ್ಲಿ 523, 2020ರಲ್ಲಿ 785 ಪಕ್ರರಣಗಳು ವರದಿಯಾಗಿದೆ.
ಕರ್ನಾಟಕದಲ್ಲಿ 2018ರಲ್ಲಿ 73 ಪ್ರಕರಣಗಳು ದಾಖಲಾದರೆ, 2019ರಲ್ಲಿ 111 ಪ್ರಕರಣಗಳು ದಾಖಲಾಗಿವೆ, 2020ರಲ್ಲಿ 184 ಪ್ರಕರಣಗಳು ದಾಖಲಾಗಿ ದೇಶದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹ ನಡೆಯುವ ರಾಜ್ಯ ಎಂಬ ಅಪಕೀರ್ತಿಗೆ ಪಾತ್ರವಾಗಿದೆ. ಅಸ್ಸಾಂ ಎರಡನೇ ಸ್ಥಾನದಲ್ಲಿದ್ದು ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿವೆ.
ಕರ್ನಾಟಕದಲ್ಲಿ ನೋಡುವುದಾದರೆ ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೋವಿಡ್ನಿಂದ ಶಾಲೆಗಳು ಮುಚ್ಚಿದ ಕಾರಣ ಬಾಲ್ಯ ವಿವಾಹ ಪ್ರಕರಣಗೂ ಹೆಚ್ಚಾಗಿ ದಾಖಲಾಗಿವೆ. ಹಳೇ ಮೈಸೂರು, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿ ರಜ್ಯದ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ.
ಜಿಲ್ಲೆಗಳ ಪೈಕಿ ಧಾರವಾಡ ಮೊದಲನೇ ಸ್ಥಾನದಲ್ಲಿದರೆ, ಹಾವೇರಿ, ಚಾಮರಾಜನಗರ, ಬಳ್ಳಾರಿ, ರಾಯಚೂರು, ಕೊಪ್ಪಳ, ಮೈಸೂರು, ಹಾಸನ, ಚಿತ್ರದುರ್ಗ, ಉಡುಪಿ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ ನಂತರದ ಸ್ಥಾನಗಳಲಿದೆ.
ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರತಿ ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಮತ್ತು ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಈ ಸಮಿತಿ ಸಭೆ ನಡೆಸಿ ಬಾಲ್ಯ ವಿವಾಹವನ್ನು ತಡೆಗಟ್ಟಲು ಕ್ರಮಗಳನ್ನು ಜಾರಿಗೆ ತರುತ್ತದೆ ಮತ್ತು ಈ ಅಭಿಯಾನಕ್ಕೆ ಕೆಲವು ಎನ್ಜಿಒಗಳು ಸಹಕಾರ ನೀಡುತ್ತಿದು ಬಾಲ್ಯ ವಿವಾಹ ತಡೆಗಟ್ಟಲು ನೂತನ ಕ್ರಮಗಳನ್ನು ಜಾರಿಗೆ ತರಲು ಇಲಾಖೆ ಚಿಂತಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.